ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆಎಂಎಫ್: ಭೂಸನೂರ ನಾಮಪತ್ರ ಸಲ್ಲಿಕೆ

Srinivasa Murthy VN
Updated On : 8 Nov 2013, 11:06 am

ಆಳಂದ: ಗುಲ್ಬರ್ಗ-ಬೀದರ್ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ತಾಲೂಕಿನಿಂದ 3 ನಾಮಪತ್ರ ಸಲ್ಲಿಕೆಯಾದವು.
ನ.12 ರಂದು ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ ನಡೆಯಲಿದೆ. ತಾಲೂಕಿನ ಹಿರಿಯ ಮುಖಂಡರೂ ಆಗಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಕುರುಬ ಸಮಾಜದ ಮುಖಂಡ ಈರಣ್ಣ ಝಳಕಿ ಧಂಗಾಪುರ ಹಾಗೂ ಹಾಲು ಒಕ್ಕೂಟದ ಮುಖಂಡ ನಿಂಗಣ್ಣ ಕಂಬಾರ ಅವರು ಬುಧವಾರ ಒಕ್ಕೂಟದ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಉಮಾ ಮಹೇಶ ಅವರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಈ ಹಿಂದೆ ಕೆಎಂಎಫ್ ಅಧ್ಯಕ್ಷರಾಗಿರುವ ದಿವಂಗತ ಅರವಿಂದ ನರೋಣೆ ಅವರ ಸಂಬಂಧಿಕರಾದ ಚಂದ್ರಕಾಂತ ಭೂಸನೂರ ಅವರು ತೀವ್ರ ಪೈಪೋಟಿಯಲ್ಲಿದ್ದಾರೆ. ಈಗಾಗಲೇ ಎರಡು ಸುತ್ತಿನ ಪ್ರಚಾರ ಕೈಗೊಂಡಿರುವರು.
ಎಪಿಎಂಸಿ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ್, ತಾಪಂ ಸದಸ್ಯ ಶಿವಪುತ್ರಪ್ಪ ಕೊಟ್ಟರಕಿ, ಗುರುಶರಣ ಪಾಟೀಲ್, ಆರ್.ಕೆ. ಪಾಟೀಲ್, ಗ್ರಾಪಂ ಅಧ್ಯಕ್ಷ ಶ್ರೀಕಾಂತ ಹೋಳ್ಕರ್, ಉಪಾಧ್ಯಕ್ಷ ಶಿವಲಿಂಗಪ್ಪ ಭೋಗಶೆಟ್ಟಿ, ಶರಣಬಸಪ್ಪ ಕ್ಯಾರ್, ಶಾಂತಪ್ಪ ಕಲಾಲ್, ಕರಬಸಪ್ಪ, ಪ್ರಭುಲಿಂಗ ಭೂಸನೂರ, ಶಿವಶಂಕರ, ಭೀಮಾಶಂಕರ ಪನಶೆಟ್ಟಿ, ಶರಣಬಸಪ್ಪ ಭೂಸನೂರ ಇತರರು ಉಪಸ್ಥಿತರಿದ್ದರು.
ತಾಲೂಕಿನಲ್ಲಿ 2 ಪ್ಯಾನೆಲ್‌ಗಳು ರಚನೆಯಾಗಿವೆ. 12ರಂದು ನಡೆಯುವ ನಿರ್ದೇಶಕರ ಚುನಾವಣೆ ಬೆಳಗ್ಗೆ 9 ರಿಂದ 4ರವರೆಗೆ ನಡೆಯಲಿದೆ. ಒಕ್ಕೂಟದ ಆಡಳಿತ ಮಂಡಳಿಯ ಒಟ್ಟು 12 ಜನ ನಿರ್ದೇಶಕರ ಸ್ಥಾನಗಳಿಗೆ ಈ ಚುನಾವಣೆ ನಡೆಯುವುದು.
ಗುಲ್ಬರ್ಗ, ಬೀದರ್ ಜಿಲ್ಲೆಗಳಿಂದ ತಲಾ 6 ಸ್ಥಾನ ಆಯ್ಕೆ ಮಾಡಬೇಕಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ 340 ಹಾಲು ಉತ್ಪಾದಕರ ಸಹಕಾರ ಸಂಘ ಚಾಲ್ತಿಯಲ್ಲಿವೆ. ಆಳಂದ ತಾಲೂಕಿನಲ್ಲಿ 22 ಸಂಘಗಳಿವೆ. ಅದರ ಅಧ್ಯಕ್ಷರು ಚುನಾವಣೆಯಲ್ಲಿ ಮತದಾನ ಚಲಾಯಿಸಲು ಅರ್ಹರಾಗಿರುತ್ತಾರೆ. ಯಾದಗಿರಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಚಾಲ್ತಿಯಲ್ಲಿರದ ಪ್ರಯುಕ್ತ 3 ಸ್ಥಾನಗಳು ಖಾಲಿ ಉಳಿದುಕೊಂಡಿರುತ್ತವೆ ಎಂದು ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದರು. ಕೆಎಂಎಫ್ ಅಧಿಕಾರಿಗಳಾದ ಜಿ.ರಾಮರೆಡ್ಡಿ, ನಾಗಪ್ಪ ಕೆ. ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement