ಧಾರ್ಮಿಕ ವಸಂತ ಶಿಬಿರ ಸಂಪನ್ನ
ಗುಲ್ಬರ್ಗ: ಧಾರ್ಮಿಕ ವಸಂತ ಶಿಬಿರವು ಜೇವರ್ಗಿ ಕಾಲೋನಿಯ ರಾಯರ ಮಠದಲ್ಲಿ ಭಾನುವಾರ ಶ್ರೀಪಾದಂಗಳವರ ಸನ್ನಿಧಾನದಲ್ಲಿ ಸಂಪನ್ನಗೊಂಡಿತ್ತು.
ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು, 50ಕ್ಕೂ ಹೆಚ್ಚು ಸ್ತ್ರೀಯರು ಈ ಶಿಬಿರದ ಲಾಭ ಪಡೆದುಕೊಂಡರು. ಸ್ತೋತ್ರ ಮಂತ್ರ ಪಾಠವನ್ನು ಪೂರ್ಣಪ್ರಜ್ಞ ವಿದ್ಯಾಪೀಠದ ಬೆಂಗಳೂರು ಪಂಡಿತರು ನಡೆಸಿಕೊಟ್ಟರು. ಸಂಯೋಜಕರಾಗಿ ನವಲಿ ಕೃಷ್ಣಾಚಾರ್ಯರು ವಹಿಸಿಕೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಸುವೀದ್ಯೇಂದ್ರ ತೀರ್ಥರು ಎಲ್ಲ ಶಿಬಿರದ ವಿದ್ಯಾರ್ಥಿಗಳಿಗೆ ಅನುಗ್ರಹ ಮಾಡುವ ಮೂಲಕ ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಿದರು. ಅಧ್ಯಾಪಕರಾದ ಸುಶೀಲೇಂದ್ರಾಚಾರ್ಯ ಗೋಗಿ, ಪಾಂಡುರಂಗಾಚಾರ್ಯ ಪುರೋಹಿತ, ಟಿ. ಮುರುಳಿ, ರಾಮಾಚಾರ್ಯ ಇದ್ದರು.
ವಿವೇಕಾನಂದ ಶಾಲೆಗೆ ಶೇ. 100 ಫಲಿತಾಂಶ
ಸುರಪುರ: ಸಮೀಪದ ರಂಗಪೇಟೆಯ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢಶಾಲೆಯು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದೆ. 13 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 6 ವಿದ್ಯಾರ್ಥಿನಿಯರು ಪ್ರಥಮ, ಓರ್ವ ವಿದ್ಯಾರ್ಥಿನಿ ದ್ವಿತೀಯ ಮತ್ತು 6 ವಿದ್ಯಾರ್ಥಿನಿಯರು ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಅವಂಟಿ ಹಾಗೂ ಕಾರ್ಯದರ್ಶಿ ಬಸವರಾಜ ಚೆಟ್ಟಿ ತಿಳಿಸಿದ್ದಾರೆ.
ವೀರಯೋಧನ ಪುಣ್ಯಸ್ಮರಣೆ ಇಂದು
ಶಹಾಪುರ: ಸಗರನಾಡಿನ ವೀರಯೋಧ ಸುಭಾಷ ಮಡಿವಾಳರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೇ 13ರಂದು ತಾಲೂಕಿನ ಸಗರ ಗ್ರಾಮದ ಯುಕೆಪಿ ಕ್ಯಾಂಪ್ ಆವರಣದಲ್ಲಿ ಬೆಳಗ್ಗೆ 10. 30ಕ್ಕೆ ಆಯೋಜಿಸಲಾಗಿದೆ. ಹುತಾತ್ಮ ಸ್ಮರಣೆ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂತನ ಶಾಸಕ ಗುರುಪಾಟೀಲ ಶಿರವಾಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಸಾನ್ನಿಧ್ಯವನ್ನು ಸಗರ ಹಿರೇಮಠದ ಚನ್ನಬಸವದೇವರು ವಹಿಸುವರು. ಅತಿಥಿಗಳಾಗಿ ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಪಾಲ್ಗೊಳ್ಳವರು. ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪನಾಯಕ, ಸಾಹಿತಿ ಎ.ಕೆ. ರಾಮೇಶ್ವರ, ಭಾಸ್ಕರಾವ ಮೂಡಬೂಳ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಬಸನಗೌಡ ಸುಬೇದಾರ ವಹಿಸಲಿದ್ದಾರೆ ಎಂದು ಪುಣ್ಯಸ್ಮರಣೆ ಆಚರಣಾ ಸಮಿತಿ ತಿಳಿಸಿದೆ.
ಬಸವೇಶ್ವರ ಜಯಂತಿ ಇಂದು
ಯಾದಗಿರಿ: ವೀರಶೈವ ಸಮಾಜದ ವತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವವನ್ನು ಮೇ 13ರಂದು ಸಂಭ್ರದಿಂದ ಆಚರಿಸಲಾಗುತ್ತಿದೆ.ಜಯಂತ್ಯುತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ 11 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದೆ ಎಂದು ಸಂಘದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ಕಾರ್ಯದರ್ಶಿ ವಿ.ಸಿ. ರೆಡ್ಡಿ, ಯುವ ಅಧ್ಯಕ್ಷ ನೀಲಕಂಠ ಶೀಲವಂತ ತಿಳಿಸಿದ್ದಾರೆ.
ಇಂದು ರಥೋತ್ಸವ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ವಡ್ಡರ ಸಂಘ ಬಡಾವಣೆಯಲ್ಲಿರುವ ಸದ್ಗುರು ಅಡವಿ ತಾತನವರ ರಥೋತ್ಸವ ಹಾಗೂ ಬಸವ ಜಯಂತಿ ನಿಮಿತ್ತ ಭಾವಚಿತ್ರ, ಜೋಡಿ ಎತ್ತುಗಳ ಮೆರವಣಿಗೆಯು ಮೇ 13ರಂದು ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ ತಿಳಿಸಿದ್ದಾರೆ. ಮಧ್ಯಾಹ್ನ 3.30ಕ್ಕೆ ಅಡವಿ ತಾತ ದೇವಸ್ಥಾನದಿಂದ ಮೆರವಣಿಗೆ ನಡೆಯಲಿದೆ.
ಅಂತರ್ಜಾಲದಲ್ಲಿ ಶಿಕ್ಷಕರ ಸೇವಾ ವಿವರ
ಗುಲ್ಬರ್ಗ: ಗುಲ್ಬರ್ಗ ವಿಭಾಗ ಮಟ್ಟದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ/ತತ್ಸಮಾನ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಮೇ 31ರಲ್ಲಿ ಇದ್ದಂತೆ ಸಂಬಂಧಿಸಿದ ಉಪ ನಿರ್ದೇಶಕರ ಮೂಲಕ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಶಿಕ್ಷಕರ ಸೇವಾ ವಿವರದ ಮಾಹಿತಿಯನ್ನು ಇಲಾಖೆಯ ್ಛಠ್ಝ್ಜ್ಡಟಛಿಛ್ಠ್ಜಛ.್ಞಛ್ಠ.ಟ್ಝ್ಛಿ.್ಝಟಿ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಸದರಿ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ತುರ್ತಾಗಿ ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಅವರಿಗೆ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಸಂದರ್ಭದಲ್ಲಿ ಕೋರಿದ್ದಾರೆ.
ಸುಭಾಷ ಮಡಿವಾಳ ಸ್ಮರಣೋತ್ಸವ ಸಮಿತಿ ರಚನೆ
ಗುಲ್ಬರ್ಗ: ನಾಡಿನ ಕೇಂದ್ರಬಿಂದು ಸಗರ ಗ್ರಾಮದ ಗ್ರಾಪಂ ಆವರಣದಲ್ಲಿ ಸ್ವಾತಂತ್ರ ಹೋರಾಟಗಾರ ವಿದ್ಯಾಧರ ಗುರೂಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹುತಾತ್ಮ ವೀರ ಸೇನಾನಿ ಸುಭಾಷ ಮಡಿವಾಳ ಅವರ ಪ್ರತಿವರ್ಷ ಸ್ಮರಣೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ಹುತಾತ್ಮ ವೀರ ಸೇನಾನಿ ಸ್ಮರಣೋತ್ಸವ ಸ್ಮಾರಕ ಸಮಿತಿಯನ್ನು ರಚಿಸಲಾಯಿತು. ಸ್ವಾತಂತ್ರ ಹೋರಾಟಗಾರ ಲಿಂ. ಅಚ್ಚಪ್ಪಗೌಡರ ಸುಪುತ್ರ ಬಸನಗೌಡ ಮಾಲಿಪಾಟೀಲರನ್ನು ಅಧ್ಯಕ್ಷರೆಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮೂರು ಜನ ಉಪಾಧ್ಯಕ್ಷರು, ಪಿಡ್ಡಪ್ಪ ಮಲ್ಲಪ್ಪ ನಂದಿಕೂರ ಖಜಾಂಚಿಯಾಗಿ ಆಯ್ಕೆಗೊಂಡಿದ್ದು, 21 ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಲಾಯಿತು.
ಈ ಸಮಿತಿಗೆ ಸಾಯಿಬಣ್ಣ ಬಿ. ಮಡಿವಾಳ ಮತ್ತು ಲಿಂಗಣ್ಣ ಪಡಶೆಟ್ಟಿ ಅವರನ್ನು ಕಾರ್ಯದರ್ಶಿಗಳೆಂದು, ವಿದ್ಯಾಧರ ಗುರೂಜಿ, ಭಾಸ್ಕರರಾವ ಕುಲಕರ್ಣಿ ಅವರಿಗೆ ಮಾರ್ಗದರ್ಶಕರೆಂದು ಸಭೆಯು ಆಯ್ಕೆ ಮಾಡಿತು. ಸಾಹಿತಿ ಎ. ಕೆ. ರಾಮೇಶ್ವರ ಹುತಾತ್ಮ ವೀರ ಸೇನಾನಿ ಸುಭಾಷ ಮಡಿವಾಳರ ಸಾಹಸದ ಚರಿತ್ರೆಯನ್ನು ಬರೆದುಕೊಡಲು ಒಪ್ಪಿಸಿದರು. ಈ ಸಂದರ್ಭದಲ್ಲಿ ಶಹಾಪುರ, ಸುರಪುರ, ಗುಲ್ಬರ್ಗದಿಂದ ಮಡಿವಾಳ ಸಮಾಜದ ಹಲವಾರು ಜನರು ಭಾಗವಹಿಸಿದ್ದರು.
ಹೈಕಶಿ ಶಾಲೆಗೆ ಶೇ. 84 ಫಲಿತಾಂಶ
ಗುಲ್ಬರ್ಗ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕರ ಪ್ರೌಢ ಶಾಲೆಗೆ ಶೇ. 84.44ರಷ್ಟು ಫಲಿತಾಂಶ ಲಭಿಸಿದೆ ಎಂದು ಮುಖ್ಯಗುರು ಬಿ.ಎಂ. ಮಹೇಶ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳ ಪೈಕಿ 10 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿ ಹಾಗೂ 21 ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಅವರು ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಡಾ. ಲೋಹಿಯಾ ಕಾಲೇಜು ಸಾಧನೆ
ಆಳಂದ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ಥಳೀಯ ಡಾ. ರಾಮಮನೋಹರ್ ಲೋಹಿಯಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಶೇ. 56.6ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 236 ವಿದ್ಯಾರ್ಥಿಗಳಲ್ಲಿ 7 ಅಗ್ರ ಶ್ರೇಣಿಯಲ್ಲಿ, 72 ಪ್ರಥಮ ಶ್ರೇಣಿಯಲ್ಲಿ ಪಾಸಾದರೆ, ಉಳಿದ 25 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾವಿಭಾಗದಲ್ಲಿ ಧಾನಪ್ಪ ಅಣ್ಣಪ್ಪ ಹಿರೋಳಿ 542 ಅಂಕ, ರಸೂಲ್ ಸೈಫಾನ್ 525, ಯಲ್ಲಾಲಿಂಗ ಮಲ್ಲಿನಾಥ 523, ಲಕ್ಷ್ಮೀಪುತ್ರ ಭೀಮರಾವ 522, ಮೌಲಾಲಿ ಸೈಫನ್ ಸಾಬ್ 515, ವಿಕಾಸ ಶ್ರೀಮಂತ 514 ಹೀಗೆ ಅತಿ ಹೆಚ್ಚು ಅಂಕಪಡೆದಿದ್ದಾರೆ. ವಿಜ್ಞಾನ ವಿಭಾಗಕ್ಕೆ ಸಿದ್ಧಮ್ಮ ಮಲ್ಲಿನಾಥ 524 ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ತನ್ನದಾಗಿಸಿದ್ದಾರೆ. ವಿಕಾಸ ಧನಸಿಂಗ್ (469) ಸ್ಮಿತಾ ಸುನೀಲಕುಮಾರ (463) ಸೋನಿಕಾ ಸುರೇಶ ಮಡ್ಡೆ (442)ಮತ್ತು ಮೀನಾಕ್ಷಿ ಹೊದಲೂರ (427) ನಂತರ ಸ್ಥಾನದಲ್ಲಿದ್ದಾರೆಂದು ಪ್ರಾಚಾರ್ಯ ನಾಗಣ್ಣ ಸಲಗರೆ ತಿಳಿಸಿದ್ದಾರೆ.
ಫಿರ್ದೋಷ್ ಬೇಗಂ ಶೇ. 89 ಅಂಕ ಗಳಿಕೆ
ಗುಲ್ಬರ್ಗ: ಇತ್ತೀಚೆಗೆ ನಡೆದ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅಫಜಲ್ಪುರ
ತಾಲೂಕಿನ ಮಹಾಂತಪುರದ ಮಹಾಂತೇಶ್ವರ ಸಂಯುಕ್ತ ಪ.ಪೂ. ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದು, ಫಿರ್ದೋಷ್ ಬೇಗಂ ತಂದೆ ನವಾಜ್ ಪಾಷಾ ಎಂಬ ವಿದ್ಯಾರ್ಥಿನಿ ಶೇ. 88.66 ಫಲಿತಾಂಶ ಪಡೆದಿದ್ದಾಳೆ. 15 ವಿದ್ಯಾರ್ಥಿಗಳು ಪ್ರಥಮ ದರ್ಜೆ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
15ರಿಂದ ಅಗರಬತ್ತಿ ತಯಾರಿಕೆ ತರಬೇತಿ
ಗುಲ್ಬರ್ಗ: ಕೃಷ್ಣಾ ಸ್ವಯಂ ಉದ್ಯೋಗ ತರಬೇತಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೇ 15ರಿಂದ 29ರವರೆಗೆ 15 ದಿನಗಳ ಅಗರಬತ್ತಿ ತಯಾರಿಕೆ ಉಚಿತ ತರಬೇತಿ ಹಮ್ಮಿಕೊಂಡಿದೆ. ಅಲ್ಪ ಸ್ವಲ್ಪ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಮಾಹಿತಿಗೆ ದೂರವಾಣಿ ಸಂಖ್ಯೆ 08472-292003, ಮೊ.ಸಂ. 8088294498, 9845704360ನ್ನು ಸಂಪರ್ಕಿಸಿ.