ಚಿಂಚೋಳಿ; ಚುನಾವಣೆಗೆ ಸಕಲ ಸಿದ್ಧತೆ
ಕನ್ನಡಪ್ರಭ ವಾರ್ತೆ ಚಿಂಚೋಳಿ ಮೇ 3
ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರಕ್ಕೆ ಮೇ 5ರಂದು ನಡೆಯುವ ಸಾರ್ವತ್ರಿಕ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಿ. ಮಂಜುನಾಥ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಚಿಂಚೋಳಿ ಮತ್ತು ಕಾಳಗಿ ವಲಯ ಸೇರಿದಂತೆ ಒಟ್ಟು ಮತದಾರರ ಸಂಖ್ಯೆ- 1,69,181 ಇದ್ದು, ಅವುಗಳ ಪೈಕಿ ಪುರುಷರು- 87,415 ಮತ್ತು ಮಹಿಳೆಯರು- 81,755 ಹೊಂದಿದ್ದಾರೆ. ಚಿಂಚೋಳಿ ಮತಕ್ಷೇತಕ್ಕೆ 224 ಮತಗಟ್ಟೆ ಕೇಂದ್ರಗಳಿದ್ದು, ಹೆಚ್ಚುವರಿಯಾಗಿ 2 ಮತಗಟ್ಟೆ ಕೇಂದ್ರ ತೆರೆಯಲಾಗಿದೆ. ಪ್ರತಿಯೊಂದು ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿ- 1 ಮತ್ತು ಸಹಾಯಕ ಮತಗಟ್ಟೆ ಅಧಿಕಾರಿ- 1 ಸೇರಿದಂತೆ ಒಂದು ಮತಗಟ್ಟೆ ಕೇಂದ್ರಕ್ಕೆ 7 ಸಿಬ್ಬಂದಿ ನೇಮಿಸಲಾಗಿದೆ ಎಂದರು.
ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳು- 23, ಸೂಕ್ಷ್ಮ ಮತಗಟ್ಟೆ ಕೇಂದ್ರಗಳು- 40 ಹಾಗೂ ಸಾಮಾನ್ಯ ಮತಗಟ್ಟೆ ಕೇಂದ್ರಗಳು- 161 ಇವೆ. ವಿದ್ಯುನ್ಮಾನ ಮತಯಂತ್ರಗಳನ್ನು ಕೊಂಡ್ಯೊಯಲು ಮತ್ತು ಸಿಬ್ಬಂದಿಗೆ ಸರ್ಕಾರಿ ಬಸ್ಸುಗಳು- 29, ಮ್ಯಾಕ್ಸಿ ಕ್ಯಾಬ್- 5, ಕ್ರೂಸರ್- 46, ಟಾಟಾ ಸುಮೋ- 7, ಜೀಪ್- 29, ಟಾಟಾ ಎಸಿ- 3 ಒಟ್ಟು 90 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ಮತ್ತು ಸುಸೂತ್ರವಾಗಿ ನಡೆಸಲು 78 ಪ್ಯಾರಾ ಮಿಲ್ಟ್ರಿ ಸೇನೆ- 76 ನೇಮಿಸಿಕೊಳ್ಳಲಾಗಿದೆ. ಚುನಾವಣಾ ಮಾರ್ಗ(ರೂಟ್ ಆಫೀಸರ್) 21 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಚುನಾವಣೆಯಲ್ಲಿ 247 ವಿದ್ಯುನ್ಮಾನ ಮತ ಯಂತ್ರಗಳಿವೆ. 260 ಸಿಬ್ಬಂದಿಯನ್ನು ಮೀಸಲು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿಬ್ಬಂದಿ ಜನಾರ್ದನ ರೆಡ್ಡಿ ಪಾಟೀಲ್, ಮಲ್ಲಿಕಾರ್ಜುನ ಪಾಲಾಮೂರ, ಶ್ರೀನಿವಾಸ ಪಾಟೀಲ್, ಜಗನ್ನಾಥರೆಡ್ಡಿ ರಂಜೋಳ ಇದ್ದರು.