ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಟ್ರ್ಯಾಕ್ಟರ್ ಸಾಲ: ದಲ್ಲಾಳಿಗಳ ಕಾರುಬಾರು

Srinivasa Murthy VN
Updated On : 5 Feb 2014, 11:37 am

ಶಹಾಪುರ: ಖಾಸಗಿ ಹಣಕಾಸು ಸಂಸ್ಥೆಗಳು ರೈತರ ಮೇಲೆ ತೀವ್ರ ಒತ್ತಡ ಹಾಕಿ ರೈತರ ಉಪಕರಣಗಳಿಗೆಂದು ಸಾಲ ನೀಡುತ್ತವೆ. ನಂತರ ಅಧಿಕ ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ರೈತರು ಹತಾಶೆಗೊಂಡು ವಿಷ ಸೇವಿಸುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಪ್ರಾಂತ ರೈತ ಸಂಘದ ತಾಲೂಕಾ ಅಧ್ಯಕ್ಷ ಮಲ್ಲಣ್ಣಗೌಡ ಮಾಲಿ ಪಾಟೀಲ ಆರೋಪಿಸಿದ್ದಾರೆ.
  ಪಟ್ಟಣದ ನೌಕರರ ಭವನದಲ್ಲಿ ಪ್ರಾಂತ ರೈತ ಸಂಘವು ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
  ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎಸ್. ಎಂ. ಸಾಗರ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ (ಎಸ್.ಬಿ.ಎಚ್) ಟ್ರ್ಯಾಕ್ಟರ್ ಸಾಲ ಪಡೆದಿರುವ ರೈತರು ಒಟ್ಟು  ಮೊತ್ತದಲ್ಲಿ ಶೇ. 48ರಷ್ಟು ಸಾಲವನ್ನು ಮನ್ನಾಮಾಡಿ ಹಣ ಪಾವತಿ ಮಾಡಲು ಸಮ್ಮತಿಸಿದ್ದಾರೆ. ಅದರಂತೆ ಉಳಿದ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಇದೇ ಮಾರ್ಗ ಅಳವಡಿಸಿಕೊಳ್ಳಬೇಕೆಂದರು.
  ಶೇಂಗಾ ಬೆಳೆಯ ಬೆಲೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯ ಪ್ರವೇಶ ಮಾಡಿ ಪ್ರತಿ ಕ್ವಿಂಟಾ  ಲ್‌ಗೆ 6,000 ಬೆಂಬಲ ಬೆಲೆ ಘೋಷಣೆ ಮಾಡಿ ನೇರವಾಗಿ ಖರೀದಿಸಬೇಕು. ತೊಗರಿ ಖರೀದಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.
  ರೈತ ಮುಖಂಡರಾದ ದಾವಲಸಾಬ್ ನದಾಫ್, ಸಿದ್ದಯ್ಯ ಹಿರೇಮಠ, ಎಂ.ಎಸ್.ಗೌಡ, ಗುರಣ್ಣಗೌಡ ಚೆನ್ನೂರ, ನಿಂಗಣ್ಣಬೋನಾಳ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement