ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಾಲಿಟೆಕ್ನಿಕ್ ಹಾಸ್ಟೆಲ್ ಕಟ್ಟಡ ಅಪೂರ್ಣ

Srinivasa Murthy VN
Updated On : 30 Nov 2013, 10:39 am

ಮೇ 2012ರಲ್ಲಿ ಕಾಮಗಾರಿ ಆರಂಭ ೤ ರೈಟ್ಸ್ ಸಂಸ್ಥೆ ಉಪಗುತ್ತಿಗೆ ನೀಡಿದ್ದೇ ಕಾರಣ
ಲಿಂಗಸ್ಗೂರು: ಪಟ್ಟಣದ ಸರ್ಕಾರಿ ತೋಟದಲ್ಲಿ ನಿರ್ಮಾಣ ಹಂತದಲ್ಲಿರುವ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ವಸತಿ ನಿಯಲ ಕಟ್ಟಡ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವು ತಿಂಗಳಿಂದ ನೆನೆಗುದಿಗೆ ಬಿದ್ದಿದೆ.
ಪಾಲಿಟೆಕ್ನಿಕ್ ಮಹಾವಿದ್ಯಾಲದಯಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಕಾಲೇಜಿನಲ್ಲಿ ಬೇರೆ ಜಿಲ್ಲೆ ಸೇರಿದಂತೆ ಸುಮಾರು 600 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮಹಿಳಾ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಿ ಬೆಂಗಳೂರು ತಾಂತ್ರಿಕ ಶಿಕ್ಷಣ ಇಲಾಖೆ 1 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಸತಿ ನಿಲಯ ನಿರ್ಮಿಸಲು ರೇಲ್ವೆ ಮಂತ್ರಾಲಯ ಕೇಂದ್ರ ಸರ್ಕಾರಿ ಸ್ವಾಮ್ಯದ ರೈಟ್ಸ್ ಸಂಸ್ಥೆಗೆ ವಹಿಸಲಾಗಿದೆ.
ಎರಡು ವರ್ಷವಾದ್ರೂ ಪೂರ್ಣಗೊಂಡಿಲ್ಲ: ಕಳೆದ 2009ರ ಜ.6ರಂದು ಒಪ್ಪಂದ ಮಾಡಿಕೊಂಡಿದ್ದ ಗುತ್ತಿಗೆದಾರರು 18 ತಿಂಗಳಲ್ಲಿ ಪೂರ್ಣಗೊಳಿಸುವ ಷರತ್ತಿನ ಮೇರೆಗೆ 2012 ಮೇ 12ರಂದು ಕಟ್ಟಡ ಕಾಮಗಾರಿ ಆರಂಭಿಸಿದರು. ಆದರೆ ಕಟ್ಟಡ ಕಾಮಗಾರಿಯನ್ನು ಸುಮಾರು 2 ವರ್ಷ ಗತಿಸಿದರೂ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿದೆ.
ವಸತಿ ನಿಲಯ ಕಟ್ಟಡ ಪೂರ್ಣಗೊಳಿಸುವಂತೆ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯರು ಮನವಿ ಮಾಡಿದರೂ ರೈಟ್ಸ್ ಸಂಸ್ಥೆ ನಿರ್ಲಕ್ಷ್ಯ ತೋರಿದೆ. ಏಕೆಂದರೆ ಗುತ್ತಿಗೆ ಪಡೆದ ರೈಟ್ಸ್ ಸಂಸ್ಥೆ ವಸತಿ ನಿಲಯ ಕಟ್ಟಡ ಕಾಮಗಾರಿ ಉಪಗುತ್ತಿಗೆ ನೀಡಿದೆ. ಇದರಿಂದ ಕಟ್ಟಡ ಕಾಮಗಾರಿ ಇದುವರೆಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ.
ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪಾಲಿಟೆಕ್ನಿಕ್ ಕಾಲೇಜು ವಸತಿ ನಿಲಯ ಅಭದ್ರ ಸ್ಥಿತಿಗೆ ತಲುಪುವ ಮುನ್ನ ಕಾಮಗಾರಿ ಪರಿಶೀಲನೆ ನಡೆಸಿ ರೈಟ್ಸ್ ಸಂಸ್ಥೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಎಚ್ಚರಿಸುವಂತೆ ಮುಂದಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement