ನಗರದಲ್ಲಿ ಬಿಜೆಪಿ ಬಿರುಸಿನ ಪ್ರಚಾರ
ಯಾದಗಿರಿ: ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರಗೌಡ ಮಾಗನೂರ ನಗರದ ವಿವಿಧ ವಾರ್ಡುಗಳಲ್ಲಿ ಪಾದಯಾತ್ರೆ ಕೈಗೊಂಡು ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ಮತದಾರರು ಮತ್ತೆ ಬಿಜೆಪಿ ಬೆಂಬಲಿಸಲಿದ್ದಾರೆ. ಕಳೆದ 50 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿವೆ. ಬಿಜೆಪಿ ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ರಾಜ್ಯ ಹಿಂದೆಂದೂ ಕಾಣದಂಥ ಅಭಿವೃದ್ಧಿ ಕಂಡಿದೆ. ಆದ್ದರಿಂದ ಈ ಬಾರಿ ಕ್ಷೇತ್ರದ ಜನತೆ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾದಗಿರಿ ಮತಕ್ಷೇತ್ರದಲ್ಲಿ ಪ್ರಮುಖ ಸಮಸ್ಯೆಗಳಾದ ರಸ್ತೆ ಮತ್ತು ಕೊನೆಯಂಚಿನ ರೈತರಿಗೆ ನೀರಿನ ಸಮಸ್ಯೆಗಳು ಪ್ರಮುಖವಾಗಿವೆ. ತಾವು ಶಾಸಕರಾಗಿ ಆಯ್ಕೆಯಾದರೆ ಈ ಸಮಸ್ಯೆಗೆ ಇತಿಶ್ರೀ ಹೇಳಲು ಕ್ರಮ ಕೈಗೊಳ್ಳುತ್ತೇನೆ. ಈ ಬಾರಿ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ ಬಿಜೆಪಿಯನ್ನು ಬೆಂಬಲಿಸುವು ನಿಶ್ವಿತ.
ನಾನು ಆಯ್ಕೆಯಾದರೆ ಯಾದಗಿರಿ ಮತಕ್ಷೇತ್ರದಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದ ಅವರು, ಮತದಾರರು ಬಿಜೆಪಿ ಕೈ ಬಲಪಡಿಸುವಂತೆ ಮನವಿ ಮಾಡಿಕೊಂಡರು. ಕ್ಷೇತ್ರಕ್ಕೆ ಯುವ ಮುಖಗಳ ಅವಶ್ಯಕತೆ ಇದೆ. ಹೀಗಾಗಿ ಮತದಾರರು ನನ್ನನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಮುಖಂಡರಾದ ಲಗಮಣ್ಣ ಮುಂಡರಗಿ, ಮಹೆಂದ್ರಪ್ಪ, ಎಚ್.ಆರ್. ಶಿವಮೂರ್ತಿ, ಕೆ.ಮಲ್ಲಿಕಾರ್ಜುನ ಸ್ವಾಮಿ, ಟಿ.ಎಚ್. ಬಿರಾದಾರ, ಸುಭಾಶ ರಾಠೋಡ, ರಾಜು ಯಡ್ಡಳ್ಳಿ ಇದ್ದರು.
ರೋಡ್ ಶೋ ಮೂಲಕ ಮಾಲಕರೆಡ್ಡಿ ಮತಯಾಚನೆ
ಯಾದಗಿರಿ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎ.ಬಿ. ಮಾಲಕರೆಡ್ಡಿ ಅವರು ಪಕ್ಷದ ಅಪಾರ ಕಾರ್ಯಕರ್ತರೊಂದಿಗೆ ನಗರದಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದರು.
ನಗರದ ವಾರ್ಡ್ ನಂ.2ರಿಂದ 10ನೇ ವಾರ್ಡಿನವರೆಗೆ ತೆರಳಿ ಮತ ಯಾಚಿಸಿದರು. ಗಾಂಧಿ ವೃತ್ತ, ಚಕ್ರಕಟ್ಟಾ, ಮೈಲಾಪುರ ಬೇಸ್, ಅಂಬೇಡ್ಕರ್ ನಗರಗಳ ಮೂಲಕ ರೋಡ್ ಶೋ ನಡೆಸಿ ಅಮೂಲ್ಯ ಮತವನ್ನು ಕಾಂಗ್ರೆಸ್ ಹಾಕುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಲಾಯಕ ಹುಸೇನ್ ಬಾದಲ್, ಫಜಲುರ್ ರೆಹಮಾನ್, ಮಲ್ಲಣ್ಣ ದಾಸನಕೇರಿ, ಮರೆಪ್ಪ ಈಟೆ, ಅಜೀತ ದೋಖಾ, ಡಾ.ಶರಣಗೌಡ ಅರಿಕೇರಿ, ಶ್ರೀನಿವಾಸರೆಡ್ಡಿ ಕಂದಕೂರ, ಸತೀಶ ಕಂದಕೂರ, ಸತ್ಯನಾರಾಯಣ ಗೌರ, ದಿನೇಶ ಶರ್ಮಾ, ಚನ್ನಪ್ಪಾ ಅಲ್ಲಿಪುರ, ಜಿತೇಂದ್ರ ದೇಶಮುಖ, ಮಹ್ಮದ ಫಯಾಜ್, ಇಸ್ಮಾಯಿಲ್ ಮೆಹೆತ್ತರ, ಶಾಮಸನ್ ಮಾಳಿಕೇರಿ, ಶಿವಕುಮಾರ ದೊಡ್ಡಮನಿ, ವಿನಾಯಕ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
ರಾಜುಗೌಡ ಹ್ಯಾಟ್ರಿಕ್ ಗೆಲವು ಖಚಿತ
ಸುರಪುರ: ಎರಡು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿ ಕಳಂಕ ರಹಿತ ಆಡಳಿತ ನೀಡಿದ ರಾಜುಗೌಡ ಹ್ಯಾಟ್ರಿಕ್ ಗೆಲವು ಪಡೆಯುವುದರಲ್ಲಿ ಅನುಮಾನವಿಲ್ಲ ಎಂದು ಜೆಡಿಎಸ್ ಮುಖಂಡ ಶಂಕರ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುಗೌಡರ ನೂರಾರು ಬೆಂಬಲಿಗರೊಂದಿಗೆ ರೋಡ್ ಶೋ ಮೂಲಕ ಬಿರುಸಿನ ಮತಯಾಚನೆ ಮಾಡಿ ಮಾತನಾಡಿದರು. ಅಭಿವೃದ್ಧಿಯನ್ನೇ ತಮ್ಮ ಮೂಲ ಮಂತ್ರಮಾಡಿಕೊಂಡಿರುವ ರಾಜುಗೌಡರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರು. ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದರಿಂದ ಕ್ಷೇತ್ರದೆಲ್ಲಡೆ ರಾಜುಗೌಡರ ಬಗ್ಗೆ ಜನ ಒಲವು ತೋರುತ್ತಿದ್ದಾರೆ. ಹೀಗಾಗಿ ಈ ಬಾರಿ ಹೆಚ್ಚಿನ ಮತಗಳಿಂದ ಗೆಲ್ಲಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಯುವ ಮುಖಂಡರಾದ ರಾಜಾ ರಾಮಪ್ಪ ನಾಯಕ ಜೇಜಿ, ಪಾರಪ್ಪ ಗುತ್ತೇದಾರ, ದತ್ತು ಗುತ್ತೇದಾರ, ಜಯರಾಮ ನಾಯಕ, ಶರಣು ಶಾಂತಪೂರ, ಅಪ್ಪಾರಾವ ನಾಯಕ, ವಿಜಯಕುಮಾರ ಚಿಟಿ, ಭೀಮಣ್ಣ ಬೇವಿನಾಳ, ಹಣಮಂತ ಸಾಗರ ಇತರರು ಇದ್ದರು.