ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಚ್‌ಡಿಕೆ ಆಡಳಿತವೇ ಗೆಲವಿಗೆ ದಾರಿ: ಕಾಡ್ಲೂರ

Srinivasa Murthy VN
Updated On : 3 May 2013, 10:33 am

ಯಾದಗಿರಿ: ಎಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಅಧಿಕಾರಾವಧಿಯಲ್ಲಿ ಕೈಗೊಂಡ ರೈತಪರ ಹಾಗೂ ಜನಪರ ಕಾರ್ಯಕ್ರಮಗಳೇ ಕ್ಷೇತ್ರದಲ್ಲಿ ನನ್ನ ಗೆಲವಿಗೆ ದಾರಿಯಾಗಿದೆ. ಆದ್ದರಿಂದ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಬಾವುಟ ಹಾರುವುದು ನಿಶ್ಚಿತ ಎಂದು ಅಭ್ಯರ್ಥಿ ಎ.ಸಿ.ಕಾಡ್ಲೂರ ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚಿನ ಆದ್ಯತೆ: ನಗರದ ವಿವಿಧ ವಾರ್ಡುಗಳಲ್ಲಿ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಅದರಲ್ಲೂ ಹೈಕ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿ ಈ ಭಾಗದ ಜನರಿಗೆ ನೆಮ್ಮದಿಯ ಬದುಕು ರೂಪಿಸಿಕೊಟ್ಟಿರುವುದೇ ನಮ್ಮ ಗೆಲವಿಗೆ ಶ್ರೀರಕ್ಷೆ. ಯಾದಗಿರಿ ಮತಕ್ಷೇತ್ರದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಪಣ ತೊಟ್ಟಿದ್ದು, ಜನತೆ ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಎಸ್.ಪಿ.ನಾಡೇಕರ್, ದೇಶದಲ್ಲಿಯೇ ಅಲ್ಪಸಂಖ್ಯಾತರಿಗೆ ಎಲ್ಲಾ ರಂಗಗಳಲ್ಲಿ ಮೀಸಲಾತಿ ಒದಗಿಸಿ ಕೊಟ್ಟಿದ್ದು ಜೆಡಿಎಸ್ ಮಾತ್ರ. ಅದಕ್ಕಾಗಿ ದಲಿತರು, ಹಿಂದುಳಿದವರು, ಅಲ್ಪಾಸಂಖ್ಯಾತರು, ಕೃಷಿ ಕಾರ್ಮಿಕರು ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು  ಬಸವರಾಜ್ ಚಂಡ್ರಿಕಿ, ವಿಶ್ವನಾಥ ಸಿರವಾರ, ಡಾ.ಫರವೇಜ್ ಕಾಡ್ಲೂರ್, ಆರೀಫ್ ಕಾಡ್ಲೂರ್, ಇನಾಯಿತ್, ಮಹ್ಮದ್ ಇಸಾಕ್ ಸೇಟ್, ಜಾಕೀರೋದಿನ್, ಮರೇಪ್ಪ ಚಟ್ಟೇರಣಕರ್, ಗೋಪಾಲ ತಳಗೇರಿ, ಶರಣು ನಾಟೇಕರ, ಶರಣಪ್ಪ ಅರಿಕೇರಿ, ರಾಜು ಗೋವಾ, ಶಂಕರ ಶೀರಗೋಳ, ಮಲ್ಲಿಕಾರ್ಜುನ ಜಿನಕೇರಿ, ಬಾಲಪ್ಪ ಸುಂಗಲಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement