ಶಾಸಕ ಸಂಭಾಜಿ ಹೇಳಿಕೆ ಖಂಡಿಸಿ ಕರವೇ ಪ್ರತಿಭಟನೆ
ಸುರಪುರ:ಬೆಳಗಾವಿಯಲ್ಲಿ ನಡೆದ ಎಂಇಎಸ್ ಮಹಾಮೇಳಾವದಲ್ಲಿ ಬೆಳಗಾವಿ ಶಾಸಕ ಸಂಭಾಜಿ ಪಾಟೀಲ್ ಕನ್ನಡಿಗರಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿರುವುದನ್ನು ಖಂಡಿಸಿ ಕರವೇ ಬಣದ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ಬೆಳಗಾವಿಯಲ್ಲಿ ಸೋಮವಾರದಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಿದ್ದು, ಗಡಿನಾಡಿನ ಜನತೆ ಸಂಭ್ರಮಿಸುತ್ತಿದ್ದರೆ, ಅದೇ ಸಮಯಕ್ಕೆ ಸೀಮಾ ಮಹಾಮೇಳಾವ ನಡೆಸಿ ಎಂಇಎಸ್ನ ಗೂಂಡಾ ಶಾಸಕ ಸಂಭಾಜಿ ಪಾಟೀಲ್ ಉದ್ಧತಟತನದಿಂದ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ವರು ಎಂಇಎಸ್ ಶಾಸಕರಿದ್ದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು ಎಂದು ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಭಾಷೆಯ ನೆಪದಲ್ಲಿ ಸಮಾಜದ ಸಾಮರಸ್ಯ ಹಾಳುಮಾಡುತ್ತಿರುವ ಎಂಇಎಸ್ ಶಾಸಕ ಸಂಭಾಜಿ ಪಾಟೀಲರ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸಿ ಕೂಡಲೇ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅರುಣಕುಮಾರ ಕುಲಕಣರ್ ಮೂಲಕ ಸಲ್ಲಿಸಲಾಯಿತು. ಕರವೇ ಜಿಲ್ಲಾ ಸಂಚಾಲಕ ರಾಘವೇಂದ್ರ ಕುಲಕರ್ಣಿ, ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಕಲ್ಬುಗರ್, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ನಾಯಕ ಬಿಜಾಸ್ಪೂರು, ಕಾರ್ಯಕರ್ತರಾದ ಖಾಸಿಂ ಪಠಾಣ, ರಂಗನಾಥ ಪ್ಯಾಪ್ಲಿ, ಸೋಮನಾಥ ವಕೀಲ, ಹಣಮೇಶ ಯಾದವ, ಮಾಳಪ್ಪ ಪೂಜಾರಿ ಇನ್ನಿತರರಿದ್ದರು.