ವಿದ್ಯಾರ್ಜನೆ ನಿಮ್ಮದಾಗಲಿ: ವಿದ್ಯಾಸಾಗರ
ಜೇವರ್ಗಿ: ಆಧುನಿಕ ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು ಎಂದು ಡಾ. ಐ.ಎಸ್. ವಿದ್ಯಾಸಾಗರ ನುಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟದ ವತಿಯಿಂದ ವಿಶೇಷ ಉಪನ್ಯಾಸ ಹಾಗೂ ವಾರ್ಷಿಕ ಸಪ್ತಾಹ ಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಸವರಾಜ ಕೊಂಬಿನ್ ರಿಜರ್ವ ಬ್ಯಾಂಕ್ ಸ್ಥಾಪನೆಯಲ್ಲಿ ಅಂಬೇಡ್ಕರ್ ಪಾತ್ರ ಕುರಿತು ಮಾತನಾಡಿದರು. ಸಂಚಾಲಕ ಗಿರೀಶ ರಾಠೋಡ ಪ್ರಾಸ್ತಾವಿಕ ನುಡಿದರು.
ಸಹಾಯಕ ಪ್ರಾಧ್ಯಾಪಕ ಡಾ. ವಿಷ್ಣುವರ್ಧನ್ ಸ್ವಾಗತಿಸಿದರು. ಕರಿಗೋಳೇಶ್ವರ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಅತಿಥಿ ಪರಿಚಯ ಮಾಡಿಕೊಟ್ಟರು.
ಕು. ಸವಿತಾ ನಿರೂಪಿಸಿದರು. ಪ್ರಾಧ್ಯಾಪಕರುಗಳಾದ ಡಾ. ರಾಮಲಿಂಗ ಭೋಸ್ಲೆ, ಪ್ರಭುಶೆಟ್ಟಿ, ಅನುಸೂಯಾ ಪಾಟೀಲ, ಗೀತಾರಾಣಿ, ಶರಣಮ್ಮ, ನಾಗರೆಡ್ಡಿ, ವಿರೇಶ ಕ್ಷತ್ರಿಯ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಗುರುಪ್ರಕಾಶ ಹೂಗಾರರ ವಂದಿಸಿದರು.