ಆತ್ಮವಿಶ್ವಾಸದಿಂದ ವ್ಯಕ್ತಿತ್ವ ರೂಪಿಸಿಕೊಳ್ಳಿ: ಗದ್ದುಗೆ
ಶಹಾಪುರ: ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸದ ಮೂಲಕ ಯಶಸ್ಸು ಸಾಧಿಸಿ ತನ್ಮೂಲಕ ಕುಟುಂಬ, ಸಮಾಜ, ರಾಜ್ಯದ ಕೀತರ್ ಹೆಚ್ಚಿಸುವಂತಹ ವ್ಯೆಕ್ತಿತ್ವ ಪಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದು ಸ್ವಯಂ ನಿವೃತ್ತಿ ಪಡೆದ ಪ್ರಧಾನ ಅಧ್ಯಾಪಕ ಗುರುಬಸ್ಸಯ್ಯ ಗದ್ದುಗೆ ತಿಳಿಸಿದರು. ಶ್ರೀಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಆತ್ಮೀಯ ಬಳಗದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅಭಿಪ್ರಾಯ ಹಂಚಿಕೊಂಡ ಅವರು, ಸತತ ಅಧ್ಯಯನ ಮೂಲಕ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದರೂ ಅದರಲ್ಲಿ ಸರ್ವಹಿತ ಅಡಗಿರಬೇಕು.
ಪ್ರೀತಿ, ವಿಶ್ವಾಸ ಮುಖ್ಯ: ಗುರುವಿನ ಮಾರ್ಗದರ್ಶನದಲ್ಲಿ ವಿದ್ಯೆಯ ಜೊತೆ ಸದ್ಗುಣಗಳು ರೂಪಿತವಾಗಲಿ. ಸ್ಥಳೀಯ ಚರಬಸವೇಶ್ವರ ಸಂಸ್ಥೆಯಲ್ಲಿ 33ವರ್ಷ ಸೇವೆ ಸಲ್ಲಿಸುವ ಸದಾವಾಕಾಶ ನೀಡಿದ್ದು ಮರೆಯುವಂತಿಲ್ಲ. ಆತ್ಮೀಯ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಸೇವೆಯ ದಿನದಲ್ಲಿ ಸ್ಮರಣೀಯವಾದಂಥವು ಎಂದರು. ಇದೇ ಸಂದರ್ಭದಲ್ಲಿ ಶ್ರೀಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಯು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿದ್ದ ನಿವೃತ್ತಿ ಪಡೆದ ವಿಶ್ವನಾಥ ರೆಡ್ಡಿ ದರ್ಶನಾಪುರ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಪಿಎಸ್ಐ ದೊಡ್ಡಪ್ಪಗೌಡ, ನೌಕರರ ಸಂಘದ ಅಧ್ಯಕ್ಷ ಸುಧಾಕರ ಗುಡಿ, ದೈಹಿಕ ಶಿಕ್ಷಣಾಧಿಕಾರಿ ಅಣ್ಣಪ್ಪ ಸನದಿ, ಪ್ರಭಾರಿ ಮುಖ್ಯಗುರು ಬಾಪುಗೌಡ ಉಪಸ್ಥಿತರಿದ್ದರು. ಶಿಕ್ಷಕ ಅರುಣ ಸ್ವಾಗತಿಸಿದರು. ಶರಣಯ್ಯ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹ್ಮದ ಹುಸೇನ ಆಸ್ಕರಿ ನಿರ್ವಹಿಸಿದರು. ಶೃತಿ ಸಂಗಡಿಗರು ಪ್ರಾರ್ಥಿಸಿದರು, ಶ್ರೀಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಅಡಿ ನಡೆಯುತ್ತಿರುವ ಐಟಿಐ ಕಾಲೇಜಿನ, ಸಂಸ್ಕೃತ ಪಾಠಶಾಲೆ ಪದವಿ ಕಾಲೇಜ, ಪಿಯುಸಿ ಕಾಲೇಜು, ಉರ್ದು ಮಾಧ್ಯಮ ಗ್ರಾಮೀಣ ಬಾಲಕಿಯರ ವಸತಿನಿಲಯ, ಸಗರದ ಹಿ.ಪ್ರಾ, ಶಾಲೆಯ ಮತ್ತು ದೈಹಿಕ ಶಿಕ್ಷಕರ ಬಳಗ ಆತ್ಮೀಯ ಗುರುವೃಂದ ಪಾಲ್ಗೊಂಡಿದ್ದು, ಗದ್ದುಗೆ ಸರ್ ಅವರಿಗೆ ಸನ್ಮಾನಿಸಲಾಯಿತು.