ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿಕ್ಷಣದಿಂದ ಮೂಢನಂಬಿಕೆ ನಿವಾರಣೆ

Srinivasa Murthy VN
Updated On : 11 Mar 2013, 12:11 pm

ಚಿಂಚೋಳಿ: ತಾಂಡಗಳಲ್ಲಿರುವ ಮೂಢನಂಬಿಕೆ ಮತ್ತು ಅಂಧಶ್ರದ್ದೆ ಅನಿಷ್ಟ ಪದ್ಧತಿಗಳಿಂದ ದೂರವಿರಬೇಕು. ವೈ ಜ್ಞಾನಿಕವಾಗಿ ವಿಚಾರ ಮಾಡಿ, ಉತ್ತಮ ಜೀವನ ನಡೆಸಬೇಕು. ಮೂಢನಂಬಿಕೆಗಳನ್ನು ತೊಲಗಿಸಲು ಶಿಕ್ಷಣ ಅತಿ ಮುಖ್ಯವಾಗಿದೆ. ಎಲ್ಲ ಸಮಾಜದವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂದು ಸುಕ್ಷೇತ್ರ ಸೋನ್ಯಾಲಗಿರಿ 'ಕಬ್ಬಿಣಗುತ್ತಿ'  ಸಂತ ತಪಸ್ವಿ ಪಂಚಾಕ್ಷರಿ ಪರ್ವತಲಿಂಗ ಪರಮೇಶ್ವರ ಮಹಾರಾಜರು ಭಕ್ತರಿಗೆ ಆಶೀರ್ವಚನ ನೀಡಿದರು.
ಲಕ್ಷದೀಪೋತ್ಸವ: ತಾಲೂಕಿನ ಸುಕ್ಷೇತ್ರ ಸೋನ್ಯಾಲಗಿರಿಯಲ್ಲಿ ರವಿವಾರ ಲಿಂಗ ಪ್ರತಿಷ್ಠಾನ, ಧ್ಯಾನಮಂದಿರ ಉದ್ಘಾಟನೆ 101 ಸಾಮೂಹಿಕ ವಿವಾಹ, ಲಕ್ಷದೀಪೋತ್ಸವ ಮತ್ತು ಕಳಸಾರೋಹಣ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಜನರ ಬದುಕಿನಲ್ಲಿ ಮೂಢನಂಬಿಕೆಗಳು ಹೆಚ್ಚುತ್ತಿವೆ. ಇವುಗಳನ್ನು ತೊಲಗಿಸಬೇಕಾದರೆ ಶಿಕ್ಷಣ ಪಡೆದುಕೊಳ್ಳುವುದು ಅತಿ ಮುಖ್ಯವಾಗಿದೆ. ತಾಂಡಗಳಲ್ಲಿ ಅನೇಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ದುಶ್ಚಟಗಳಿಂದ ದೂರವಿರದ್ದರೆ ಉತ್ತಮ ಆರೋಗ್ಯದಿಂದ ಜೀವನ ಸಾಗಿಸಲು ಸಾಧ್ಯವಿದೆ ನೂತನ ದಂಪತಿಗಳು ಒಬ್ಬರಿಗೊಬ್ಬರು ಅರಿತುಕೊಂಡು ಜೀವನ ಸಾಗಿಸಿ ಎಂದರು.
ಕಾಯಕ ಮುಖ್ಯ: ಮಹಾರಾಷ್ಟ್ರದ ತೀರ್ಥಕ್ಷೇತ್ರ ಶಕ್ತಿ ಪೀಠ ಪೌರಾದೇವಿ ಜಗದ್ಗುರು ಸಂತ ಮಹಾ ತಪಸ್ವಿ ಡಾ.ರಾಮರಾವ್ ಮಹಾರಾಜ ಮಾತನಾಡಿ, ಬಂಜಾರ ಸಮಾಜದ ಎಲ್ಲರೂ ಪರಿಶ್ರಮ ಮತ್ತು ಕಾಯಕ ಮಾಡಿ ಮುಂದೆ ಬರಬೇಕು ಎಲ್ಲರೊಂದಿಗೆ ಅನ್ಯೋನ್ಯವಾಗಿ ತಾಂಡಗಳಲ್ಲಿ ಜೀವನ ಸಾಗಿಸಬೇಕು, ಸುಳ್ಳು ವಂಚನೆ, ಧೂಮಪಾನ ಮತ್ತು ದುಶ್ಚಟಗಳಿಂದ ದೂರವಿರಬೇಕು ಎಂದರು.
ಕಾರ್ಯಕ್ರಮದ ಸ್ವಾಗತವನ್ನು ಡಾ. ಉಮೇಶ ಜಾಧವ್ ಮಾಡಿದರು. ಸುಭಾಶ ರಾಠೋಡ್ ನಿರೂಪಿಸಿದರು.
ಶಾಮರಾವ್ ರಾಠೋಡ ವಂದಿಸಿದರು, ಕಾರ್ಯಕ್ರಮದಲ್ಲಿ ಬಂಜಾರ ಸಮಾಜದ ಧರ್ಮಗುರು ಬಳಿರಾಮ ಜೇಮಸಿಂಗ ಮಹಾರಾಜ್, ಸಚಿವ ರೇವುನಾಯಕ ಬೆಳಮಗಿ, ಶಾಸಕ ವಾಲ್ಮೀಕಿ ನಾಯಕ,  ಮಾಜಿ ಸಚಿವ ಸುನೀಲ್ ವಲ್ಯಾಪೂರೆ,ವೈಜನಾಥ ಪಾಟೀಲ್,ವಿಠಲ್ ಜಾಧವ್ ದೇವಲಾ ನಾಯಕ, ಡಾ. ತುಕಾರಾಮ ಪವಾರ, ಬಾಬು ಚವ್ಹಾಣ, ಜಿಪಂ ಸದಸ್ಯೆ ರೇಣುಕಾ ರಾಠೋಡ್, ನಾಮದೇವ ಕರಹರಿ, ಬಾಬು ಹೊನ್ನಾ ನಾಯಕ, ಜಗದೇವ ಗುತ್ತೇದಾರ್, ಅನುಸುಯಾ ಪ್ರೇಮಸಿಂಗ, ಇತರ ಬಂಜಾರ ಸಮಾಜದ ನಾಯಕರು ಭಾಗವಹಿಸಿದರು.

'ಬಂಜಾರರ ಅಭಿವೃದ್ಧಿಗೆ ರು. 40 ಕೋಟಿ'
ಚಿಂಚೋಳಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಅಲ್ಪಸಂಖ್ಯಾತರು ಮತ್ತು ಬಂಜಾರ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಬಿಜೆಪಿ ಸರಕಾರದಿಂದ 40 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಸಿ.ನಾರಾಯಣ ಸ್ವಾಮಿ ಹೇಳಿದರು.
ತಾಲೂಕಿನ ಪಂಗರಗಾ ಗ್ರಾಮದ ಸುಕ್ಷೇತ್ರ ಸೋನ್ಯಾಲಗಿರಿದಲ್ಲಿ ಶಿವರಾತ್ರಿ ನಿಮಿತ್ತ ಪರ್ವತಲಿಂಗ ಪರಮೇಶ್ವರ ಮಹಾರಾಜರ ಧಾರ್ಮಿಕ ಪುಣ್ಯಕ್ಷೇತ್ರದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಚಾಲನೆ ನೀಡಿದರು.  ದಲಿತ ಹಿಂದುಳಿದ ವರ್ಗ ಮತ್ತು ಬಂಜಾರ ಸಮುದಾಯಗಳಿಗೆ ಮುಖ್ಯವಾಹಿನಿಗೆ ತರಲು ಸಂತರು ಸನ್ಯಾಸಿಗಳು ಇರಲಿಲ್ಲ. ಈಗ ಎಲ್ಲ ಸಮುದಾಯದಲ್ಲಿ ಸಂತರು ಸನ್ಯಾಸಿಗಳಿದ್ದು, ಧಾರ್ಮಿಕ ನೆಲೆಗಟ್ಟಿನ ಮೇಲೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಅಭಿವೃದ್ಧಿ: ರಾಜ್ಯ ಬಿಜೆಪಿ ಸರಕಾರದಿಂದ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಬಂಜಾರ ಸಮಾಜದ ಅಭಿವೃದ್ಧಿಗಾಗಿ  3 ವರ್ಷಗಳಲ್ಲಿ 150 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದರು.
ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮುಖಾಂತರ ಅಭಿವೃದ್ಧಿಯಾಗಬೇಕು. ನೂತನ ದಂಪತಿಗಳು ಆದರ್ಶ ದಂಪತಿಗಳಾಗಿ ಜೀವನ ನಡೆಸಬೇಕೆಂದು ಸಮಾಜ ಕಲ್ಯಾಣ ಸಚಿವ ಸಿ.ನಾರಾಯಣ ಸ್ವಾಮಿ ಸಲಹೆ ನೀಡಿದರು.
ಸಚಿವ ರೇವು ನಾಯಕ ಬೆಳಮಗಿ ಅದ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಕಣ್ಮಣಿಯಾಗಿ ಪರಿಶ್ರಮಪಟ್ಟು ಪರ್ವತಲಿಂಗ ಪರಮೇಶ್ವರ ಮಹಾರಾಜರು ಆಶೀರ್ವಾದ ಮುಖಾಂತರ ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.
ಹುಲಸೂರು ಶಿವಾನಂದ ಸ್ವಾಮೀಜಿ ಮಾತನಾಡಿ, ಹಿರಿಯರ ವಿಚಾರಗಳು ನಂಬಿದರೆ ಜೀವನ ಹಸನಾಗುವುದು ಎಂದರು.
ಶ್ರೀ ಪರ್ವತಲಿಂದ ಪರಮೇಶ್ವರ ಮಹಾರಾಜರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಮಾಜಿ ಸಚಿವರಾದ ವೈಜನಾಥ ಪಾಟೀಲ್, ಸುನೀಲ್ ವಲ್ಯಾಪೂರೆ ಮಾತನಾಡಿದರು. ಸಿಂಡಿಕೇಟ್ ಸದಸ್ಯ ಸುಭಾಶ ರಾಠೋಡ್ ಪ್ರಾಸ್ತಾವಿಕ ಮಾತನಾಡಿದರು.
ಡಾ. ಉಮೇಶ ಜಾಧವ್, ಶಾಮರಾವ್ ರಾಠೋಡ್ ನಿ ರೂಪಿಸಿದರು. ಬಾಬು ಪವಾರ ವಂದಿಸಿದರು. ಜೇಮಸಿಂಗ್ ಮಹಾರಾಜ್ ಬಳಿರಾಮ ನೂತನ ದಂಪತಿಗಳಿಗೆ ಶುಭ ಹಾರೈಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement