ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಲೋಕಸಭಾಗೆ ಸ್ಪರ್ಧಿಸಲು ಆಮ್ ಆದ್ಮಿ ಅರ್ಜಿ

Srinivasa Murthy VN
Updated On : 3 Feb 2014, 11:21 am

ಗುಲ್ಬರ್ಗ: 2014ರ ಲೋಕಸಭಾ ಚುನಾವಣೆಯಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚೆಯುಳ್ಳವರು ಆಮ್ ಆದ್ಮಿ ಪಕ್ಷ ಅಧಿಕೃತ ವೆಬ್‌ಸೈಟ್ www.aamaadmiparty.org ನಿಂದ ಅರ್ಜಿ ಸಲ್ಲಿಸಬಹುದು ಎಂದು ಆಮ್ ಆದ್ಮಿ ಪಕ್ಷದ ವಿಶಾಲ ಪ್ರತಾಪ ಸಿಂಗ್ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಅಧೀಕೃತ ವೆಬ್ ಸೈಟ್‌ನಿಂದ ಅರ್ಜಿ ಡೌನ್‌ಲೌಡ್ ಮಾಡಿಕೊಂಡು ಅರ್ಜಿಯಲ್ಲಿ ಕೇಳಿರುವ ಮಾಹಿತಿಯನು ಭರ್ತಿ ಮಾಡಿ ಅರ್ಜಿ ಸಲ್ಲಿಸಬುಹುದು. ಅಂಗಿಕೃತ ಅಭ್ಯರ್ಥಿಗಳ ಆಯ್ಕೆಯನು ಪಕ್ಷದ ಸದಸ್ಯರು ಹಾಗೂ ಗುಲ್ಬರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜನರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನಿಸಲಾಗುವುದು. ಮಾಹಿತಿಗೆ 9900379702 ಸಂಪರ್ಕಿಸಿ.

ಹೊರಡಿಸದ ಸೌಲಭ್ಯ ಅಧಿಸೂಚನೆ
ಗುಲ್ಬರ್ಗ: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರಿಗೆ ಸೌಲಭ್ಯಗಳನು ವಿಸ್ತರಿಸುವಂತೆ ರಾಜ್ಯ ಸರ್ಕಾರದ ನಿರ್ಧಾರ ಕೈಗೊಂಡು ವರ್ಷವಾದರೂ ಅಧಿಸೂಚನೆ ಹೊರಡಿಸಿಲ್ಲ ಎಂದು ಮಹಾಮಂಡಲದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಹೇಳಿದರು. ಈ ಬಗ್ಗೆ ಸರ್ಕಾರಕ್ಕೆ ಆದೇಶ ನೀಡಿ ನ್ಯಾಯ ಒದಗಿಸಬೇಕೆಂದು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಂಡಲ ರಾಜ್ಯಪಾಲರಿಗೆ ಮನವಿ ಮಾಡಿದೆ. ಕರ್ನಾಟಕ ಎಲ್ಲಾ ಅರ್ಹ ನೌಕರರಿಗೆ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 ರ ಮೇರೆಗೆ ಸೌಲಭ್ಯಗಳನು ವಿಸ್ತರಿಸಲು ಅನುವಾಗುವಂತೆ ಎಲ್ಲಾ ಅರ್ಹ ನೌಕರರ ಹೆಸರುಗಳನು ಫೆ.15ರ ಒಳಗಾಗಿ ಅಧಿಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ಅದೇಶವನು ನೀಡಬೇಕೆಂದು ವಿನಂತಿಸಿದ್ದಾರೆ. ಸರ್ಕಾರ ಈ ಬಗ್ಗೆ ಆದೇಶ ನೀಡದಿರುವುದೇ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಮಹಾಮಂಡಲದ ಅಧ್ಯಕ್ಷ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿದ್ದಾರೆ.

'ಕೈ' ಸಮಾವೇಶದಲ್ಲಿ ಚಹಾ ವಿತರಣೆ
ಗುಲ್ಬರ್ಗ: ಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ಮಣಿಶಂಕರ ಅಯ್ಯರು ಮೋದಿ ಪ್ರಧಾನಮಂತ್ರಿಯಾಗಲು ಲಾಯಕ್ಕಿಲ್ಲ. ಅವರು ಚಹಾ ಮಾರಲು ಇಚ್ಛಿಸಿದರೆ ಈ ಅಧಿವೇಶನದಲ್ಲಿ ಚಹಾ ಸ್ಟಾಲ್‌ಗೆ ಅವಕಾಶ ಮಾಡಿಕೊಡುತ್ತೇವೆ. ಚಹಾ ಮಾರಲಿ ಎಂದು ಹೇಳಿಕೆ ನೀಡಿದ್ದಕ್ಕೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪರಶುರಾಮ ನಸಲವಾಯಿ ಮತ್ತು ಶೈಲೇಶ ಗುಣಾರಿ ಹಾಗೂ ಉಪಾಧ್ಯಕ್ಷ ಬಸವರಾಜ ಮದ್ರಿಕಿ ನೇತೃತ್ವದಲ್ಲಿ ಸೋನಿಯಾಗಾಂಧಿ ಭಾಗವಹಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಸಾವಿರಾರು ಸಾರ್ವಜನಿಕರಿಗೆ ಉಚಿತ ಚಹಾ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಸುನಿಲ್ ಮಹಾಗಾಂವಕರ್, ನಾಗರಾಜ ಮಹಾಗಾಂವಕರ್, ಕಿರಣ ಅಷ್ಟಗಿಕರ್, ಬಸವರಾಜ ರಾಠೋಡ, ಸಚೀನ್, ರಾಜಶೇಖರ, ಮಹಾಂತೇಶ, ಕಾರ್ಯಕರ್ತರು ಇದ್ದರು.

ಸೆಮಿಸ್ಟರ್ ಪದ್ಧತಿಗೆ ವಿರೋಧ
ಗುಲ್ಬರ್ಗ: ಐಟಿಐಗೆ ಸೆಮಿಸ್ಟರ್ ಪದ್ಧತಿಯನು ಕೈ ಬಿಡಬೇಕೆಂದು ಆಲ್ ಇಂಡಿಯ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ ಜಿಲ್ಲಾ ಸಮಿತಿ ಹಾಗೂ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಯು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್‌ರನು ಆಗ್ರಹಿಸಿದರು. ಐ-ವಾನ್-ಏ- ಶಾಹಿಯ ಅತಿಥಿ ಗೃಹದಲ್ಲಿ ನಿಯೋಗದೊಂದಿಗೆ ಭೇಟಿ ಮಾಡಿ ವಿದ್ಯಾರ್ಥಿಗಳ ಜೊತೆ ಮಾತನಾಡಲು ಆಹ್ವಾನಿಸಿ ಮನವಿ ಸಲ್ಲಿಸಲಾಯಿತು. ನಂತರ ಸರ್ಕಾರಿ ಐಟಿಐ ಕಾಲೇಜಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸುದೀರ್ಘವಾಗಿ ಸೆಮಿಸ್ಟರ್ ಪದ್ಧತಿ ವಾಪಸಾತಿಯ ಬೇಡಿಕೆಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್‌ನ ಜಿಲ್ಲಾ ಸಮಿತಿ ಅಧ್ಯಕ್ಷ ಮಹೇಶ ನಾಡಗೌಡ ನೇತೃತ್ವದಲ್ಲಿ ಸಮಿತಿಯ ಮಹೇಶ ಎಸ್.ಬಿ, ಭಾಗಣ್ಣ ಬಿ.ಬುಕ್ಕಾ, ಶಂಕರ ಹೂಗಾರ, ಭೀಮಾಶಂಕರ ಹಾಗೂ ವಿದ್ಯಾರ್ಥಿಗಳಾದ ಪ್ರವೀಣ, ಅರ್ಜುನ, ಅರುಣ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದಿನಚರಿ ಪುಸ್ತಕ ಬಿಡುಗಡೆ
ಗುಲ್ಬರ್ಗ: ಆಶಾ ಕಾರ್ಯಕರ್ತೆಯರು ದಿನಚರಿಯನು ದಿನಂಪ್ರತಿ ಬರೆಯುವಂತೆ ಹಾಗೂ ದಿನಚರಿ ಬಗ್ಗೆ ಪೂರ್ಣ ಮಾಹಿತಿಯನು ಹಿರೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂಗೀತಾ ಎಂ.ರಾವ್ ತಿಳಿಸಿದರು. ಗುಲ್ಬರ್ಗ ತಾಲೂಕಿನ ಹಿರಕೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಶಾ ದಿನಚರಿ ಪುಸ್ತಕ ಬಿಡುಗಡೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಲ್ಲ ಆಶಾ ಕಾರ್ಯಕರ್ತೆಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಎಸ್.ಮದನಕರ್, ಸಿಬ್ಬಂದಿ ಹಿರಿಯ ಆರೋಗ್ಯ ಸಹಾಯಕ ಇಕ್ಬಾಲ್ ಮಹಾರಾವಿ, ಅನೀಲಕುಮಾರ ಜಾಧವಿ, ಕಿರಿಯ ಆರೋಗ್ಯ ಸಹಾಯಕಿ ಮಲ್ಲಮ್ಮ ಉಪಾಶೆ, ಸುವರ್ಣ, ಮಂಜುಳಾ.ಬಿ, ರಾಜಶೇಖರ ತೇಲಿ, ಔಷಧ ತಂತ್ರಜ್ಞ ಫಾರೂಕ್ ಅಲಿ, ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಮಲಕಪ್ಪ ಮುಂತಾದವರು ಉಪಸ್ಥಿತರಿದ್ದರು.

ಇಂದು ದತ್ತಿ ಉಪನ್ಯಾಸ
ಗುಲ್ಬರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು  ಕಮಲಪುರ ಸಹಯೋಗದಲ್ಲಿ ಮಾತೋಶ್ರೀ ಮಹಾದೇವಿಯಮ್ಮ ಮತ್ತು ಗುರುಪಾದಪ್ಪ ಮಾಲಿಪಾಟೀಲ್ ಸ್ಮರಣಾರ್ಥ ಫೆ.3 ರಂದು 11ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜಿ.ಪಿ. ಚಿಕ್ಕರಿಯಪ್ಪ ಹಾಗೂ ಜಿಪಂ ಸದಸ್ಯ ಬಸವರಾಜ ಮಾಲಿಪಾಟೀಲ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಿವೃತ್ತ ಕೃಷಿ ಅಧಿಕಾರಿ ಶಿವಶಾಂತ ರೆಡ್ಡಿ ವಚನ ಮಾಡುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ  ಹಿರಿಯ ಸಾಹಿತಿ ಗೊ.ರು. ಚನಬಸಪ್ಪ ಯುವಶಕ್ತಿ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಝಡ್.ಬಿ. ಉಮರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಇಂದು ಕಾರ್ಯಾಗಾರ
ಗುಲ್ಬರ್ಗ: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಭೂ ಸ್ವಾಧೀನ ಕಾಯ್ದೆಯಲ್ಲಿ ಪಾರದರ್ಷಕತೆ ಮತ್ತು ಸೂಕ್ತ ಪರಿಹಾರ ಹಕ್ಕು, ಪುನನಿರ್ಮಾಣ ಹಾಗೂ ಪುನರ್ವಸತಿ ಕಾಯ್ದೆ 2013 ಕುರಿತು ಒಂದು ದಿನದ ಕಾರ್ಯಾಗಾರವನು 2014ರ ಫೆ.3ರಂದು ಗುಲ್ಬರ್ಗ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಏರ್ಪಡಿಸಿದೆ.

ಅರ್ಜಿ ಆಹ್ವಾನ
ಗುಲ್ಬರ್ಗ: ತೋಟಗಾರಿಕೆ ಇಲಾಖೆಯಿಂದ ಕೈತೋಟ ಮತ್ತು ತಾರಸಿ ತೋಟಗಳ ಅಭಿವೃದ್ಧಿ ಯೋಜನೆಯಡಿ ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಆಸಕ್ತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಗುಲ್ಬರ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ಕಚೇರಿಯಿಂದ ಅರ್ಜಿಗಳನು ಪಡೆದು ಭರ್ತಿ ಮಾಡಿ ಫೆ.10 ರೊಳಗಾಗಿ ಸಲ್ಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement