ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಸಕರಿಂದ ಪರಿಹಾರ ಧನ ಚೆಕ್ ವಿತರಣೆ

Srinivasa Murthy VN
Updated On : 30 Nov 2013, 10:43 am

ಸುರಪುರ: ತಾಲೂಕಿನ ಬೈರಿಮಡ್ಡಿ ಗ್ರಾಮದಲ್ಲಿ ಕಳೆದ ತಿಂಗಳು ಸಿಡಿಲು ಬಡಿದು ಮೃತಪಟ್ಟ ಮಹಾದೇವಪ್ಪ ಭೀಮಪ್ಪ ಯಕ್ಷಿಂತಿ ಅವರ ಕುಟುಂಬಕ್ಕೆ ಶಾಸಕ ರಾಜಾ ವೆಂಕಟಪ್ಪನಾಯಕ ಶುಕ್ರವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಯೋಜನೆಡಿಯಲ್ಲಿ ರು. 1.50 ಲಕ್ಷ ಚೆಕ್ ವಿತರಿಸಿದರು.
ನಂತರ ಅವರು ಮಾತನಾಡಿ, ಪರಿಹಾರದ ಮೊತ್ತವನ್ನು ಒಳ್ಳೆಯ ಕೆಲಸಕ್ಕೆ ಮತ್ತು ಮಕ್ಕಳ ಶಿಕ್ಷಣಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮೃತರ ಕುಟುಂಬ ವರ್ಗಕ್ಕೆ ಕಿವಿಮಾತು ಹೇಳಿದರು. ನಂತರ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಬೆಳಗಾವಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಉಪ್ಪಲದಿನ್ನಿ ತಾಂಡಾದ ಮೃತ ಕುಟುಂಬಗಳಿಗೆ ಹೆಚ್ಚುವರಿಯಾಗಿ ಕಾರ್ಮಿಕ ಇಲಾಖೆ ಯಿಂದ ರು. 50 ಸಾವಿರ ನೀಡುವುದಾಗಿ ಕಾರ್ಮಿಕ ಸಚಿವ ಪರಮೇಶ್ವರ ನಾಯಕ ಭರವಸೆ ನೀಡಿದ್ದಾರೆ. ಗುರುಮಿಠಕಲ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ ರು. 1 ಲಕ್ಷ ಮತ್ತು ಕಾರ್ಮಿಕ ಇಲಾಖೆ ಪರಿಹಾರ ಸೇರಿ ರು. 1.50 ಲಕ್ಷ ಪರಿಹಾರ ಧನವನ್ನು ಅಧಿವೇಶನ ನಂತರ ಮೃತ ಕುಟುಂಬಗಳಿಗೆ ನೀಡಲಾಗುವುದು. ಗಾಯಗೊಂಡವರಿಗೂ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ತಾವು ಮನವಿ ಮಾಡಿರುವುದಾಗಿ ತಿಳಿಸಿದರು.
ತಹಸೀಲ್ದಾರ್ ಅರುಣುಕುಮಾರ ಕುಲಕಣರ್, ವಿಠ್ಠಲ ಯಾದವ್ ಬಸವರಾಜ ಬನ್ನೆಟ್ಟಿ ಶ್ರೀನಿವಾಸ ಕುಲಕರ್ಣಿ, ನರೇಶ, ಅಣವೀರಪ್ಪ, ಸಿದ್ದಯ್ಯ ಸ್ವಾಮಿ, ಆಶೋಕ ಸುರಪುರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement