ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನಿಂದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯ

Srinivasa Murthy VN
Updated On : 5 Feb 2014, 11:40 am

ಗುಲ್ಬರ್ಗ: ಬಿಜೆಪಿ ಯುವ ಮೋರ್ಚಾ ಗುಲ್ಬರ್ಗ ಗ್ರಾಮಾಂತರ ಜಿಲ್ಲೆ ವತಿಯಿಂದ ಜಿಲ್ಲಾಧ್ಯಕ್ಷ ಪರಶುರಾಮ ನಸಲವಾಯಿಯವರ ನೇತೃತ್ವದಲ್ಲಿ ಫೆ.5ರಿಂದ 8ರ ವರೆಗೆ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.ನಗರದ ಸೈಯದ್ ಅಕ್ಬರ್ ಹುಸೇನಿ, ಕೆಬಿಎನ್ ಪಿಯು ಕಾಲೇಜು ಟರ್ಪ್ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ನಿಮಿತ್ತ ನರೇಂದ್ರ ಕೋ ನಮನ್ ಎಂಬ ಧ್ಯೇಯ ವಾಕ್ಯದಡಿ ಖೇಲೇಗಾ ಯುವ ಜೀತೇಗಾ ಭಾರತ್ ಎಂಬ ಘೋಷಣೆಯೊಂದಿಗೆ ದೇಶದ ಎಲ್ಲಾ ಕ್ರೀಡಾಸಕ್ತರಿಗೆ ಹಾಗೂ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಇಡೀ ಭಾರತ ದೇಶದಾದ್ಯಂತ ಪ್ರತಿ ಜಿಲ್ಲೆಯಿಂದ ಜಿಲ್ಲಾ ಮಟ್ಟದಲ್ಲಿ ಈ ಟೂರ್ನಮೆಂಟ್ ಆಯೋಜಿಸಿದೆ. ಜಿಲ್ಲಾಮಟ್ಟದಲ್ಲಿ ವಿಜೇತ ತಂಡ ವಿಭಾಗ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತವಾದ ಒಂದು ತಂಡ ರಾಜ್ಯಮಟ್ಟದಲ್ಲಿ ಸ್ಪರ್ಧಿಸುತ್ತದೆ. ರಾಜ್ಯಮಟ್ಟದಲ್ಲಿ ವಿಜೇತ ಒಂದು ತಂಡ ರಾಷ್ಟ್ರಮಟ್ಟದಲ್ಲಿ ಹಿಮಾಚಲಪ್ರದೇಶದ ಧರ್ಮಶಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಭಾಗವಹಿಸಲು ಅರ್ಹವಾಗುತ್ತದೆ. ಪೈನಲ್‌ನಲ್ಲಿ ವಿಜೇತ ಒಂದು ತಂಡಕ್ಕೆ 1 ಲಕ್ಷ ಬಹುಮಾನ ಹಾಗೂ ರನ್ನರ್ ತಂಡಕ್ಕೆ 50 ಸಾವಿರ ಬಹುಮಾನ ನೀಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 2 ತಂಡಗಳಂತೆ ಒಟ್ಟು 16 ತಂಡಗಳು ಜಿಲ್ಲಾಮಟ್ಟದಲ್ಲಿ ಆಯ್ಕೆ ಮಾಡಲಾಗುವುದು. ಫೆ.5ರಂದು ನಡೆಯುವ ಪಂದ್ಯಕ್ಕೆ ಮಾಜಿ ಡಿಸಿಎಂ ಆರ್.ಅಶೋಕ ಉದ್ಘಾಟಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement