ಶೇಂಗಾ ರೈತರ ಬದುಕು ಮಂಗಮಾಯ!
ವಿಶೇಷ ವರದಿ
ಕನಡಪ್ರಭ ವಾರ್ತೆ, ಗುರುಮಠಕಲ್, ಫೆ.2
ಯಾದಗಿರಿ ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಶೇಂಗಾ ಬೆಳೆದ ರೈತರ ಬಾಳು ಹಸನಾಗುತ್ತದೆ ಎನುವ ಕನಸಿನಲ್ಲಿ ಇದ್ದಂತಹ ರೈತರ ಬದುಕು ಇದೀಗ ಮೂರಾಬಟ್ಟೆಯಾಗಿ ಮಾರ್ಪಟಿದೆ.
'ತೊಗರಿ ಕಣಜ'ವೆಂದೇ ಕರೆಯಲ್ಪಡುವ ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ರೈತರು ತೊಗರಿ ಬೆಳೆದು ನಷ್ಟ ಅನುಭವಿಸುತ್ತಲ್ಲಿರುವ ಹಿನೆಲೆಯಲ್ಲಿ ಪರ್ಯಾಯ ಬೆಳೆಯಾಗಿ ಶೇಂಗಾ ಬೆಳೆದು ಲಾಭ ಪಡೆಯುತ್ತಿದ್ದಾರೆ.
ಆದರೆ ಅದಕ್ಕೆ ಹೆಚ್ಚಿನ ಒತ್ತು ನೀಡಿ ಶೇಂಗಾ ಬೆಳೆಯಲು ಮುಂದಾಗಿ ಇತರೆ ಬೆಳೆಗಳಿಗಿಂತ ಶೇಂಗಾಕ್ಕೆ ಅಧಿಕ ಪ್ರಾಧಾನ್ಯತೆ ನೀಡಿ ತಮ್ಮ ಜಮೀನಿನಲ್ಲಿ ಶೇಂಗಾ ಬೆಳೆದು ಲಾಭ ಪಡೆಯಬಹುದು ಎನುವ ಅಸೆಯಲ್ಲಿದ್ದ ರೈತಾಪಿ ಜನತೆಗೆ ಈ ಭಾರಿ ಆಘಾತ ಉಂಟಾಗಿದೆ.
ಅಧಿಕ ಪ್ರಮಾಣದ ಬಿತ್ತನೆ: ಕಳೆದ ವರ್ಷ ತಾಲೂಕಿನಾದ್ಯಂತ ಸುಮಾರು 16,452 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯನು ಬೆಳೆಯಲಾಗಿತ್ತು. ಆದರೆ ಈ ಬಾರಿ ಸುಮಾರು 24,619 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದೆ.
ಬಿತ್ತನೆ ಮಾಡಿದ ಬೆಳೆಗೆ ಎಲೆ ಚುಕ್ಕಿ ರೋಗ ಹಾಗೂ ಸುರುಳಿ ರೋಗದ ಭೀತಿ ಹೆಚ್ಚಾಗಿದೆ. ರೈತರು ಸುರುಳಿ ಪೀಡೆ ರೋಗದಿಂದಾಗಿ ಇಳುವರಿ ಕಡಿಮೆ ಆಗಿ ಪ್ರತಿ ಎಕರೆಗೆ 20-25 ಚೀಲ ಶೇಂಗಾ ಬೆಳೆಯುವಲ್ಲಿ ಈ ಬಾರಿ 10-15 ಚೀಲ ಪಡೆಯುವ ಸ್ಥಿತಿಗೆ ಬಂದಿದ್ದಾರೆ.
ಖರ್ಚು ಅಧಿಕ: ಶೇಂಗಾಕ್ಕೆ ಉತ್ತಮ ಲಾಭ ಸಿಗುತ್ತದೆ ಎನುವ ಆಸೆಯಿಂದ ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಅಧಿಕ ಪ್ರಮಾಣದ ಖರ್ಚು ಸಹ ಮಾಡಿದ್ದಾರೆ. ಪ್ರತಿ ಕ್ವಿಂ. ಶೇಂಗಾಕ್ಕೆ 6,500ಕ್ಕೂ ಹೆಚ್ಚಿನ ದರದಲ್ಲಿ ಖರೀದ ಮಾಡಿದ್ದಾರೆ. ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಬಳಕೆಗೆ ಮಾಡಿದ ಖರ್ಚು ಮರಳುತ್ತದೆಯೋ ಇಲ್ಲವೋ ಎನುವ ಚಿಂತೆಯಲ್ಲಿದ್ದಾರೆ.
ಹೆಚ್ಚಿದ ಹಂದಿ ಕಾಟ: ಒಂದು ಕಡೆ ಸರಿಯಾದ ಇಳುವರಿ ಇಲ್ಲ. ಇನೊಂದು ಕಡೆ ರೋಗ ಬಾಧೆಯಿದ್ದರೆ ಅದಕ್ಕೆ ಸಾಥ್ ನೀಡುವಂತೆ ಕಾಡು ಹಂದಿಗಳ ಕಾಟ ಜಾಸ್ತಿಯಾಗಿದೆ.
ಕಾಡು ಹಂದಿಗಳಿಂದ ಬೆಳೆ ರಕ್ಷಣೆಗೆ ರೈತರು ಏನೆಲ್ಲ ಪ್ರಯತಗಳನು ಮಾಡಿದರೂ ಕೂಡ ಉಪಯೋಗಕ್ಕೆ ಬಾರದೆ ಇರುವುದು ರೈತಾಪಿ ಜನತೆಯನು ಚಿಂತೆಗೆ ದೂಡುವಂತೆ ಮಾಡಿದೆ.
ಮಾರುಕಟ್ಟೆಯಲ್ಲಿ ಕಳೆದ ವರ್ಷ ಪ್ರತಿ ಕ್ವಿಂಟಲ್ ಶೇಂಗಾಕ್ಕೆ ಸುಮಾರು 6500 ರುಪಾಯಿ ಬೆಲೆ ಇತ್ತು. ಆದರೆ ಈ ಬಾರಿ ಬೆಲೆ ಕುಸಿತವಾಗಿ ಸುಮಾರು 2800ರಿಂದ 4000 ಆಗಿದೆ.
ಸರ್ಕಾರ ಗಮನ ಹರಿಸಲಿ: ಸರ್ಕಾರ ನೆರವಿಗೆ ಬಾರದಿರುವುದು ಶೇಂಗಾ ಬೆಳೆದು ಸಂಕಷ್ಟದಲ್ಲಿರುವ ರೈತರ ಬದುಕು ಅತಂತ್ರಕ್ಕೆ ಸಿಲುಕುವಂತೆ ಮಾಡಿದೆ. ಶೀಘ್ರವೇ ಶೇಂಗಾ ಬೆಳೆಗೆ ಬೆಂಬಲ ಘೋಷಣೆ ಮಾಡುವ ನಿರ್ಧಾರ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ.
ಬಿತ್ತನೆ ಸಮಯದಲ್ಲಿ ಪ್ರತಿ ಕ್ವಿಂ. ಶೇಂಗಾಕ್ಕೆ 6500 ದರದಲ್ಲಿ ಮಾರಾಟ ಮಾಡುವ ಸರ್ಕಾರ ಖರೀದಿ ಸಮಯದಲ್ಲಿ ಮಾತ್ರ 3000 ದರದಲ್ಲಿ ಖರೀದಿ ಮಾಡುತ್ತಲ್ಲಿರುವುದು ರೈತರ ವಿರೋಧಿ ನೀತಿಯಾಗಿದೆ.
ನಾಗಯ್ಯ ಗುತ್ತೇದಾರ,
ರೈತ ಮುಖಂಡರು, ದೋರನಹಳ್ಳಿ
ರೈತರಿಗೆ ಆರ್ಥಿಕ ನಷ್ಟವನುಂಟು ಮಾಡಿರುವ ಶೇಂಗಾ ಬೆಳೆಗೆ ಸೂಕ್ತವಾದ ಬೆಲೆ ದೊರಕಿಸಿ ಕೊಡಲು ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರೈತರ ಜೊತೆ ಸೇರಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಕೆ. ಸೋಮಶೇಖರ್,
ರೈತ ಕೃಷಿ ಕಾರ್ಮಿಕರ ಸಂಘಟನೆ