ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಾರಾಬಂದಿಯಿಂದ ಮಾ.10ರವರೆಗೆ ನೀರು

Srinivasa Murthy VN
Updated On : 30 Nov 2013, 10:41 am

ಹುಣಸಗಿ: ನಾರಾಯಣಪುರ ಜಲಾಶಯದಿಂದ ಎಡ ಮತ್ತು ಬಲ ಕಾಲುವೆಗಳಿಗೆ ನೀರು ಹರಿಸುವ, ನಾರಾಯಣಪುರ ಜಲಾಶಯದ ನೀರನ್ನು ವಾರಬಂದಿ ಮಾಡುವ ಮೂಲಕ ರೈತರಿಗೆ ಮಾ. 10ರವರೆಗೆ ನೀರು ಹರಿಸಲು ನೀರಾವರಿ ಅಧಿಕಾರಿಗಳು ಸಜ್ಜುಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಎಸ್.ಆರ್. ಪಾಟೀಲ್, ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರ ಒತ್ತಾಯದ ಮೇರೆಗೆ ಸಲಹಾ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡಿ. 1 ರಿಂದ 5ರವರೆಗೆ ಎನ್‌ಎಲ್ಬಿಸಿ ಗೇಟ್ ಬಂದ್ ಮಾಡಲು ಜಲಾಶಯಗಳ ನೀರಾವರಿ ಅಧಿಕಾರಿಗಳು ನಿಶ್ಚಯಿಸಿದ್ದಾರೆ. ಇದಕ್ಕೆ ರೈತರ ಸಹಕಾರ ಅಗತ್ಯ ಎಂಧು ಅಭಿಪ್ರಾಯ ಪಡಲಾಗಿದೆ.
ಎನ್‌ಎಲ್ಬಿಸಿ ದಿನಾಂಕ ನಿಗದಿ ಮಾಡಿದಂತೆ ಉಳಿದ ಅಂದರೆ ಆಲಮಟ್ಟಿ, ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಬೇರೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿದುಬಂದಿದೆ. ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಿದಂತೆ ಅವಳಿ ಜಲಾಶಯಗಳಲ್ಲಿ ಲಭ್ಯವಿರುವ ನೀರು ಕೇವಲ ಫೆ. 20ರವರೆಗೆ ಮಾತ್ರ ಸಾಕಾಗಲಿದೆ. ಆದ್ದರಿಂದ ನೀರಾವರಿ ಸಲಹಾ ಸಮಿತಿಯಲ್ಲಿ ಮಾ. 10ರವರೆಗೆ ನೀರು ಹರಿಸಲು ವಾರಬಂದಿ ಮಾಡುವ ಮೂಲಕ ನೀರು ಹರಿಸಸಬೇಕು ಎಂಬ ಕಟ್ಟಪ್ಪಣೆ ಮಾಡಲಾಗಿದೆ.
ಸೂಚನೆಗೆ ಪೂರಕವಾಗಿ, ಬರುವ ಡಿಸೆಂಬರ್ ಒಂದರಿಂದ ಡಿ.5 ರವರೆಗೆ  ನಾರಾಯಣಪುರ ಎಡದಂಡೆ ನಾಲೆಯ ಗೇಟ್ ಪೂರ್ತಿ ಬಂದ್ ಮಾಡಲು ನೀರಾವರಿ ಅಧಿಕಾರಿಗಳು ಚಿಂತಿಸಿದ್ದಾರೆ. ಸದ್ಯ ಮುಂಗಾರು ಹಂಗಾಮಿನ ಕಟಾವು ನಡೆದಿದ್ದು, ನೀರಿನ ಬೇಡಿಕೆ ಅಷ್ಟೊಂದು ಪ್ರಮಾಣದಲ್ಲಿ ಇಲ್ಲಾ ಎಂಬುದನ್ನು ಅನೇಕ ರೈತರು ನೀರಾವರಿ ಅಧಿಕಾರಿಗಳ ಕಚೇರಿಗಳಾದ ಹುಣಸಗಿ, ಮುದನೂರು, ಕೆಂಭಾವಿ, ಕೊಡೇಕಲ್, ಕಕ್ಕೇರಾ, ಭೀಗುಡಿ, ಸಿಂಧಗಿ, ಇಂಡಿ ಭಾಗಗಳಿಂದ ತಿಳಿದುಬಂದಿದೆ. ಅದೇ ಕಾರಣಕ್ಕಾಗಿ ಡಿಸೆಂಬರ್ ಒಂದನೇ ತಾರೀಖಿನಿಂದ ಐದರವರೆಗೆ, ಜನೇವರಿ ಒಂದರಿಂದ ಐದರವರಗೆ, ಅದರಂತೆ ಫೆಬ್ರುವರಿ ಒಂದರಿಂದ ಐದನೆ ತಾರೀಖಿನವರೆಗೆ ಹೀಗೆ ಹದಿನೈದು ದಿವಸಗಳ ನೀರು ಉಳಿತಾಯ ಮಾಡುವ ಮೂಲಕ ಮಾರ್ಚ ಹತ್ತರವರೆಗೆ ಕೃಷ್ಣಾ ಅಚ್ಚಕಟ್ಟು ಪ್ರದೇಶದಲ್ಲಿ ನೀರು ಹರಿಸಲು ನೀರಾವರಿ ಅಧಿಕಾರಿಗಳು ಸಜ್ಜಾಗಿರುವ ಕುರಿತು ತಿಳಿದು ಬಂದಿದೆ.
ಹತ್ತು ದಿವಸಕ್ಕೆ ಒಂದು ಟಿಎಮ್ಸಿ ನೀರು ಜಲಾಶಯದಿಂದ ಆವಿ: ಜಲಾಶಯಗಳಲ್ಲಿ ಪ್ರತಿನಿತ್ಯ 858 ಕ್ಯುಸೆಕ್ ನೀರು ಪ್ರತಿ ದಿವಸ ಆವಿಯಾಗುತ್ತಿದೆ. ಮಾರ್ಚ್ ತಿಂಗಳವರೆಗೆ 9 ಟಿಎಂಸಿ ನೀರು ಆವಿಯಾಗುವ ಮೂಲಕ ಬಳಕೆ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಎಂಜನೀಯರ್‌ಗಳ ನಿದ್ದೆಗೆಡಿಸಿದೆ.
ವಾರಾಬಂದಿ ಮಾಡಿದರೆ ನೀರು ಸಮರ್ಪಕವಾಗಿ ತಲುಪುವುದಿಲ್ಲ ಎಂದು ಈಗಲೆ ರೈತರು ಅಪಸ್ವರ ಎತ್ತಿದ್ದಾರೆ. ಕಾಲುವೆಯಲ್ಲಿ ನೀರು ಬರುವುದು-ಹೋಗುವುದು ಮಾಡಿದರೆ, ಕಾಲುವೆಯ ನೀರನ್ನು ಸದಾ ಮೆಲ್ಭಾಗದ ರೈತರೇ ಪಡೆದು ನಮ್ಮನ್ನು ಹಾಳು ಮಾಡುವರು ಎಂದು ಕಾಲುವೆ ಕೊನೆ ಗ್ರಾಮಗಳಾದ ಹುಣಶಿಹೊಳೆ, ಬನದೊಡ್ಡಿ, ತಿಂಥಣಿ, ದೇವಾಪುರ, ದೇವತ್ಕಲ್, ಹೆಬ್ಬಾಳ, ಹೇಮನೂರು, ಸೂಗೂರ, ಚೌಡೇಶ್ವರಿಹಾಳ, ಹಾವಿನಾಳ, ಆಲ್ದಾಳ, ಕೌಡಿಮಟ್ಟಿ, ಸೇರಿದಂತೆ ನೂರಾರು ಹಳ್ಳಿಗಳ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾರನ್ನು ನಂಬುವುದು-ಯಾರನ್ನು ಬಿಡುವುದು:ವಾರಾಬಂದಿ ಮಾಡುವುದು ಬೇಡಾ, ಮಾರ್ಚ್ ಹತ್ತರವರೆಗೆ ನಿಗದಿಯ ನೀರು ಕಾಲುವೆಯಲ್ಲಿ ಹರಿಸುವುದು ಅಸಾಧ್ಯದ ಮಾತು ಎಂದು ನೀರಾವರಿ ಅಧಿಕಾರಿಗಳ ಅನಿಸಿಕೆ. ಇನ್ನು ಜನಪ್ರತಿನಿಧಿಗಳು ಆಡಳಿತ ಪಕ್ಷದವರ ವರ್ತನೆ ಅಧಿಕಾರ ಇದ್ದಾಗ ಒಂದು ರೀತಿ, ಅಧಿಕಾರ ಇಲ್ಲದಿರುವಾಗ ಒಂದು ರೀತಿ. ವಾರಾಬಂದಿ ಒಪ್ಪಿಕೊಳ್ಳದೆ ಇದ್ದರೆ, ಮಾ.10ರವರೆಗೆ ನೀರು ಹರಿಯುವದು ಕಷ್ಟ. ಇಂತಹದರಲ್ಲಿ ಕೆಲವರು ನಮಗೆ ಆಡಳಿತ ಪಕ್ಷದ ಜನ ಪ್ರತಿನಿಧಿಗಳು ಹೇಳಿದ್ದಾರೆ. ಇದು ರೈತರನ್ನು ಆತಂಕಕ್ಕೆ ಈಡು ಮಾಡಿದೆ. ರೈತರಿಗೆ ಏನು ಮಾಡುವುದು, ಯಾರನ್ನು ನಂಬುವುದು ಎಂಬುದು ತಿಳಿಯದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement