ಮಾ.31ರವರೆಗೆ ಕಾಲುವೆಗೆ ನೀರು ಹರಿಸಿ
ಹುಣಸಗಿ: ಕೃಷ್ಣಾ ಅಚ್ಚಕಟ್ಟು ಪ್ರದೇಶದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಮಾ. 31ರವರೆಗೆ ನೀರು ಹರಿಸಲು ಭಾಜಪದ ಯುವ ಮೋರ್ಚಾ ತಾಲೂಕಾಧ್ಯಕ್ಷ ಬಸವರಾಜ ಮೇಲಿನಮನಿ ಅವರು ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರು ಆಲಮಟ್ಟಿ ಇವರಿಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಾಲುವೆಗಳಿಗೆ ಮಾ. 10ರವರೆಗೆ ನೀರು ಹರಿಸಲಾಗುವುದು ಎಂದು ತೆಗೆದುಕೊಂಡ ನಿರ್ಧಾರ ರೈತ ವಿರೋಧಿಯಾಗಿದೆ.
ಈ ವರ್ಷ ನವೆಂಬರ್ನಲ್ಲಿ ನಡೆಸಿದ ಸಭೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಎರಡು ಜಲಾಶಯಗಳಲ್ಲಿ 80 ಟಿಎಮ್ಸಿ ನೀರನ್ನು ಬಳಸಬಹುದು ಎಂದು ತಿಳಿದು ಬಂದಿದೆ.
ಮಾ. 31ರವರೆಗೆ ನೀರು ಹರಿಸಲಾಗುವುದೆಂದು ಬಹಿರಂಗ ಪ್ರಕಟಣೆ ನೀಡಿ, ರೈತರಿಗೆ ತಿಳಿಸಬೇಕು. ಇಲ್ಲದೇ ಹೋದಲ್ಲಿ ರೈತರೊಂದಿಗೆ ಸೇರಿಕೊಂಡು ಪಕ್ಷವು ಬೀದಿಗಿಳಿದು ಉಗ್ರ ಹೋರಾಟ ಮಾಡುವುದು ಅನಿವಾರ್ಯವಾದೀತು ಎಂದು ಅಧ್ಯಕ್ಷ ಬಸವರಾಜ ಮೇಲಿನಮನಿ ಎಚ್ಚರಿಸಿದ್ದಾರೆ.