ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

371ನೇ ಕಲಂ ಅಭಿವೃದ್ಧಿಗೆ ಪೂರಕ

Srinivasa Murthy VN
Updated On : 27 Nov 2013, 10:31 am

ಶಹಾಪುರ: ಕರ್ನಾಟಕದಲ್ಲಿ ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಸಂಸತ್ತು ಮತ್ತು ರಾಜ್ಯ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ 371ನೇ ಜೆ ಕಲಂನಿಂದ ಈ ಭಾಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತದೆ. ವಿದ್ಯಾರ್ಥಿಗಳು ಕಠಿಣ ಅಧ್ಯಯನ ಮಾಡಿದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಕೇವಲ ಈ ಕಲಂನಿಂದ ಅಭಿವೃದ್ಧಿ ತಂತಾನೆ ಆಗುತ್ತದೆ ಎಂದು ಭ್ರಮೆ ಲೋಕದಲ್ಲಿ ಇರಬಾರದು ಎಂದು ಗೋಗಿ ಕಾಲೇಜಿನ ಉಪನ್ಯಾಸಕ ಭೀಮಣ್ಣ ಅಂಚೆಸೂಗೂರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಖಾಪುರದಲ್ಲಿ ನಡೆಯುತ್ತಿರುವ ಭೀಗುಡಿ ಕಾಲೇಜಿನ ಎನ್‌ಎಸ್‌ಎಸ್ ವಿಶೇಷ ಶಿಬಿರದಲ್ಲಿ 371ನೇ ಕಲಂ ಹಿನ್ನಲೆ ಮಹತ್ವ ಕುರಿತು ಉಪನ್ಯಾಸ ಮಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಎಸ್. ದೇಸಾಯಿ ಉಪನ್ಯಾಸಕರು ಸಗರ ಇವರು ಅನೇಕ ವರ್ಷಗಳ ಹಿಂದೆಯೇ ತಜ್ಞರಾದ ನಂಜುಂಡಪ್ಪ ವರದಿ ಅನುಸಾರವಾಗಿಯೆ ಈಭಾಗಕ್ಕೆ ವಿಶೇಷ ಸೌಲಭ್ಯ ಲಭಿಸಿದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಡಾ. ರವೀಂದ್ರನಾಥ ಹೊಸ್ಮನಿ ಉಪನ್ಯಾಸಕರು, ನಿರಂತರ ಹೋರಾಟದ ಫಲವಾಗಿ ಸೌಲಭ್ಯ ದಕ್ಕಿದ್ದು ಇದರ ಸದುಪಯೋಗ ಪಡೆದುಕೊಳ್ಳುವುದು ಈ ಭಾಗದ ಯುವಕರ ಮೇಲಿದೆ ಎಂದರು. ಶಕುಂತಲಾ ಹಡಗಲಿ ಉಪನ್ಯಾಸಕಿ ಶಹಾಪುರ, ಎನ್‌ಎಸ್‌ಎಸ್ ಅಧಿಕಾರಿ ದೇವಿಂದ್ರಪ್ಪ ಹಳಿಸಗರ ವೇದಿಕೆ ಮೇಲಿದ್ದರು.  ಮುಖ್ಯ ಅತಿಥಿಗಳಾಗಿ ಬಸನಗೌಡ ಆಲ್ದಾಳ, ಎಂ.ಎಸ್. ಬಿರಾದಾರ, ಹಾಲಮಂಡಿಗೆ, ದಯಾನಂದ, ಮಂಜುನಾಥ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement