ನಾಳೆ ಜಾತ್ರಾ ಮಹೋತ್ಸವ
ಗುಲ್ಬರ್ಗ: ನಗರದ ಆಳಂದ ರಸ್ತೆಯಲ್ಲಿರುವ ವಿಶ್ವರಾಧ್ಯ ದೇವಸ್ಥಾನದ 21ನೇ ಜಾತ್ರಾ ಮಹೋತ್ಸವ ಫೆ.4 ರಂದು ನಡೆಯಲಿದೆ ಎಂದು ವಿಶ್ವರಾಧ್ಯ ಸೇವಾ ಸಮಿತಿ ತಿಳಿಸಿದೆ. ಫೆ.4 ರಂದು ಬೆಳಗ್ಗೆ 8ಕ್ಕೆ ಮಹಾರುದ್ರಭಿಷೇಕ, ಸಂಜೆ 5ಕ್ಕೆ ಪಲ್ಲಕಿ ಮಹೋತ್ಸವ ಹಾಗೂ 6ಕ್ಕೆ ರಥೋತ್ಸವ ಜರುಗಲಿದೆ. 7ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಅಬ್ಬೆತುಮಕೂರ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠದ ಗಂಗಾಧರ ಶಿವಾಚಾರ್ಯ ಸಾನಿಧ್ಯ ವಹಿಸುವರು. ಗುರು ಪಾದಲಿಂಗ ಶಿವಯೋಗಿ, ಮಹಾಂತೇಶ್ವರ ಶಿವಾಚಾರ್ಯ ಉಪಸ್ಥಿತರಿರುವರು. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅತಿಥಿಗಳಾಗಿ ಆಗಮಿಸುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶ್ವರಾಧ್ಯರ ಕೃಪೆಗೆ ಪಾತ್ರರಾಗಲು ಬಸವರಾಜ ಶೀಲವಂತ ತಿಳಿಸಿದ್ದಾರೆ.
5ರಂದು ರಥಸಪ್ತಮಿ
ಗುಲ್ಪರ್ಗ: ಶ್ರೀನಿವಾಸ ಸರಡಗಿಯ ಶ್ರೀನಿವಾಸ ದೇವರ ರಥಸಪ್ತಮಿ ಕಾರ್ಯಕ್ರಮ ಫೆ.5ರಿಂದ 7ರವರೆಗೆ ನಡೆಯಲಿದೆ. ಫೆ.5ರಂದು ಪೂರ್ಣಾನಂದ ಸ್ವಾಮಿ ಆರಾಧನೆ, ಬೆಳಗ್ಗೆ 6 ಗಂಟೆಯಿಂದ ಸುಪ್ರಭಾತ ಸೇವೆ, ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಸೇವೆ, ರುದ್ರಾಭಿಷೇಕ, ಗುರುಗಳ ಪಾದ ಪೂಜೆ, ನೈವೇದ್ಯ ಮಹಾಮಂಗಳಾರತಿ ಹಾಗೂ 2 ಗಂಟೆಗೆ ಪ್ರಸಾದವಿರುವುದು. ಫೆ.6ರಂದು ರಥಸಪ್ತಮಿ ಉತ್ಸವ ನಡೆಯಲಿದೆ. 7ರಂದು ಗೋಪಾಳ ಕಾಲ ಕಾರ್ಯಕ್ರಮ ನಂತರ ವಿಶೇಷ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.