ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಸ್‌ಟಿಗೆ ಸೇರಿಸಲು ಕೋಲಿ ಸಮಾಜ ಸಿಎಂಗೆ ಮನವಿ

Srinivasa Murthy VN
Updated On : 24 Dec 2013, 10:00 am

ಯಾದಗಿರಿ: ರಾಜ್ಯದಲ್ಲಿನ ಸುಮಾರು 50 ಲಕ್ಷ ಜನಸಂಖ್ಯೆಯಳ್ಳ ಟೋಕರೆ ಕೋಲಿ ಸಮಾಜದರ ಅಭಿವೃದ್ಧಿಗಾಗಿ ಎಸ್‌ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸರ್ಕಾರದಿಂದ ಅಂಬಿಗರ ಚೌಡಯ್ಯ ಜಯಂತಿಯಂದು ರಜೆ ಘೋಷಣೆ ಮಾಡಲು ಒತ್ತಾಯಿಸಿ ಜಿಲ್ಲಾ ಟೋಕರಿ ಸಮಾಜದಿಂದ ಸಿಎಂಗೆ ಮನವಿ ಸಲ್ಲಿಸಲಾಯಿತು.
ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಮತ್ತಿತರರು ಸಿಎಂಗೆ ಮನವಿ ಸಲ್ಲಿಸಿ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.
ಹಾವೇರಿ ಜಿಲ್ಲೆಯ ಚೌಡದಾನಪೂರದಲ್ಲಿ ಅಂಬಿಗರ ಚೌಡಯ್ಯನ ಪೀಠಕ್ಕೆ ಈ ಹಿಂದೆ ರಾಜ್ಯ ಸರ್ಕಾರ 2ಕೋಟಿ ಬಿಡುಗಡೆ ಮಾಡಿತ್ತು. ಈಗಾಗಲೇ 1ಕೋಟಿ ಬಿಡುಗಡೆ ಆಗಿದ್ದು, ಉಳಿದ 1ಕೋಟಿ ತಕ್ಷಣ ಬಿಡುಗಡೆ ಮಾಡಬೇಕು ಎಂದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಅಂಬಿಗರ ಚೌಡಯ್ಯ ಜಯಂತಿ ಒಂದು ವಾರದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶೋಭಾ ಎಸ್. ಬಾಣಿ ಜಿಪಂ ಸದಸ್ಯರು, ಶಿವಪುತ್ರಪ್ಪ ಕಣಿ, ಶಿವಕುಮಾರ ನಾಟೇಕಾರ, ನಾಂಗೇಂದ್ರಪ್ಪ ಇಟಗಿ ಭೂತಾಳಿ, ರಾಜಶೇಖರ, ರಾಮಲಿಂಗ ನಾಟೇಕಾರ, ಶರಣು ಡೊಣಗಾಂವ, ಹಾಗೂ ವಿಠ್ಠಲ ಹೆರೂರ್ ಅಭಿಮಾಗಳ ಬಳಗದ ಪದಾಧಿಕಾರಿಗಳು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement