ಇಂದು, ನಾಳೆ ನೀನಾಸಂ ತಿರುಗಾಟ ನಾಟಕೋತ್ಸವ
ಗುರುಮಠಕಲ್: ಪಟ್ಟಣದಲ್ಲಿ ನ. 30 ಮತ್ತು ಡಿ. 1ರಂದು ನೀನಾಸಂ ತಿರುಗಾಟ ನಾಟಕೋತ್ಸವವನ್ನು ಪ್ರಯೋಗ ಪ್ರತಿಷ್ಠಾನ ಗುರುಮಠಕಲ್ ವತಿಯಿಂದ ಆಯೋಜಿಸಲಾಗಿದೆ.
ಪಟ್ಟಣದ ಸರಕಾರಿ ಬಾಲಕರ ಪ.ಪೂ. ಕಾಲೇಜು ಬಾಲಕರ ವಿಭಾಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನ. 30ರ ಸಾಯಂಕಾಲ 6 ಗಂಟೆಗೆ 'ಗಾಂಧಿ ವಿರುದ್ಧ ಗಾಂಧಿ' ನಾಟಕ ಉದ್ಘಾಟನೆ ಮತ್ತು ಎಂ.ಬಿ ನಾಯಿಕಿನ್ ಅವರ ಮಗುವಿನ ನಾಮಕರಣ ಕಾರ್ಯಕ್ರಮ ನಡೆಯಲಿದೆ.
ಸಾನ್ನಿಧ್ಯವನ್ನು ಪೂಜ್ಯ ಶಾಂತವೀರ ಶ್ರೀಗಳು, ಉದ್ಘಾಟಕರಾಗಿ ಜಿ.ಪಂ. ಅಧ್ಯಕ್ಷೆ ಭೀಮಮ್ಮ ಚಪೆಟ್ಲಾ, ಪ್ರಭು ಕಣ್ಣನ್ ಕ್ಷೇತ್ರ ಶಿಕ್ಷಣಾಧಿಕಾರಿ, ಪಿ. ಕಿಷ್ಟಪ್ಪ ಜಿಲ್ಲಾ ಸ.ನೌ.ಸಂ ಅಧ್ಯಕ್ಷರು, ಮಹಿಪಾಲ ರೆಡ್ಡಿ ಹತ್ತಿಕುಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆ. ದೇವದಾಸ ಬಿಜೆಪಿ ಬ್ಲಾಕ್ ಅಧ್ಯಕ್ಷರು, ಪಿ.ಕೆ ಚೌಧರಿ ಸಿಪಿಐ, ದೇವಿಂದ್ರಪ್ಪ ಎಸ್.ಓ, ವಿಜಯಲಕ್ಷ್ಮಿ ಕೋಟಕೊಂಡಿ ಪ.ಪಂ ಸದಸ್ಯೆ ಗೌರವ ಅತಿಥಿಗಳಾಗಿ ಭಾಗವಹಿಸುವರು. ಗೌರವ ಸನ್ಮಾನಿತರಾಗಿ ನರೇಂದ್ರ ರಾಠೋಡ ಉದ್ಯಮಿ, ರಾಜರಮೇಶ ಗೌಡ ಪ.ಪಂ.ಸದಸ್ಯ, ಮಲ್ಲಿಕಾರ್ಜುನ ಹೊಸಮನಿ ಕೋಶಾಧ್ಯಕ್ಷರು ಪ್ರ.ಪ್ರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿ.1ರಂದು ಸೀತಾ ಸ್ವಯಂವರ ನಾಟಕ ಪ್ರದರ್ಶನ ನಡೆಯಲಿದ್ದು ಜೊತೆಗೆ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯ ಜೆಡಿಎಸ್ ಯುವ ಕಾರ್ಯದರ್ಶಿ ಶರಣಗೌಡ ಕಂದಕೂರ ಉದ್ಘಾಟಿಸುವರು.ಬಸವರಾಜ ಅಲೆಮನಿ ಅಧ್ಯಕ್ಷತೆ ವಹಿಸುವರು. ಬ್ಲಾಕ್ ಜೆಡಿಎಸ್ ಅಧ್ಯಕ್ಷ ನವಾಜರೆಡ್ಡಿ ಪಾಟೀಲ, ನರಸರೆಡ್ಡಿ ಗಡ್ಡೇಸೂಗುರ, ವೆಂಕಟಪ್ಪ ಕಲಾಲ್, ಎಸ್.ಎಂ.ಬೂತಾಳ, ಚಂದುಲಾಲ್ ಚಿದ್ರಿ, ಭೀಮಶೇನ ಜೋಷಿ, ಪನ್ನಲಾಲ್ ಪಾಟೀಲ.ರಾಘವೇಂದ್ರ ಕಲಾಲ್, ಬಂದಪ್ಪ ಅರಳಿ, ಅನೀಲಕುಮಾರ ದೊರನಹಳ್ಳಿ ಭಾಗವಹಿಸುವರು ಎಂದು ಪ್ರಯೋಗ ಪ್ರತಿಷ್ಠಾನದ ಕಾರ್ಯದರ್ಶಿ ಮೊಗುಲಪ್ಪ ನಾಯಿಕಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.