ರೇಷ್ಮಿ ಶಿಕ್ಷಣ-ದತ್ತಿ ಸಂಸ್ಥೆಗೆ ಪ್ರಶಸ್ತಿ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತರ ಕಾಲೇಜುಗಳ ಯುವಜನೋತ್ಸವದಲ್ಲಿ ನಗರದ ರೇಷ್ಮಿ ಶಿಕ್ಷಣ, ದತ್ತಿ ಸಂಸ್ಥೆ ನಾಟಕ ವಿಭಾಗದಲ್ಲಿ 2ನೇ ವರ್ಷ ಸಮಗ್ರ ಪ್ರಶಸ್ತಿ ಪಡೆಯಿತು.
ವಿದ್ಯಾರ್ಥಿಗಳಾದ ಶಿವಲೀಲಾ, ಅಶ್ವಿನಿ ಚೆಂಗು ಪವಾರ, ಶಿಲ್ಪಾ ಪಾಂಡುರಂಗ, ಪುಷ್ಪಾ ರೇವಣಸಿದ್ದಪ್ಪ, ವಿಜಯಲಕ್ಷ್ಮೀ, ರಾಚಯ್ಯ, ಶ್ವೇತಾ ವಿಜಯಕುಮಾರ್, ವೆಂಕಟೇಶ ದೇವಿಂದ್ರಪ್ಪ, ಸಂಜೀವ ಜಾಧವ, ಉಮರ್ ಫಾರುಖ್, ಪ್ರಶಾಂತ ತೇಲಿ, ಬಸವರಾಜ ಕೂಡಲಗಿ, ಮಲ್ಲಿಕಾರ್ಜುನ ಯಲ್ಲಪ್ಪ, ಸುಧಾರಾಣಿ ಅರ್ಜುನ, ಪವಿತ್ರಾ ಹಣಮಂತರಾವ, ಜ್ಯೋತಿ ಶಾಂತಕುಮಾರ್, ನಾಗರಾಜ ಗೋಪಾಲ ಪಾಂಚಾಳ, ಸುನೀಲಕುಮಾರ್ ಯಶ್ವಂತರಾಯ, ನವೀನ್ ಚಂದ್ರಕಾಂತ, ಶಿವಕುಮಾರ್ ಬಸಣ್ಣ, ಸುದೀಪಕುಮಾರ್ ವೀರಣ್ಣ, ಸತೀಶ ಜಯರಾಮ, ಆಕಾಶ ಗಣಪತಿ ಜಾಧವ, ಅಮೀತಕುಮಾರ್ ವಿನೋದ ಉತ್ತಮ ಸಾಧನೆ ಮಾಡಿದ್ದಾರೆ.
ಯುವಜನೋತ್ಸವದಲ್ಲಿ “ÑÛOÚÃnÑé’ ಎಂಬ ಏಕಾಂತ ನಾಟಕಕ್ಕೆ ದ್ವಿತೀಯ ಬಹುಮಾನ, “¬Þ ಸತ್ತಾಂಗ ನಾ @}Û¡MVÚ’ ಎಂಬ ಪ್ರಹಸನಕ್ಕೆ ಪ್ರಥಮ ಬಹುಮಾನ, “ÈÚßÕ׿¾ÚßÁÚ ಮೇಲಿನ ಲೈಂಗಿಕ ಅತ್ಯಾಚಾರಕ್ಕೆ ÌOæÐ’ ಎಂಬ ಮೂಕಾಭಿನಯಕ್ಕೆ ತೃತೀಯ, ಶಾಸ್ತ್ರೀಯ ನೃತ್ಯಕ್ಕೆ ತೃತೀಯ, ಕ್ಲೇ ಮಾಡೆಲಿಂಗ್‌ನಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಭಾವಗೀತೆ, ಶಾಸ್ತ್ರೀಯ ಸಂಗೀತ, ಭಾರತೀಯ ಸಮೂಹ ಗಾಯನ, ಜಾನಪದ ಸಮೂಹ ನೃತ್ಯ, ಜಾನಪದ ಸಂಗೀತ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ರಂಗಕರ್ಮಿ ಶಂಕ್ರಯ್ಯ ಘಂಟಿ, ತುಳಜಾರಾಮ ಸಿಂಗ್ ಠಾಕೂರ, ಸಂಗೀತಗಾರರಾದ ಶಿವಕುಮಾರ್ ಹಿರೇಮಠ, ಶರಣು ದೇಸಾಯಿ ಕಲ್ಲೂರ, ಮೌನೇಶ ಬಡಿಗೇರ, ವೀರೇಶ ಬಡಿಗೇರ, ಸಂತೋಷ ಕಲ್ಕೇರಿ, ರಾಮು ಕುಸ್ನೂರ ಅವರ ಶ್ರಮ, ಉಪನ್ಯಾಸಕರ ಪ್ರೋತ್ಸಾಹ ಕಾರಣವಾಗಿದೆ ಎಂದು ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಶಂಕರಲಿಂಗ ಹೆಂಬಾಡಿ ತಿಳಿಸಿದ್ದಾರೆ.