ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿಷಾಹಾರ ಸೇವನೆ: 36 ಮಕ್ಕಳು ಅಸ್ವಸ್ಥ

Srinivasa Murthy VN
Updated On : 24 Aug 2013, 11:45 am

ಕೆಂಭಾವಿ: ಬೆಳಗಿನ ಉಪಾಹಾರ ಸೇವಿಸಿ ಯಾದಗಿರಿ ಜಿಲ್ಲೆಯ ಕೆಂಭಾವಿ ಸಮೀಪದ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ಶಾಲೆಯ 36 ವಿದ್ಯಾರ್ಥಿಗಳು ಶುಕ್ರವಾರ ಅಸ್ವಸ್ಥಗೊಂಡಿದ್ದಾರೆ.  ಉಪಾಹಾರವಾಗಿ ನೀಡಿದ್ದ ಅವಲಕ್ಕಿ ವಗ್ಗರಣೆಯನ್ನು ತಿಂದು ಶಾಲೆಗೆ ಆಗಮಿಸಿದ್ದ ಕೆಲವು ವಿದ್ಯಾರ್ಥಿಗಳು ಪ್ರಾರ್ಥನೆ ವೇಳೆ ಹೊಟ್ಟೆ ನೋವೆಂದು ವಾಂತಿ ಮಾಡಿಕೊಂಡರು. ತಕ್ಷಣ ಎಂಟು ವಿದ್ಯಾರ್ಥಿಗಳನ್ನು ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಯಿತು. ನಂತರ ಉಪಾಹಾರ ಸೇವಿಸಿದ ಎಲ್ಲ ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಎಲ್ಲ ವಿದ್ಯಾರ್ಥಿಗಳನ್ನೂ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಂಕರಗೌಡ ಮೂಲಿಮನಿ ತಪಾಸಣೆ ನಡೆಸಿ, ಸದ್ಯ ಯಾವುದೇ ಅಪಾಯವಿಲ್ಲ. ವಿದ್ಯಾರ್ಥಿಗಳು ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement