ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

13ರಿಂದ ಶೈಕ್ಷಣಿಕ ಹಬ್ಬ; ಒಒಡಿ ಸೌಲಭ್ಯ

Srinivasa Murthy VN
Updated On : 3 Feb 2014, 11:21 am

ರಾಯಚೂರು: ಭಾರತ ಜ್ಞಾನ-ವಿಜ್ಞಾನ ಸಮಿತಿಯಿಂದ ನಡೆಸುವ ಟೀಚರ್ ಮಾಸಪತ್ರಿಕೆಯ ವಾರ್ಷಿಕೋತ್ಸವನ್ನು 12ನೇ ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬವಾಗಿ ಫೆ.13 ಮತ್ತು 14ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಆಚರಿಸುತ್ತಿದ್ದು, ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ಸೌಲಭ್ಯ(ಒಒಡಿ) ಒದಗಿಸಲಾಗಿದೆ. ಈ ಕುರಿತು ಸಮಿತಿಯ ರಾಯಚೂರು ಘಟಕದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್‌ರೆಡ್ಡಿ ಪ್ರಕಟಣೆ ನೀಡಿ, ದೊಡ್ಡಬಳ್ಳಾಪುರದ ಡೈರಿ ಸರ್ಕಲ್ ಬಳಿಯ ಬಸವ ಭವನದಲ್ಲಿ ನಡೆಯಲಿರುವ ಶೈಕ್ಷಣಿಕ ಹಬ್ಬದಲ್ಲಿ ಪಾಲ್ಗೊಳ್ಳಲು ಶಿಕ್ಷಕರಿಗೆ ಅನುಕೂಲವಾಗುವಂತೆ ಡಿಡಿಪಿಐ ಅವರು ಅನ್ಯಕಾರ್ಯ ನಿಮಿತ್ತ ಸೌಲಭ್ಯ ಒದಗಿಸಿದ್ದಾರೆಂದು ತಿಳಿಸಿದ್ದಾರೆ.

ಅನಾಮಧೇಯ ಬೆದರಿಕೆ; ಆತಂಕ
ಗುಲ್ಬರ್ಗ: ತಾಲೂಕಿನ ಶ್ರೀಗುರು ಮಳೇಂದ್ರ ಶಿವಾಚಾರ್ಯರಿಗೆ ಅನಾಮಧೇಯ ವ್ಯಕಿಯು ಮೊಬೈಲ್ ಮೂಲಕ ಶ್ರೀಗಳಿಗೆ ಕೊಲೆ ಬೆದರಿಕೆ ಹಾಕಿರುವ ಸಂಗತಿ ಭಕ್ತ ಸಮೂಹಕ್ಕೆ ತೀವ್ರ ಅಘಾತವನ್ನುಂಟು ಮಾಡಿದೆ ಎಂದು ಮಠದ ಶಿಷ್ಯ ಶರಣಬಸಪ್ಪ ಎಸ್. ಅಲ್ಲೂರ ಹೇಳಿದರು. ಶ್ರೀಗಳಿಗೆ ಮೊಬೈಲ್ ಕರೆ ಮಾಡಿ ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿರುವುದು, ಅಸಂವಿಧಾನಿಕ ಪದಗಳನ್ನು ಬಳಸಿರುವುದು ಖಂಡನೀಯವಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಸಮಗ್ರವಾದ ತನಿಖೆ ನಡೆಸಿ ಮೊಬೈಲ್ ಕರೆ ಮಾಡಿರುವ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸರ್ವೋದಯ ದಿನಾಚರಣೆ
ಶಹಾಪುರ: ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚೆಗೆ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ ದಿನವನ್ನು ಸರ್ವೋದಯ ದಿನವನ್ನಾಗಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಚಾರ್ಯೆ ನಾಗರತ್ನಮ್ಮ ಪಿ. ಓಲೆಕಾರ ಮಾತನಾಡಿದರು. ಶಿಕ್ಷಕರಾದ ಹಣಮಂತ ಪೂಜಾರಿ, ಶಿವಲಿಂಗಪ್ಪ ಸುರಪುರಕರ ಹಾಗೂ ಮಕ್ಕಳಾದ ರಾಜೇಶ್ವರಿ, ರೇಣುಕಾ, ಪ್ರತಿಭಾ, ಹೀನಾ ಕಾರ್ಯಕ್ರಮದ ಕುರಿತು ಮಾತನಾಡಿದರು. ತನುಜಾ, ಸುಪ್ರೀಯ ಪ್ರಾರ್ಥಿಸಿದರು. ಸಿದ್ದಯ್ಯಮಠ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement