10 ಪಿಎಚ್‌ಸಿಗಳಲ್ಲಿ ಮತದಾನ ಜಾಗೃತಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 3
ನಗರ ಪ್ರದೇಶದಲ್ಲಿ ಶೇ.40ಕ್ಕಿಂತ ಕಡಿಮೆ ಮತದಾನವಾದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ನಗರದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮತದಾರರ ಜಾಗಣತಿ ಜಾಥಾಗಳನ್ನು ಗುರುವಾರದಂದು ಹಮ್ಮಿಕೊಳ್ಳಲಾಯಿತು.
ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ಅವರು ನ್ಯೂ ರಹೆಮತ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ನ್ಯೂ ರಹೆಮತ್ ನಗರದ ಮಹಿಳಾ ಮತದಾರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಈ ಜಾಥಾ ನ್ಯೂ ರಹೆಮತ್ ನಗರದ ಗಲ್ಲಿ ಗಲ್ಲಿಗಳಲ್ಲಿ ಘೋಷಣಾ ವಾಕ್ಯಗಳನ್ನು ಘೋಷಿಸುತ್ತ ಸಾಗಿತು. ಇದೇ ವೇಳೆ ಗಾಂಧೀಜಿಯ ಮೂರು ಮಂಗಗಳು ಸಾರುವ ಸಂದೇಶದ ಕಿರು ಪ್ರದರ್ಶನವನ್ನು ಕೈಗೊಳ್ಳಲಾಯಿತು. ಕೊನೆಯಲ್ಲಿ ಉರ್ದು ಭಾಷೆಯಲ್ಲಿ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರತ್ನಾ ಬಿ. ಕಲಂದಾನಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಶರಣಪ್ಪ, ವೈದ್ಯಾಧಿಕಾರಿ ಡಾ. ಶರಣಬಸಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಣ್ಣ, ಮೇಲ್ವಿಚಾರಕಿಯರಾದ ದೀಪಾ, ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.
ಶಿವಾಜಿನಗರ, ಮಾಣಿಕೇಶ್ವರಿ ನಗರ, ಹೀರಾಪುರ, ಮಕ್ತಂಪುರ, ಸೇಂಟ್ ಜಾನ್ ಆ್ಯಂಬುಲನ್ಸ್, ಖಾನಾಪುರ, ತಾರಫೈಲ್, ಅಶೋಕನಗರ, ಶಹಾಬಜಾರಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಜಾಥಾವನ್ನು ಏಕಕಾಲದಲ್ಲಿ ಹಮ್ಮಿಕೊಳ್ಳಲಾಯಿತು.
ಗುಲ್ಬರ್ಗ; ದಂಡಾಧಿಕಾರಿಗಳ ನೇಮಕ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 3
ಬಿ.ವೈ ಐನಾಪುರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೆಎನ್‌ಎನ್‌ಎಲ್ ಭೀಮಾ ಏತ ನೀರಾವರಿ ಯೋಜನೆ ಅಫಜಲ್ಪುರ, ಮೊ. 9448104769- ಗುಲ್ಬರ್ಗ ತಾಲೂಕಿನ ಬುದ್ಧವಿಹಾರ ಹತ್ತಿರದ ಚೆಕ್‌ಪೋಸ್ಟ್. ಸುಭಾಷ ಮೇತ್ರೆ ಸಹಾಯಕ ಅಭಿಯಂತರರು ಕೆಎನ್‌ಎನ್‌ಎಲ್ ಗಂಡೋರಿ ನಾಲಾ ಯೋಜನೆ ಮಹಾಗಾಂವ ಉಪವಿಭಾಗ ಸಂಖ್ಯೆ-3 ಮೊ. 9448604213- ಗುಲ್ಬರ್ಗ ತಾಲೂಕಿನ ಕೆಐಎಡಿಬಿ ಕೈಗಾರಿಕಾ ಪ್ರದೇಶ ಹುಮನಬಾದ್ ರಸ್ತೆ ಚೆಕ್‌ಪೋಸ್ಟ್ ಮತ್ತು ವಿಜ್ಞೇಶ ಸಹಾಯಕ ಅಭಿಯಂತರರು ಕೆಎನ್‌ಎನ್‌ಎಲ್, ಐಪಿಸಿ ವೃತ್ತ ಗುಲ್ಬರ್ಗ ಮೊ. 7411314246- ಗುಲ್ಬರ್ಗ ನಗರದ ಹಾಗರಗಾ ಚೆಕ್‌ಪೋಸ್ಟ್.
ಮಕ್ಕಳ ಭವಿಷ್ಯಕ್ಕೆ ಪಾಟೀಲರನ್ನು ಗೆಲ್ಲಿಸಿ
ಕನ್ನಡಪ್ರಭ ವಾರ್ತೆ ಸೇಡಂ ಮೇ 3
ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಾಣಕ್ಕಾಗಿ ವೈಜನಾಥ ಪಾಟೀಲರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಅವರ ಪುತ್ರ ವಿಕ್ರಂ ಪಾಟೀಲ್ ಕೋರಿದರು.
ತಾಲೂಕಿನ ಬಟಗೇರಾ (ಕೆ) ಗ್ರಾಮದಲ್ಲಿ ನಡೆದ ಕೆಜೆಪಿ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ವೈಜನಾಥ ಪಾಟೀಲರು ಹಿಡಿದ ಕಾರ್ಯವನ್ನು ಮುಗಿಸುವವರೆಗೂ ಮಲಗುವವರಲ್ಲ. ಅಂತವರನ್ನು ಗೆಲ್ಲಿಸಿ ಮುಂದಿನ ಪೀಳಿಗೆಯ ಜೀರ್ಣೋದ್ದಾರಕ್ಕೆ ಸಹಕರಿಸಲು ಕೋರಿದರು.
ನರಸಿಂಗರಾವ ದುಬಾಸೆ ಮಾತನಾಡಿದರು. ಬಸವರಾಜ ಪಾಟೀಲ್, ವೀರಣ್ಣ ಪಾಟೀಲ್, ವೀರಣ್ಣ ಮಾಲಿಪಾಟೀಲ್, ಅಂಬರೀಶ ಸ್ವಾಮಿ, ಮೋಹನರೆಡ್ಡಿ, ರಾಜು ಬಿಬ್ಬಳ್ಳಿ, ಮಾಣಿಕಪ್ಪ ವಿಶ್ವಕರ್ಮ, ವೀರಶೆಟ್ಟಿ ಪಂದಗಳ, ಮನೋಹರ ರೆಡ್ಡಿ ಇದ್ದರು.