ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಿಕಾರ್ಡ್ ಸಿಬ್ಬಂದಿ ಪಾಲ್ಕಿ ಬೀಳ್ಕೊಡುಗೆ

Srinivasa Murthy VN
Updated On : 3 Feb 2014, 11:18 am

ಜೇವರ್ಗಿ: ಸಾರ್ವಜನಿಕರ ಸೇವೆಯಲ್ಲಿದ್ದಾಗ ನಿಸ್ವಾರ್ಥರಾಗಿರಬೇಕು, ಅದರಿಂದ ಬದುಕಲ್ಲಿ ನೆಮ್ಮದಿ ಕಾಣುವುದು ಸಾಧ್ಯ ಎಂದು ಮಲ್ಲಿಕಾರ್ಜುನ ಪಾಲ್ಕಿ ನುಡಿದರು. ಜೇವರ್ಗಿ ಪಿಕಾರ್ಡ್ ಬ್ಯಾಂಕ್‌ನಲ್ಲಿ ಸೇವೆಯಲ್ಲಿದ್ದು, ನಿವೃತ್ತರಾಗಿರುವ ಅವರಿಗೆ ಸಿಬ್ಬಂದಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಬ್ಯಾಂಕಿನ ಉಪಾಧ್ಯಕ್ಷ ಶಂಕರ ಕಟ್ಟಿ ಸಂಗಾವಿ ಮಾತನಾಡಿ, ಅಭಿವೃದ್ಧಿ ಕೆಲಸಕ್ಕಾಗಿ ಮಲ್ಲಿಕಾರ್ಜುನ ಪಾಲ್ಕಿ ಸೇವೆ ಸಲ್ಲಿಸಿದ್ದಾರೆ. ಅವರಲ್ಲಿರುವ ಸೇವಾ ಮನೋಭಾವ ಉಳಿದ ಸಿಬ್ಬಂದಿ ಬೆಳೆಸಿಕೂಳ್ಳಬೇಕು ಎಂದರು.
ವ್ಯವಸ್ಥಾಪಕ ಎಸ್.ಎಂ. ಸೋಲಾಪುರ ಮಾತನಾಡಿ, ಸೇವೆಯಲ್ಲಿದ್ದಾಗ ಹಲವಾರು ಕಹಿ ಸಿಹಿ ಘಟನೆಗಳನು ಮೇಲಕು ಹಾಕಿದ ವಯೋವುತಿ ಅನುಸಾರ ಸೇವಾ ನಿವೃತ್ತಿ ಅನಿವಾರ್ಯ ಎಂದರು.
ಬ್ಯಾಂಕಿನ ಅಧ್ಯಕ್ಷ ಪ್ರೇಮನಗೌಡ ಬಿರಾದಾರ ಆರಳಗುಂಡಗಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಸಾಹೇಬಗೌಡ ಸೊನ, ದೊಡ್ಡಪ್ಪಗೌಡ ಹುಲ್ಲೂರ, ಬಸವರಾಜ ಹುಗ್ಗಿ, ಹೊನಪ್ಪ ಹರವಾಳ, ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಅಬ್ದುಲ್ ರಹಿಮಾನ್ ಪಟೇಲ ಜಿಲ್ಲಾ ಕಸ್ಕರ್ಡ್ ಬ್ಯಾಂಕಿನ ಬನಶಂಕರ ಅಂಗಡಿ, ಸೇಡಂ ಪಿಕಾರ್ಡ್ ಬ್ಯಾಂಕಿನ ಧಕನಿ ಸೇರಿದಂತೆ ಜೇವರ್ಗಿ ಬ್ಯಾಂಕಿನ ಸಿಬ್ಬಂದಿಗಳಾದ ಲೆಕ್ಕಾಧಿಕಾರಿ ನಾನಾಗೌಡ ಬಿರಾದಾರ, ಕ್ಷೇತ್ರಾಧಿಕಾರಿ ಜಯಶ್ರೀ ನಾಯಿಕೋಡಿ, ಶಾಂತಪ್ಪ ಕಡಗಂಚಿ, ಸಂಗಣ್ಣ ಗುರುಮೂರ್ತಿ, ಪೀರಪ್ಪ ದೊಡ್ಡಮನಿ ಸ್ವಾಗತಿಸಿದರು. ಕಲ್ಯಾಣರಾವ ಕಣಮೇಶ್ವರ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement