ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪರೋಪಕಾರದಿಂದ ಸಾರ್ಥಕ ಜೀವನ: ಸಿದ್ದತೋಟೇಂದ್ರಶ್ರೀ

Srinivasa Murthy VN
Updated On : 8 Nov 2013, 11:06 am

ಗುಲ್ಬರ್ಗ/ಶಹಾಬಾದ್:  ಕ್ಷಣಿಕವಾದ ಈ ಮನುಷ್ಯ ಶರೀರ, ದುರಾಸೆಗೆ ದಾಸನಾಗದೆ ಪರೋಪಕಾರದಲ್ಲಿ ತಮ್ಮ ಜೀವನ ಮಾರ್ಗವನ್ನು ಆರಿಸಿಕೊಂಡಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ ಎಂದು ಸುಕ್ಷೇತ್ರ ನಾಲವಾರ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿ ಡಾ.ಸಿದ್ದ ತೋಟೇಂದ್ರ ಶಿವಾಚಾರ್ಯರು ಹೇಳಿದರು.
ಭಾನುವಾರ ಅಮವಾಸ್ಯೆ ನಿಮಿತ್ತ ನಡೆದ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ಸುಕ್ಷೇತ್ರದ ನಾಲವಾರದ ಮಠವು ಬೆಳಕಿಗೆ ಪ್ರಾಧ್ಯಾನ್ಯತೆ ನೀಡಿದೆ. ಸದ್ಗುರು ಕೋರಿ ಸಿದ್ದೇಶ್ವರರಿಗೆ ಭಕ್ತಿಯ ತನಾರತಿ ಎಂಬಿ ವಿಶಿಷ್ಟ ಸಂಪ್ರದಾಯ ನಡೆಯುತ್ತಿದ್ದು, ಇದು ಭಕ್ತರ ಜೀವನದಲ್ಲಿಯ ಕತ್ತಲನ್ನು ಕಳೆದು ಬೆಳಕನ್ನು ನೀಡುವುದಾಗಿದೆ ಎಂದರು.
ದೀಪಾವಳಿ ನಾಡಿನ ಜನರ ಬದುಕಿನಲ್ಲಿ ಹೊಸ ಬೆಳಕು ನೀಡಲಿ, ದುಡಿದು ಉಣ್ಣುವ ಪರಿಪಾಠ ಬೆಳೆದು, ಈ ದೇಶ ಕಲ್ಯಾಣ ರಾಜ್ಯವಾಗಲಿ ಎಂದು ಹಾರೈಸಿದರು.
ಅತಿಥಿಗಳಾಗಿ ಎಲ್‌ಬಿಕೆ ಆಲ್ದಾಳ ಮಾತನಾಡಿ, ನಾಲವಾರ ಮಠವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕಲ್ಯಾಣದ ವಿಶ್ರಾಂತಿ ಧಾಮ ಇದಾಗಿದೆ ಎಂದು ಬಣ್ಣಿಸಿ, ನಾಡಿನ ಜನತೆಗೆ ಜ್ಞಾನದ ಅರವನ್ನು ಮೂಡಿಸುವ ಜತೆಗೆ ಭಕ್ತಿ ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸ ಮಠದಿಂದ ಆಗುತ್ತಿದೆ ಎಂದರು.
ಮಠದ ಭಕ್ತರಾದ ಗೋಪಾಲ್ ರಾಠೋಡ, ಮಹಾದೇವ ಗಂವ್ಹಾರ, ಶಾಂತಗೌಡ ಅಲ್ಲೂರ, ವಿರೂಪಾಕ್ಷಯ್ಯ ಸ್ವಾಮಿ, ಶಿವರೆಡ್ಡಿ ಕುಲಕುಂದಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು. ಡಾ.ಸಿದ್ದರಾಜ ಕರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.

10ರಿಂದ ಬೃಹತ್ ಪುಸ್ತಕ ಮೇಳ
ಗುಲ್ಬರ್ಗ: ಮಂಗಳೂರು ಮೂಲದ ಶಾಂತಿ ಪ್ರಕಾಶನ ತನ್ನ 25 ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಶಾಂತಿಗಾಗಿ ಸಾಹಿತ್ಯವೆಂಬ ಧ್ಯೇಯವಾಕ್ಯದೊಂದಿಗೆ ರಾಜ್ಯಾದ್ಯಂತ ರಜನ ಮಹೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಅದರ ಅಂಗವಾಗಿ ನ.10 ರಿಂದ 17ರವರೆಗೆ ಗುಲ್ಬರ್ಗದಲ್ಲಿ ಬೃಹತ್ ಪುಸ್ತಕ ಮೇಳ ಹಾಗೂ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಯಶಸ್ವಿಗಾಗಿ ರಜತ ಮಹೋತ್ಸವ ಸ್ವಾಗತ ಸಮಿತಿ ರಚಿಸಲಾಗಿದ್ದು, ನ.10 ರಂದು ಬೆಳಗ್ಗೆ 9ಕ್ಕೆ ನಗರದ ಮಿನಿ ವಿಧಾನಸೌಧದಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬೃಹತ್ ಶಾಂತಿ ರ್ಯಾಲಿ ನಡೆಸಿ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ 11ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಗುಲ್ಬರ್ಗ ಉಸ್ತುವಾರಿ ಹಾಗೂ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಂಸದ ಧರ್ಮಸಿಂಗ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಮಾಜಿ ಸಚಿವ ವೈಜನಾಥ ಪಾಟೀಲ್, ಅಬ್ದುಲ್ ಹಮೀದ್ ಫಾರಾನ್, ಮಹ್ಮದ್ ಯೂಸುಫ್ ಕನ್ನಿ, ಝಾಕಿರ್ ಹುಸೇನ್ ಆಗಮಿಸಲಿದ್ದಾರೆ ಎಂದರು.
ನ.11 ರಿಂದ 17ರವರೆಗೆ ಪ್ರತಿನಿತ್ಯ ಸಂಜೆ 6.30ಕ್ಕೆ ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 11ರಂದು ಡಾ.ಕಾಶಿನಾಥ ಅಂಬಲಗಿ, 12ರಂದು ಡಾ. ಶಿವಗಂಗಾ ರುಮಾ ಉಪನ್ಯಾಸ ನೀಡುವರು. 13ರಂದು ಕನ್ನಡ ಭಾಷಾ ಕವಿಗೋಷ್ಠಿ ನಡೆಯಲಿದೆ.
ನ.14 ರಂದು ಸಂಜಯ ಮಾಕಲ್ ಉಪನ್ಯಾಸ ನೀಡುವರು ಮತ್ತು ಗುಲ್ಬರ್ಗದ ಸಂಚಿ ಸಾರಂಭ ತಂಡದಿಂದ ಸನ್ಮಾನ್ಯ ಸಚಿವರ ಸಾವು ನಾಟಕ ಪ್ರದರ್ಶನಗೊಳ್ಳಲಿದೆ. ನ.15 ರಂದು ಡಾ. ನಾಗಾಬಾಯಿ ಬುಳ್ಳಾ ಉಪನ್ಯಾಸ ನೀಡುವರು. ನ.16ರಂದು ಪ್ರೊ. ಸೋಮಶೇಖರ ಅಪ್ಪುಗೆರೆ ಉಪನ್ಯಾಸ ನೀಡುವರು. ನ.17ರಂದು ಬೆಳಗ್ಗೆ 11ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ. ವಸಂತ ಕುಷ್ಠಗಿ, ಡಾ. ವಿಕ್ರಂ ವಿಸಾಜಿ, ಪತ್ರಕರ್ತ ಟಿ.ವಿ. ಶಿವಾನಂದನ್ ಆಗಮಿಸಲಿದ್ದಾರೆ. ಶಾಂತಿ ಪ್ರಕಾಶನದ ಮುಹ್ಮದ್ ಇಸ್ಹಾಖ್ ಪುತ್ತೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸ್ವಾಗತ ಸಮಿತಿ ಸದಸ್ಯರಾದ ಮಹಿಪಾಲರೆಡ್ಡಿ ಮುನ್ನೂರ್, ಸಂಜಯ ಮಾಕಲ್, ಮೇರಾಜ ಪಟೇಲ್, ಜಾಕೀರ್, ಮುಹ್ಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement