ಸಾವಯವ ಕೃಷಿ ಮಾಡಿ
ಅಫಜಲ್ಪುರ: ರೈತರು ದೇಶದ ಬೆನೆಲುಬು, ರೈತರು ಆರ್ಥಿಕವಾಗಿ ಬಲಿಷ್ಠರಾದಾಗ ಮಾತ್ರ ರಾಷ್ಟ್ರ ಸುಭದ್ರವಾಗಿರುತ್ತದೆ. ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚಿನ ಉತ್ಪಾದನೆ ಮಾಡುವ ತಂತ್ರಜ್ಞಾನವನು ಅಳವಡಿಸಿಕೊಳ್ಳಬೇಕೆಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಪಟ್ಟಣದ ಮಣ್ಣೂರ ಫಂಕ್ಷನ್ ಹಾಲ್ನಲ್ಲಿ ಕೃಷಿ ಇಲಾಖೆ ಅಫಜಲ್ಪುರ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಉತ್ಸವ 2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾವಯವ ಕೃಷಿಯ ಒಂದು ಸಮಗ್ರ ಕೃಷಿ ಉತ್ಪಾದನಾ ನಿರ್ವಹಣೆಯ ಪದ್ಧತಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನು ಬಳಸಿ ಮಣ್ಣಿನ ಫಲವತ್ತತೆ ಕಾಪಾಡಿ ಕೀಟ ಹಾಗೂ ರೋಗಗಳ ನಿರ್ವಹಣೆ ಕೈಗೊಂಡು ರೈತರು ಗುಣಮಟ್ಟದ ಉತ್ಪಾದನೆಯನು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕೃಷಿ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ ಜಲಾನಯನ ಇಲಾಖೆಯಿಂದ ಈ ಕೃಷಿ ಉತ್ಸವ-2014 ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲೂಕಿನ ರೈತರು ಮಳಿಗೆಗಳಿಗೆ ಭೇಟಿ ನೀಡಿ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಮುಂಬರುವ ದಿನಗಳಲ್ಲಿ ಸಿಎಂ ಮೂಲಕ ಅಳ್ಳಗಿ(ಬಿ) ಜಾಕ್ವೆಲ್ ಪಂಪ್ನಿಂದ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ವೇಳೆ ಸಿದ್ರಾಮಪ್ಪ ಪಾಟೀಲ ದಂಗಾಪೂರ, ಜಿಪಂ ಸದಸ್ಯರಾದ ಪ್ರಕಾಶ ಜಮಾದಾರ, ಮತೀನ ಪಟೇಲ, ಸಿದ್ದಾರ್ಥ ಬಸರಿಗಿಡ, ಕೃಷಿ ಉತ್ಸವದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ರಾಜು ತೆಗ್ಗೆಳಿ, ಮಹಾಲಿಂಗ, ಜಹೀರಅಹ್ಮದ, ಮಂಜುನಾಥ ಪಾಟೀಲ ರೈತರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಶಾರದಾಬಾಯಿ ಗಂಡೋಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗಂಗಾಬಾಯಿ ಜಮಾದಾರ, ಬಸವಣ್ಣೆಪ್ಪ ಪಾಟೀಲ, ರಜಾಕಪಟೇಲ, ಅಧಿಕಾರಿಗಳು ಭಾಗವಹಿಸಿದ್ದರು. ಈಶ್ವರ ಬ್ಯಾಡಗಿ ಸ್ವಾಗತಿಸಿ, ಕವಿತಾ ಯರಗಲ್ ನಿರೂಪಿಸಿದರು. ಚವ್ಹಾಣ ವಂದಿಸಿದರು.