ಕಾಂಗ್ರೆಸ್ ಬಲವರ್ಧನೆಗಾಗಿ ಕಾರ್ಯಕರ್ತರಿಗೆ ಮನ್ನಣೆ ನೀಡಿ
ಕ.ಪ್ರ. ವಾರ್ತೆ ಯಾದಗಿರಿ ಜು. 15
ರಾಜ್ಯದಲ್ಲಿ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾರಣ ಪಕ್ಷ ಹೀಗೆಯೇ ಬಲಗೊಳ್ಳುವಲ್ಲಿ ಯಶಸ್ವಿಯಾಗಬೇಕಾದರೆ ಕಾರ್ಯಕರ್ತರಿಗೆ ಮನ್ನಣೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಶ್ರೀನಿವಾಸರೆಡ್ಡಿ ಕಂದಕೂರ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕೆಪಿಸಿಸಿ ಎಸ್‌ಸಿ ಘಟಕದ ರಾಜ್ಯ ಸಂಚಾಲಕ ಚಂದ್ರಕಾಂತ ಹಿಪ್ಪಣಗಾಂವ ನೇತೃತ್ವದ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಗತಿಸಿದೆ.
ಈಗಲಾದರೂ ಪಕ್ಷ ಎಸ್‌ಸಿ, ಎಸ್ಟಿ, ಸೇರಿದಂತೆ ಎಲ್ಲ ಘಟಕದ ಕಾರ್ಯಕರ್ತರಿಗೆ ನಿಗಮ, ಮಂಡಳಿ ಸೇರಿದಂತೆ ಇನ್ನಿತರ ಮಂಡಳಿಗಳಲ್ಲಿ ಸ್ಥಾನಮಾನ ನೀಡಬೇಕು. ಜೊತೆಗೆ ರಾಜ್ಯ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ಡಾ. ಎ.ಬಿ. ಮಾಲಕರೆಡ್ಡಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಣ್ಣ ದಾಸನಕೇರಿ ಹಾಗೂ ಉಪಾಧ್ಯಕ್ಷ ನಿಂಗಪ್ಪ ವಡ್ನಳ್ಳಿ ಮಾತನಾಡಿದರು.
ಸಭೆಯಲ್ಲಿ ಬೀದರ್ ಜಿಲ್ಲೆಯ ಎಸ್‌ಸಿ ಘಟಕದ ಉಪಾಧ್ಯಕ್ಷ ಶ್ಯಾಮರಾವ ಬೊಂಬಳಿಗಿ, ವಿಠಲರಾವ ಸಿಪಿಕರ್, ಶರಣಗೌಡ ಅರಕೇರಿ, ಸುರೇಶ ಜೈನ್, ಎಸ್‌ಸಿ ಘಟಕದ ಬ್ಲಾಕ್ ಅಧ್ಯಕ್ಷ ಕಾಶಪ್ಪ ಚಿನ್ನಾಕರ್, ಶಹಾಪುರದ ಲಾಲಪ್ಪ ಕೆಂಭಾವಿ, ಸುರಪುರದ ಹಣಮಂತ, ಹುಣಸಗಿಯ ಹನುಮ ನಾಯಕ, ವೀರಪ್ಪ ಕಾನಳ್ಳಿ, ಭಾಸ್ಕರ ರಾಮಸಮುದ್ರ, ಕೇಶವ ಚವ್ಹಾಣ, ಶರಣಪ್ಪ ಕುಲೂರ, ಬುಗ್ಗಪ್ಪ ಅರಕೇರಿ ಇದ್ದರು.