ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮನೆ ಮನೆಗೆ 'ದರ್ಶನ'

Srinivasa Murthy VN
Updated On : 4 May 2013, 10:50 am

ಶಹಾಪುರ: ಮತಕ್ಷೇತ್ರದ ಜನತೆ ಅಭಿವೃದ್ಧಿ ಕಾರ್ಯ ನೋಡಿ ಬೆಂಬಲಿಸುತ್ತ ಬಂದಿದ್ದು, 3ನೇ ಬಾರಿಗೆ ನನ್ನನ್ನು ಮತದಾರರು ಆಶೀರ್ವದಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
  ಬಹಿರಂಗ ಪ್ರಚಾರದ ಕೊನೆಯ ದಿನವಾದ ಶುಕ್ರವಾರ ಪಟ್ಟಣದಲ್ಲಿ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 ಪಟ್ಟಣದಲ್ಲಿ ಹಿಂದಿನ ಅವಧಿಯಲ್ಲಿ ವಿವಿಧ ಅನುದಾನ ಕ್ರೋಡೀಕರಿಸಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು ಪ್ರಜ್ಞಾವಂತ ಮತದಾರರ ಗಮನದಲ್ಲಿದೆ. ಮುಂದಿನ ದಿನಗಳಲ್ಲಿ ಶಹಾಪುರ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಪಟ್ಟಣದಲ್ಲಿನ ಬಡಾವಣೆಗಳಲ್ಲಿ ಉತ್ತಮ ರಸ್ತೆಗಳು, ಹೊಸ ಬಡಾವಣೆಗಳಿಗೆ ಕುಡಿವ ನೀರಿಗಾಗಿ ಪೈಪ್‌ಲೈನ್ ಜೋಡಣೆ, ಮುಖ್ಯವಾಗಿ ಒಳಚರಂಡಿ ಯೋಜನೆ, ಸಮರ್ಪಕ ವಿದ್ಯುತ್ ಇವುಗಳಿಗೆ ಆದ್ಯತೆಯಾಗಿವೆ. ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿಸುವ ಗುರಿಯಿದ್ದು, ಇದಕ್ಕಾಗಿ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
  ಹಿರಿಯ ಮುಖಂಡರಾದ ಚಂದ್ರಶೇಖರ ಆರಬೋಳ, ಬಸವರಾಜೇಂದ್ರ ದೇಶಮುಖ, ಸುರೇಂದ್ರ ಪಾಟೀಲ ಮಡ್ನಾಳ, ಸಿದ್ಲಿಂಗಣ್ಣ ಆನೇಗುಂದಿ, ಸಣ್ಣನಿಂಗಣ್ಣ ನಾಯ್ಕೋಡಿ, ಬಸವರಾಜ ಹೇರುಂಡಿ, ಶೇಖ ಮುಸ್ತಫಾ, ಸಲೀಂ ಸಂಗ್ರಾಮ, ನೀಲಕಂಠ ಬಡಿಗೇರ, ಗುಂಡಪ್ಪ ತುಂಬಗಿ, ಗ್ಯಾನಪ್ಪ ಅಣಬಿ, ಎಸ್.ಎನ್. ಖಾದ್ರಿ, ಮಲ್ಲಿಕಾರ್ಜುನ ಪೂಜಾರಿ, ಮಾನಪ್ಪ ಮಕ್ತಾಪುರ, ರುದ್ರಣ್ಣ ಚಟ್ರಿಕಿ, ಚನ್ನಯ್ಯಸ್ವಾಮಿ, ರಾಯಪ್ಪಗೌಡ, ಬಸನಗೌಡ ಮರ್ಕಲ್, ಚಂದ್ರಶೇಖರ ಸಾಲಿಮನಿ, ನಾಗಪ್ಪ ತಹಸೀಲ್ದಾರ, ಬಸವರಾಜ ಕಡಗಂಚಿ, ಸೈಯದ್ ಮುಸ್ತಫಾ, ಮಲ್ಲೇಶಿ ಮಮದಾಪುರ, ಶಿವಕುಮಾರ ಬಿಲ್ಲಂಕೊಂಡಿ, ಇಸ್ಮಾಯಿಲ್ ಚಾಂದ್, ಶೇಖ್ ಆಬಿದ್ ಇತರರು ಇದ್ದರು. ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.

ಡಾ. ಮಾಲಕರೆಡ್ಡಿ ಮತಯಾಚನೆ
ಯಾದಗಿರಿ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಎ.ಬಿ. ಮಾಲಕರೆಡ್ಡಿ ಅವರು ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ನಗರದ ಮೈಲಾಪುರ ಬೇಸ್‌ನಿಂದ ತರೆದ ಜೀಪ್‌ನಲ್ಲಿ ಶುಕ್ರವಾರ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು. ನಗರದ ಮೈಲಾಪುರ ಬೇಸ್‌ನಿಂದ ಚಕ್ರಕಟ್ಟಾ, ಗಾಂಧಿ ವೃತ್ತದ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಅಂಬೇಡ್ಕರ್ ನಗರದವರೆಗೆ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಬೆಂಬಲಿಸುವಂತೆ ಘೋಷಣೆ ಹಾಕುತ್ತ ಪಾದಯಾತ್ರೆ ಮೂಲಕ ಸಾಗಿದರು. ಮಾಲಕರೆಡ್ಡಿ ಅವರು ಎಲ್ಲರತ್ತ ಕೈ ಬೀಸಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ಮುಖಂಡರಾದ ಲಾಯಕ ಹುಸೇನ್ ಬಾದಲ್, ಫಜ್‌ಲುರ್ ರಹೇಮಾನ, ಮಲ್ಲಣ್ಣ ದಾಸನಕೇರಿ, ಮರೆಪ್ಪ ಈಟೆ, ಅಜೀತ ದೋಖಾ, ಡಾ. ಶರಣಗೌಡ ಅರಿಕೇರಿ, ಶ್ರೀನಿವಾಸರೆಡ್ಡಿ ಕಂದಕೂರ, ಸತೀಶ ಕಂದಕೂರ, ಶ್ಯಾಮಸನ್ ಮಾಳಿಕೇರಿ, ಶಿವಕುಮಾರ ದೊಡ್ಡಮನಿ, ವಿನಾಯಕ ಪಾಟೀಲ, ಸುರೇಶ ಜೈನ್ ಇದ್ದರು.
ಗ್ರಾಮೀಣಾಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತನೀಡಿ: ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯವಿದೆ. ರಾಮರಾಜ್ಯದ ಕಲ್ಪನೆ ಹೊಂದಿರುವ ಕಾಂಗ್ರೆಸ್‌ನಿಂದ ಮಾತ್ರ ಗ್ರಾಮಗಳ ಸುಧಾರಣೆ ಸಾಧ್ಯ. ಗ್ರಾಮೀಣ ಸುಧಾರಣೆ ಗುರಿ ಹೊಂದಿರುವ ಕಾಂಗ್ರೆಸ್‌ಗೆ ಮತ ನೀಡುವಂತೆ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಮನವಿ ಮಾಡಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಪ್ರಚಾರ ನಡೆಸಿ ಬಿರುಸಿನ ಮತಯಾಚನೆ ಮಾಡಿ ಮಾತನಾಡಿದರು. ಗ್ರಾಮಗಳ ಕನಸು ಇಲ್ಲದ ಬಿಜೆಪಿಗೆ ರಾಜ್ಯದಲ್ಲಿ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement