ಅಸಮಾನತೆ ನಿವಾರಣೆಗೆ ಚೌಡಯ್ಯ ಕೊಡುಗೆ ಅಪಾರ
ಅಫಜಲ್ಪುರ: 12ನೇ ಶತಮಾನದಲ್ಲಿ ಅಸಮಾನತೆ, ಮೂಢನಂಬಿಕೆಯಿಂದ ಜನರು ಅಂಧಕಾರದಲ್ಲಿ ಮುಳಗಿದ್ದರು. ಸಮಾಜದಲ್ಲಿರುವ ಕಳಂಕ ಅಂಧಕಾರ ಹೋಗಲಾಡಿಸಿ, ಜನರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜ ಉದ್ಧರಿಸುವ ಕಾರ್ಯ ಮಾಡಿದ ಕೀರ್ತಿ ನಿಜ ಶರಣ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಎಂದು ಮಾಶಾಳ ಜಿ.ಪಂ. ಸದಸ್ಯ ಪ್ರಕಾಶ ಜಮಾದಾರ ಹೇಳಿದರು.
ಅವರು ತಾಲೂಕಿನ ಮಾಶಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ, ಅಂಬಿಗರ ಚೌಡಯ್ಯ ತಮ್ಮ ವಚನದ ಮೂಲಕ ಸಮಾಜಕ್ಕೆ ಸಂದೇಶ ನೀಡಿದರು. ನ್ಯಾಯ ಕೊಡುವ ಉದ್ದೇಶದಿಂದ ಕಾಯಕವೇ ಕೈಲಾಸ ಎಂಬ ವಾಣಿಯಂತೆ ಸಮಾಜವನು ಪರಿವರ್ತನೆ ಮಾಡುವಲ್ಲಿ ಹಗಲಿರಳು ಶ್ರಮಿಸಿದರು.
ದಾರಿದೀಪ: ಸಮಾಜದಲ್ಲಿ ದಾರಿದ್ರ್ಯ ಹೊಗಲಾಡಿಸುವಲ್ಲಿ ಅವರ ವಿಚಾರಧಾರೆಗಳು, ವಚನಗಳು ನಮಗೆಲ್ಲರಿಗೂ ದಾರಿದೀಪ. ಅವರ ತತ್ವವಚನಗಳು ಆದರ್ಶಗಳನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಂಬಿಗರ ಚೌಡಯ್ಯನವರನು ಗೌರವಿಸಿದಂತಾಗುತ್ತದೆ ಎಂದು ಹೇಳಿದರು.
ಕೋಲಿ ಸಮಾಜದ ಮಹಾನುಭಾವ: ಮಾಜಿ ಶಾಸಕ ಎಂ.ವೈ. ಪಾಟೀಲ ಅವರು ನಿಜಶರಣ ಅಂಬಿಗರ ಚೌಡಯ್ಯ ಸಮುದಾಯ ಭವನ ಉದ್ಘಾಟಿಸಿ, ಚೌಡಯ್ಯರ ನೇರ ನುಡಿ ಹಾಗೂ ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ದಿ. ವಿಠ್ಠಲ ಹೆರೂರವರು ಕೋಲಿ ಸಮಾಜವನು ಒಂದುಗೂಡಿಸಲು ಹಗಲಿರಳು ಶ್ರಮಿಸಿದ್ದಾರೆ. ಸಮಾಜದಲ್ಲಿರುವ ಗುಲಾಮಗಿರಿಯನು ಹೊಡೆದೊಡಿಸಿ, ಕೋಲಿ ಸಮಾಜ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಮಾಜದ ಸಂಘಟನೆ ಮೂಲಕ ನಿರಂತರ ಹೋರಾಟ ಮಾಡಿ ತಮ್ಮ ಪ್ರಾಣವನೇ ಸಮಾಜಕ್ಕಾಗಿ ಮುಡುಪಾಗಿಟ್ಟಿದ್ದರು. ಈ ಸಮಾಜ ಶೈಕ್ಷಣಿಕವಾಗಿ ಆರ್ಥಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ವಿಠ್ಠಲ ಹೆರೂರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.
ಜಿಲ್ಲಾ ಕರವೇ ಅಧ್ಯಕ್ಷ ಶಿವಕುಮಾರ ನಾಟೀಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಣ್ಣಪ್ಪ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚಂದ್ರಕಾಂತ ಬಾರಮಣಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಶೋಭಾ ಬಾಣಿ ಅಂಬಿಗರ ಚೌಡಯ್ಯರ ಧ್ವಜಾರೋಹಣ ನೆರವೇರಿಸಿದರು. ಮಲ್ಲಿಕಾರ್ಜುನ ಗಂಜಿ, ಶಂಕರ ಮ್ಯಾಕೇರಿ, ತಾಲೂಕು ಕರವೇ ಅಧ್ಯಕ್ಷ ರಾಜು ಉಕ್ಕಲಿ, ನಾಮದೇವ ಕಡಕೋಳ, ತುಕಾರಾಮಗೌಡ ಪಾಟೀಲ, ಶರಣಪ್ಪ ಕಣ್ಮೆಶ್ವರ, ಬಾಬಾಸಾಹೇಬ ಪಾಟೀಲ, ಶಿವಣ್ಣಾ ಪಾರಗೊಂಡ, ಶಿವರುದ್ರಪ್ಪ ಅವಟೆ, ಶಿವು ಪ್ಯಾಟಿ, ಶಿವಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಸಪ್ಪನಗೊಳ, ಪ್ರಭು ಜಮಾದಾರ ಇದ್ದರು.