ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುಂದುವರಿದ ಕೋರ್ಟ್ ಕಲಾಪ ಬಹಿಷ್ಕಾರ

Srinivasa Murthy VN
Updated On : 16 Jul 2014, 10:38 am

ಗುಲ್ಬರ್ಗ: ಗುಲ್ಬರ್ಗ ಹೈಕೋರ್ಟ್ ಪೀಠ ವ್ಯಾಪ್ತಿಗೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಸೇರ್ಪಡೆ ಸ್ಥಾಪನೆಗೆ ಒತ್ತಾಯಿಸಿ ವಕೀಲರು ನಡೆಸುತ್ತಿರುವ ಕಲಾಪ ಬಹಿಷ್ಕಾರ ಮಂಗಳವಾರವೂ ಮುಂದುವರಿದಿದೆ.ಇಲ್ಲಿನ ಸರ್ದಾರ್ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಕೀಲರು ಸರ್ಕಾರ ಜಿಲ್ಲೆಗಳ ಹಂಚಿಕೆಯಲ್ಲಿ ಗುಲ್ಬರ್ಗ ಪೀಠಕ್ಕೆ ಅನ್ಯಾಯ ಮಾಡಿದೆ. ತಕ್ಷಣ ಈ ಅನ್ಯಾಯ ಸರಿಪಡಿಸಬೇಕು. ಕರ್ನಾಟಕ ಆಡಳಿತಾತ್ಮಕ ಪ್ರಾಧಿಕಾರ (ಕೆಎಟಿ), ಕಂದಾಯ ಹಾಗೂ ಸಹಕಾರ ಮೇಲ್ಮನವಿ ಪ್ರಾಧಿಕಾರಗಳನ್ನು ಗುಲ್ಬರ್ಗದಲ್ಲೇ ಸ್ಥಾಪಿಸಬೇಕು, ಜೊತೆಗೆ ಗ್ರಾಹಕರ ಕುಂದುಕೊರತೆ ಪರಿಹಾರ ಆಯೋಗವನ್ನು ಗುಲ್ಬರ್ಗದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿದರು.
ಬೆಂಗಳೂರಿಗೆ ತೆರಳಿ ಜು.16 ರಂದು ಮುಖ್ಯ ನ್ಯಾಯಮೂರ್ತಿಗಳು, ಮುಖ್ಯಮಂತ್ರಿ, ಕಾನೂನು ಸಚಿವರನ್ನು ಭೇಟಿ ಮಾಡುವುದಾಗಿಯೂ ವಕೀಲರು ಹೇಳಿದ್ದಾರೆ.
ಗುಲ್ಬರ್ಗ ವಕೀಲರು ಆರಂಭಿಸಿರುವ ಹೋರಾಟಕ್ಕೆ ಬೆಂಬಲವಾಗಿ ವಿಜಾಪುರ, ಬೀದರ್, ರಾಯಚೂರು, ಯಾದಗಿರಿ ಜಿಲ್ಲಾ, ತಾಲೂಕು ಕೋರ್ಟ್‌ಗಳಲ್ಲಿಯೂ ವಕೀಲರು ಕಲಾಪ ಬಹಿಷ್ಕರಿಸಿ ಹೋರಾಟಕ್ಕಿಳಿದಿದ್ದಾರೆ. ಜು.18ರ ವರೆಗೂ ವಕೀಲರ ಕಲಾಪ ಬಹಿಷ್ಕಾರ ಮುಂಜದುವರಿಯಲಿದೆ. ಗುಲ್ಬರ್ಗ ಹೋರಾಟದಲ್ಲಿ ವಕೀಲರ ಸಂಘದ ಅಧ್ಯಕ್ಷ  ಎಸ್.ಆರ್. ಭೀಮಳ್ಳಿ, ಕಪನೂರ್ ವಕೀಲರು, ಎಸ್.ಜಿ. ಬಿರಾದಾರ್, ಎಂ.ಎನ್. ಪಾಟೀಲ್, ಹಣಮಂತರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement