ಇಂದಿನಿಂದ ಇಂಗ್ಲಿಷ್ ತರಬೇತಿ
ಗುಲ್ಬರ್ಗ: ನಗರದ ಸೆಂಟ್ ಮೆರಿಸ್ ಚರ್ಚ್ ಮುಂಭಾಗದ ಗುಡ್ಲಕ್ ಹೋಟೆಲ್ ಬಳಿಯ ಆಕ್ಸ್ಫರ್ಡ್ ಇಂಗ್ಲಿಷ್ ಅಕಾಡೆಮಿಯಲ್ಲಿ ಫೆ.3 ರಿಂದ 9ರವರೆಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7 ರಿಂದ 8.30ರವರೆಗೆ ಹಾಗೂ ಸಂಜೆ 4.30 ರಿಂದ 6 ಗಂಟೆವರೆಗೆ ತರಬೇತಿಗಳು ನಡೆಯಲಿವೆ. ಮಾಹಿತಿಗೆ ಕೇಂದ್ರದ ಮುಖ್ಯಸ್ಥೆ ಗಿರಿಜಾ ಮೊ. 9343599977 ಸಂಪರ್ಕಿಸಲು ಕೋರಲಾಗಿದೆ.
ಭೋಸ್ ಜಯಂತಿ
ಗುಲ್ಬರ್ಗ: ಇಂದಿನ ವಿದ್ಯಾರ್ಥಿ ಯುವಜನರಿಗೆ ನೇತಾಜಿಯವರ ಜೀವನ, ಆದರ್ಶ, ಮೌಲ್ಯ ಮತ್ತು ಅವರ ಹೋರಾಟ ಸ್ಫೂರ್ತಿಯಾಗಬೇಕೆಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ ಹೇಳಿದರು. ಆಲ್ ಇಂಡಿಯ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ ವತಿಯಿಂದ ಮಿಲಿಂದ ಪ್ರೌಢಶಾಲೆಯಲ್ಲಿ ನೇತಾಜಿ ಸುಭಾಶ್ಚಂದ್ರ ಭೋಸ್ 117ನೇ ಜಯಂತಿಯಲ್ಲಿ ಮಾತನಾಡುತ್ತಿದ್ದರು. ಸಂಘಟನೆಯ ಸ್ಥಳೀಯ ನಗರ ಅಧ್ಯಕ್ಷ ಮಲ್ಲಿನಾಥ ಸಂಘೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಗುರು ಆನಂದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹಣಮಂತ ಎಸ್.ಎಚ್. ನಿರೂಪಿಸಿ, ಅಜಯ ಜಾಧವ ವಂದಿಸಿದರು.