ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯೋಚಿಸಿ ಮತದಾನ ಮಾಡಿ: ರಾಜುಗೌಡ

Srinivasa Murthy VN
Updated On : 4 May 2013, 10:50 am

ಕನ್ನಡಪ್ರಭ ವಾರ್ತೆ, ಸುರಪುರ, ಮೇ 3
ಅಧಿಕಾರವಿದ್ದಾಗ ಏನನ್ನೂ ಮಾಡದವರ ಮಾತಿಗೆ ಮರುಳಾಗಿ ದುಡುಕಿನಿಂದ ಅಧಿಕಾರ ನೀಡಿದರೆ ಐದು ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸಮಸ್ಯೆಗೆ ಸ್ಪಂದಿಸಿ ಅಭಿವೃದ್ಧಿಗೆ ಗಮನ ನೀಡುವವರು ಯಾರೆಂಬುದನ್ನು ಯೋಚಿಸಿ ಮತನೀಡಿ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಮತದಾರರಲ್ಲಿ ಮನವಿ ಮಾಡಿದರು.
  ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಮತಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಯೋಚಿಸಿ ಮತದಾನ ಮಾಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈಜ ಸ್ವಾತಂತ್ರ್ಯ, ನೆಮ್ಮದಿ, ನಿರ್ಭೀತಿಯ ಬದುಕು, ಸೌಹಾರ್ದತೆಯ ವಾತಾವರಣ ಕಲ್ಪಿಸುವುದು ಜನಪ್ರತಿನಿಧಿಯ ಆದ್ಯ ಕರ್ತವ್ಯ. ಈ ಎಲ್ಲ ಸೌಕರ್ಯಗಳನ್ನು ಯಾವ ಶಾಸಕರು ಒದಗಿಸಿದರು, ಎಲ್ಲ ಜಾತಿ ಜನಾಂಗದವರಿಗೆ ಅಧಿಕಾರ ನೀಡಿದ್ದು ಯಾರು, ಸಮಸ್ಯೆಗೆ ಸ್ಪಂದಿಸಿದ್ದು ಯಾರು ಎಂಬುದನ್ನು ಯೋಚಿಸಿ. ಎಲ್ಲ ಸಮುದಾಯಗಳಿಗೆ ಭವನ, ಕಲ್ಯಾಣ ಮಂಟಪ ನಿರ್ಮಾಣವಾದದ್ದು ಯಾರ ಅವಧಿಯಲ್ಲಿ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡಿದವರು ಯಾರು ಎಂದು ಅಳೆದು ತೂಗಿ ನೋಡಿ ಮತನೀಡಿ. ಅಭಿವೃದ್ಧಿಗೆ ಸ್ಪಂದಿಸಿದ ನನಗೆ ಮತ್ತೊಮ್ಮೆ ಆಶೀರ್ವದಿಸಿದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿ ತೋರಿಸುತ್ತೇನೆಂದು ಭರವಸೆ ನೀಡಿದರು.
  ಕಾಲುವೆಯ ನವೀಕರಣ, ನೀರಾವರಿ ವಂಚಿತರಿಗೆ ಬೋನಾಳ, ರಾಜನಕೋಳೂರು ಏತನೀರಾವರಿ ನಿರ್ಮಾಣ, ಹಲವಾರು ಪಿಕಪ್, ಚೆಕ್ ಡ್ಯಾಂಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದೇನೆ. ಹುಣಸಗಿ, ಸುರಪುರಗಳಲ್ಲಿ ರೈತರಿಗಾಗಿ ಉಗ್ರಾಣ ಗೋದಾಮ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಘಟಕ, ಅಗ್ನಿ ಶಾಮಕ ಠಾಣೆ, ಶೈಕ್ಷಣಿಕ ಸುಧಾರಣೆಗಾಗಿ ಶಾಲಾ- ಕಾಲೇಜುಗಳ ನಿರ್ಮಾಣ ಮಾಡಿದ್ದೇನೆ. ಇದೆಲ್ಲವೂ ಯಾರ ಅವಧಿಯಲ್ಲಿ ಮಾಡಲಾಗಿದೆ ಎಂದು ಯೋಚಿಸಿ ಮತ ನೀಡಿ ಎಂದು ಮನವಿ ಮಾಡಿದರು.
  ಯಲ್ಲಪ್ಪ ಕುರುಕುಂದಿ, ರಾಜಾ ಹನುಮಪ್ಪ ನಾಯಕ, ನಿಂಗಣ್ಣ ಬಾದ್ಯಾಪುರ, ಧರ್ಮರಾಜ, ದುರ್ಗಪ್ಪ, ಪರಮಣ್ಣ, ರಾಜಾ ಲಕ್ಷ್ಮೀನಾರಾಯಣ, ಪಾರಪ್ಪ, ಜಯರಾಂ, ರಾಜಾರಾಮಪ್ಪ ಇತರರು ಇದ್ದರು.

'ಎಲ್ಲೆಡೆ ಉತ್ತಮ ಪ್ರತಿಕ್ರಿಯೆ'
ಹುಣಸಗಿ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಜೆಡಿಎಸ್‌ಗೆ ಮತ ನೀಡುವಂತೆ ರಾಜುಗೌಡ ಮತದಾರರಲ್ಲಿ ಮನವಿ ಮಾಡಿದರು.
 ಗ್ರಾಮೀಣ ಪ್ರದೇಶದ ರೈತರ ಹಿತ ಕಾಪಾಡುವ ಪಕ್ಷೆವೆಂದರೆ ಅದು ಜೆಡಿಎಸ್ ಮಾತ್ರ. ಬೆಲೆಯೇರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್ ಶ್ರೀಮಂತರ ಪಕ್ಷವಾಗಿದೆ. ರಾಜ್ಯದಲ್ಲಿ ಸುಭದ್ರ ಸರ್ಕಾರ ರಚಿಸಲು ಜೆಡಿಎಸ್‌ಗೆ ಮತ ನೀಡುವ ಮೂಲಕ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿಕೊಂಡರು.
ಕುಮಾರಸ್ವಾಮಿ ಆಡಳಿತದ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮ ಕೈಗೊಂಡಿರುವ ಅವರ ಕೈ ಬಲಪಡಿಸಲು ಜೆಡಿಎಸ್ ಬೆಂಬಲಿಸಬೇಕು. ಗ್ರಾಮ ವಾಸ್ತವ್ಯ ಮಾಡಿ ಗ್ರಾಮೀಣ ಜನತೆಗೆ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಒಂದಿಲ್ಲೊಂದು ಭ್ರಷ್ಟಾಚಾರದಲ್ಲಿ ತೊಡಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದ್ದರಿಂದ ಈ ಬಾರಿ ಜೆಡಿಎಸ್ ಬೆಂಬಲಿಸುವ ಮೂಲಕ ನನ್ನ ಗೆಲವಿಗೆ ಸಹಕರಿಸಿ ಎಂದರು.
 ಮುಖಂಡರಾದ ನಾಗಣ್ಣ ದಂಡಿನ್, ವೀರೇಶ ಚಿಂಚೋಳಿ, ಬಸವರಾಜಸ್ವಾಮಿ, ದಂಡಿನ್, ಬಸನಗೌಡ, ಕೊಣ್ಣೂರು, ಸಿದ್ರಾಮಪ್ಪ, ರಾಜಶೇಖರ, ಸುರೇಶ ದೊರೆ, ರಾಚಯ್ಯಸ್ವಾಮಿ, ತಿಪ್ಪಣ್ಣ, ಬಸಣ್ಣ ದೊರೆ, ಸೋಮಶೇಖರ, ಚನ್ನಯ್ಯ, ಮಲ್ಲಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement