ಮಣ್ಣೂರಿನಲ್ಲಿ ಶ್ರೀಕೃಷ್ಣದ್ವೆ ೈಪಾಯನಾರ್ಯರ ಪಂಚಮಿ
ಅಫಜಲ್ಪುರ: ತಾಲೂಕಿನ ಸುಕ್ಷೇತ್ರ ಮಣ್ಣೂರನಲ್ಲಿ ಆದ್ಯ ವಂಶದ ಶ್ರೀಕೃಷ್ಣದ್ವೈಪಾಯನಾರ್ಯರ ಪಂಚಮಿ ಸಂಭ್ರಮದಿಂದ ಜರುಗಿತು.
ಬೆಳಗ್ಗೆ 5 ಗಂಟೆಗೆ ಉದಯರಾಗ ವೇದೇಶತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ ನಂತರ ಕೂಡ್ಲಿಯ ಆರ್ಯ ಅಕ್ಷೋಭ್ಯ ತೀರ್ಥಮಠದ ಶ್ರೀರಘು ವಿಜಯ ತೀರ್ಥ ಶ್ರೀಪಾದಂಗಳವರಿಂದ ಶ್ರೀಮಾನ್ಯಾಯ ಸುಧಾಪಾಠ ಹಾಗೂ ಶ್ರೀಮದ್ ಭಾಗವತ ಪುರಾಣ ನಂತರ ಚನ್ನಕೇಶವ ದೇವರಿಗೆ ಪಂಚಾಮೃತ ಅಭಿಷೇಕ ಪಾದಪೂಜೆ ಬ್ರಹತಿ ಸಹಸ್ರ ಹೋಮ ನಂತರ ಕೃಷ್ಣದ್ವೈಪಾಯನಾರ್ಯರ ಪಾದುಕೆಗಳ ಶೋಭಾಯಾತ್ರೆ ನಡೆಯಿತು. ಚನ್ನಕೇಶವ ದೇವಸ್ಥಾನದಿಂದ ಹನುಮಾನ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಭಜನೆಗಳೊಂದಿಗೆ ಜರುಗಿತು. ನಂತರ ಮೂಲರಾಮ ದೇವರ ಪೂಜೆ ಹಸ್ತೋದಕ ತೀರ್ಥಪ್ರಸಾದ ಮುಂತಾದ ಕಾರ್ಯಕ್ರಮ ಜರುಗಿದವು.
ಆಟೋ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಚಿಂಚೋಳಿ: ಪಟ್ಟಣದ ಬಸ್ ನಿಲ್ದಾಣ ಬಳಿ ಕಳೆದ ಶನಿವಾರ ಆಟೋ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಮಂಗಳವಾರ ಮೃತಪಟ್ಟಿದ್ದಾನೆಂದು ಚಿಂಚೋಳಿ ಸಬ್ ಇನ್ಸ್ಪೆಕ್ಟರ್ ಶಿವಶಂಕರ ಸಾಹು ತಿಳಿಸಿದ್ದಾರೆ.
ಪಟ್ಟಣದ ನಿವಾಸಿ ಮಂಜೂರ ಪಟೇಲ್ ಮಸ್ತಾನ ಪಟೇಲ(45) ಮೃತನು. ಈತ ಅಂಗಡಿಯೊಂದರಿಂದ ತೆರಳುತ್ತಿದ್ದಾಗ ಅಟೋ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದರಿಂದ ಹೈದ್ರಾಬಾದ್ನ ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು.