ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾರಟಗಿಯಲ್ಲೊಂದು ಬಿಳಿ ಕಾಗೆ!

Srinivasa Murthy VN
Updated On : 26 Aug 2013, 11:56 am

ಕಾರಟಗಿ: ಕಾಗೆ ಅಂದ ತಕ್ಷಣ ನಮ್ಮ ಕಣ್ಮುಂದೆ ಬರುವುದು ಕೇವಲ ಕಪ್ಪು ವರ್ಣ. ಆದರೆ, ಇಲ್ಲೊಂದು ಬಿಳಿ ಕಾಗೆ ಪ್ರತ್ಯಕ್ಷವಾಗಿದೆ! ನಾವೇನು ಕಾಗೆ ಹಾರಿಸ್ತಿದೀವಿ ಅನ್ಕೋಬೇಡಿ. ಇದು ಸತ್ಯ. ಕಳೆದ ಭಾನುವಾರ ಬೆಳಗ್ಗೆ ಕಾರಟಗಿ ಪಟ್ಟಣದ ಬೂದುಗುಂಪಾ ರಸ್ತೆಯಲ್ಲಿನ ಮೀಸೆ ರಾಮಣ್ಣ ಎಂಬವರ ಮನೆ ಅಂಗಳದಲ್ಲಿ ಬಿಳಿ ಬಣ್ಣದ ಕಾಗೆಯೊಂದು ಕಾಣಿಸಿಕೊಂಡಿದೆ. ಐದಾರೂ ದಿನಗಳ ಹಿಂದೆಯೇ ಈ ಕಾಗೆ ಮನೆ ಮುಂದಿನ ಜಮೀನಿನಲ್ಲಿ ಕಾಣಿಸಿಕೊಂಡಿತ್ತು. ಕುತೂಹಲಕ್ಕೆ ಇದನ್ನು ಗಮನಿಸಿದ ಮೀಸೆ ರಾಮಣ್ಣ ಅವರ ಮೊಮ್ಮಗ ಶಿವರಾಜ್ ಹಿಡಿದುಕೊಂಡು ಬಂದು ನೀರು ಕುಡಿಸಿ ಒಂದೆರಡು ಕಾಳು ಹಾಕಿದ್ದಾನೆ. ಹೀಗಾಗಿ ಮೀಸೆ ರಾಮಣ್ಣ ಅವರ ಮನೆಯನ್ನೇ ತನ್ನ ವಾಸಸ್ಥಾನ ಮಾಡಿಕೊಂಡಿದೆ. ಬಿಳಿ ಕಾಗೆ ಸುದ್ದಿ ಗೊತ್ತಾಗುತ್ತಿದ್ದಂತೆ ಸುತ್ತಲಿನ ಜನ ನೋಡಲು ಮುಗಿ ಬಿದ್ದಿದ್ದಾರೆ.

ಆರ್ಟಿಪಿಎಸ್: 2ನೇ ಘಟಕ ಸ್ಥಗಿತ
ರಾಯಚೂರು:
ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎರಡನೇ ಘಟಕವು ಭಾನುವಾರ ರಾತ್ರಿ ತಾಂತ್ರಿಕ ದೋಷದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ವಿದ್ಯುತ್ ಕೇಂದ್ರದ 2ನೇ ಘಟಕದಲ್ಲಿ ಕಂಡುಬಂದ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದು, ಸದ್ಯ ವಿದ್ಯುತ್ ಕೇಂದ್ರದ 1ನೇ ಘಟಕವು ವಾರ್ಷಿಕ ದುರಸ್ತಿಯಲ್ಲಿದೆ. ಸದ್ಯ ಆರು ಘಟಕಗಳಿಂದ ಸೋಮವಾರ ಬೆಳಗ್ಗೆವರೆಗೆ 22ಮಿಲಿಯನ್ ಯೂನಿಟ್ ವಿದ್ಯುತ್ ರಾಜ್ಯಕ್ಕೆ ರವಾನಿಸಲಾಗಿದೆ ಎಂದು ಆರ್ ಟಿಪಿಎಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement