ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವೆಂಕಟಾಪುರ: ಆರೋಗ್ಯ ಅರಿವು ಕಾರ್ಯಕ್ರಮ

Srinivasa Murthy VN
Updated On : 30 Nov 2013, 10:42 am

ಸುರಪುರ: ತಾಲೂಕಿನ ದೇವರಗೋನಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಇಲ್ಲಿಗೆ ಸಮೀಪದ ವೆಂಕಟಾಪುರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯವಂತ ಶಿಶು ಪ್ರದರ್ಶನ ಅಂಗವಾಗಿ ಆರೋಗ್ಯ ಅರಿವು ಕಾರ್ಯಕ್ರಮ ಜರುಗಿತು.
ಡಾ.ಸಂಜೀವ ಕುಲಕಣರ್ ಮಾತನಾಡಿ, ಗರ್ಭಿಣಿ ಮಹಿಳೆಯರು ಪ್ರಸವ ಪೂರ್ವದಲ್ಲಿ ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ ಮಾತನಾಡಿ, ಒಂದು ಮಗುವಿನಿಂದ ಇನ್ನೊಂದು ಮಗುವಿನ ಹೆರಿಗೆಗೆ ಕನಿಷ್ಠ 3 ವರ್ಷ ಅಂತರವಿರಬೇಕು. ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಸದೃಢವಾಗಿರುತ್ತದೆ. ಕಾಪರ್ ಟಿ ಮತ್ತು ಮಾತ್ರೆಗಳನ್ನು ಉಪಯೋಗಿಸಬೇಕು ಎಂದರು. ಕಾರ್ಯಕ್ರಮದಲ್ಲಿ 6 ಆರೋಗ್ಯವಂತ ಮಕ್ಕಳನ್ನು ಆಯ್ಕೆಮಾಡಿ ನಗದು ಬಹುಮಾನ ವಿತರಿಸಲಾಯಿತು.
ಗ್ರಾಮದ ವಿರುಪಾಕ್ಷಯ್ಯಸ್ವಾಮಿ, ಚನ್ನಬಸಯ್ಯ, ಆರೋಗ್ಯ ಸಹಾಯಕರಾದ ಸಂಗಣ್ಣ ಚೆಟ್ಟಿ, ಸುಮಂಗಲಾ, ಅಂಗನವಾಡಿ ಕಾರ್ಯಕರ್ತೆ ಗುರುಬಾಯಿ, ನೀಲಮ್ಮ, ಆಶಾ ಕಾರ್ಯಕರ್ತೆಯರು ಇದ್ದರು. ಮಲ್ಲಣ್ಣ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement