ಸಮಾಜಮುಖಿ ಚಿಂತನೆಗಳಿಂದ ಕೃತಿ ಶ್ರೇಷ್ಠ: ವೈಜನಾಥ ಪಾಟೀಲ
ಶಹಾಪುರ: ಸಮಾಜಮುಖಿ ಚಿಂತನೆಗಳಿಂದ ಕೂಡಿದ್ದು ಶ್ರೇಷ್ಠ ಕೃತಿಯಾಗಬಲ್ಲದು. ಆ ನಿಟ್ಟಿನಲ್ಲಿ ಯುವ ಬರಹಗಾರರು ಚಿಂತನೆ ಮಾಡಬೇಕಿದೆ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ವೈಜನಾಥ ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ವಿದ್ಯಾಜ್ಯೋತಿ ಪ್ರಕಾಶನ ಶಹಾಪುರ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನದ ಸಂಯುಕ್ತಾಶ್ರದಲ್ಲಿ ಅಶೋಕ ಚೌಧರಿಯವರ ನಾದ-ನಿನಾದ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಓರೆ ಕೋರೆ ತಿದ್ದುವಂತಿರಲಿ: ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತ್ಯ ಪ್ರೇಮಿ ಅಪ್ಪಾರಾವ ಅಕ್ಕೋಣಿ, ಸಮಾಜದ ಓರೆ-ಕೋರೆಗಳನ್ನು ತಿದ್ದುವ ಸಾಹಿತ್ಯ ಹೊರಬರಬೇಕು ಎಂದು ನುಡಿದರು.
ಪ್ರಕಾಶ ಅಂಗಡಿ ಕನ್ನಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಗೌಡ ಪಾಟೀಲ ಕೃತಿಯನ್ನು ಪರಿಚಯಿಸಿದರು. ಶಾಂತವೀರ ಮುರಘರಾಜೇಂದ್ರ ಶ್ರೀ ಆಶೀರ್ವಚನ ನೀಡಿದರು. ಚಂದ್ರಕಾಂತ ಭಂಡಾರಿ, ಸಿದ್ದಲಿಂಗಣ್ಣ ಆನೆಗುಂದಿ, ಸಿದ್ರಾಮ ಹೊನ್ಕಲ್, ಸುರಪುರ ಕಸಾಪ ಅಧ್ಯಕ್ಷ ಶಾಂತಪ್ಪ ಬೂದಿಹಾಳ, ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ, ಹಿರಿಯ ಸಾಹಿತಿ ಪಾ.ವಿ. ಅರಕೇರಿ, ಗುರುಪಾದ ಸ್ವಾಮೀಜಿ ಇದ್ದರು.
ಶಿಷ್ಯವೇತನಕ್ಕಾಗಿ ಅರ್ಜಿ
ಯಾದಗಿರಿ: ಪ್ರಸಕ್ತ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳ ಮೆರಿಟ್ ಶಿಷ್ಯವೇತನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಿಸಲಾಗುತ್ತಿದ್ದು, ಈಗಾಗಲೇ ಆನ್ಲೈನ್ ಅರ್ಜಿಗಳನ್ನು ಭರ್ತಿ ಮಾಡಿದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ಈ ಕಾರ್ಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಬೇಕೆಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.