ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಕ್ಕಳ ಗೋಡೆ ಪತ್ರಿಕೆ ಲೋಕಾರ್ಪಣೆ

Srinivasa Murthy VN
Updated On : 30 Nov 2013, 10:43 am

ಗುರುಮಠಕಲ್: ಪಟ್ಟಣದ ಸಿದ್ದಾರ್ಥ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಕ್ಕಳಿಂದ ರಚಿಸಲಾದ ಮಕ್ಕಳ ಗೋಡೆ ಪತ್ರಿಕೆ ದಾರಿದೀಪವನ್ನು ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿ ಲೋಕಾರ್ಪಣೆ ಮಾಡಿದರು.
ಮಕ್ಕಳೇ ಕೂಡಿ ಮಕ್ಕಳೇ ವಿನ್ಯಾಸಗೊಳಿಸಿದ ಗೋಡೆ ಪತ್ರಿಕೆ ಸಾಹಿತ್ಯ ಬರವಣಿಗೆಯಿಂದ ಕಂಗೊಳಿಸುವಂತೆ ಮಾಡಿ ಸ್ವಾಮೀಜಿಗಳಿಂದ ಬಿಡುಗಡೆಗೊಳಿಸಿ ಶಾಲೆಯಲ್ಲಿ ಹಬ್ಬದ ಸಂಭ್ರಮ ಆಚರಿಸುವಂತೆ ಮಕ್ಕಳು ಕುಣಿದಾಡಿದರು.
ನಂತರ ಶ್ರೀಗಳು ಮಾತನಾಡಿ, ಗಣಕಯಂತ್ರದ ಯುಗದಲ್ಲಿ, ಸ್ಮಾರ್ಟ್‌ಕ್ಲಾಸ್ ಭೋಧನೆ ನಡೆಯುವ ಸಂದರ್ಭದಲ್ಲಿ ಗೋಡೆ ಪತ್ರಿಕೆ ಉದ್ಘಾಟನೆಗೊಳ್ಳುತ್ತಿರುವುದು ಆನಂದವಾಗಿದೆ. ಕೈ ಬರಹದ ಆನಂದ ಅನುಭವಿಸುವುದೇ ಒಂದು ಆಧ್ಯಾತ್ಮಿಕವಾಗಿದೆ ಎಂದರು.

ಗಂಗಾಮತ ಕೋಲಿ ಸಮಾಜದ ಸಭೆ
ಗುರುಮಠಕಲ್: ಡಿ.1ರಂದು ಕ್ಷೇತ್ರದ ಗಂಗಾಮತ ಕೋಲಿ ಸಮಾಜದ ಅಧ್ಯಕ್ಷ ನೇತೃತ್ವದಲ್ಲಿ ಹಲವೆಡೆ ಸಭೆ ಕರೆಯಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಕಾಳಬೆಳಗುಂದಿ ಪಂಚಾಯತ್ ವ್ಯಾಪ್ತಿ, ಮಧ್ಯಾಹ್ನ 12 ಗಂಟೆಗೆ ಮಾಧ್ವಾರ ಪಂಚಾಯತ್ ವ್ಯಾಪ್ತಿ, 3ಗಂಟೆಗೆ ಯಲಸತ್ತಿ ಪಂಚಾಯತ್ ವ್ಯಾಪ್ತಿಯ ಗಂಗಾಮತ ಕೋಲಿ ಸಮಾಜದ ಪದಾಧಿಕಾರಿಗಳ ಸಭೆಯನ್ನು ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement