ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅನಧಿಕೃತ ಗೈರು

Srinivasa Murthy VN
Updated On : 5 Jun 2014, 12:46 pm

ಗುಲ್ಬರ್ಗ: ಮಹಾತ್ಮ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆಯ ಮಲ್ಲಿಕಾರ್ಜುನ ಖರ್ಗೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ದಾನಪ್ಪ ಅರಳಗುಂಡಗಿ ಜೂನ್ 2012ರಿಂದ ಜೂನ್ 2014ರ ವರೆಗೆ ಅನಧಿಕೃತವಾಗಿ ಗೈರು ಹಾಜರಾಗಿ ನಾಪತ್ತೆಯಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರಿಗಾಗಲಿ ಮತ್ತು ಆಡಳಿತ ಮಂಡಳಿಗಾಗಲಿ ತಿಳಿಸದೆ ಗೈರು ಹಾಜರಾಗಿರುವುದರಿಂದ ಸಂಸ್ಥೆಯ ಅಧ್ಯಕ್ಷ ಬೇಸರ ವ್ಯಕ್ತಪಡಿಸಿದ್ದಾರೆ. ಜೂನ್ 10ರೊಳಗೆ ಕಾಲೇಜಿಗೆ ಬಂದು ಹಾಜರಾಗದಿದ್ದಲ್ಲಿ ತಮ್ಮ ಸೇವೆಯಿಂದ ವಜಾ ಆಗಿದ್ದಾರೆಂದು ಪರಿಗಣಿಸಲಾಗುವುದು ತಿಳಿಸಿದ್ದಾರೆ.

ತೈಬಜಾರ ತೆರಿಗೆ ಪ್ರಾರಂಭಕ್ಕೆ ಆಗ್ರಹ
ಶಹಾಬಾದ್: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಳೆದ ಎರಡು ವರ್ಷದಿಂದ ತೈಬಜಾರ ತೆರಿಗೆಗಾಗಿ ಹರಾಜು ಪ್ರಕ್ರಿಯೆ ನಡೆಸದೆ ಪುರಸಭೆಗೆ ನಷ್ಟವಾಗುತ್ತಿದೆ ಎಂದು ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದು ಪಂಚಾಳ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಸರ್ಕಾರವು, ಜನರು ನೀಡುವ ತೆರಿಗೆಯಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಪ್ರಚಾರ ಮಾಡುತ್ತಿದ್ದರೂ ಪುರಸಭೆ ಎರಡು ವರ್ಷಗಳಿಂದ ತೈಬಜಾರ ತೆರಿಗೆ ಇಲ್ಲದೆ ಇರುವ ಕಾರಣ ನಷ್ಟ ಅನುಭವಿಸಿದೆ. ಈ ಬಗ್ಗೆ ಕೂಡಲೆ ಕ್ರಮ ಕೈಗೊಂಡು ತೈಬಜಾರ ತೆರಿಗೆ ಪ್ರಾರಂಭಿಸದಿದ್ದರೆ, ನಲ್ಲಿ ಹಾಗೂ ಮನೆ ತೆರಿಗೆಯನ್ನು ರದ್ದು ಗೊಳಿಸಬೇಕೆಂದು ಆಗ್ರಹಿಸಿ, ತೈಬಜಾರ ತೆರಿಗೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವದು ಎಂದು ಎಚ್ಚರಿಸಿದ್ದಾರೆ.

ಜೆಸ್ಕಾಂ ನಿರ್ಲಕ್ಷ್ಯಕ್ಕೆ ಗೂಳಿ ಬಲಿ
ಚಿತ್ತಾಪುರ: ತಾಲೂಕಿನ ಸಾತನೂರ ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ವಿದ್ಯುತ್ ಟಿಸಿಗೆ ತಡೆ ಗೋಡೆ ನಿರ್ಮಿಸದೇ ಇರುವುದರಿಂದ ಅಲ್ಲಿಂದ ಹಾದು ಹೋಗುತ್ತಿದ್ದ ಗೂಳಿಗೆ ವಿದ್ಯುತ್ ತಗುಲಿ ಮೃತಪಟ್ಟಿದೆ. ಗ್ರಾಮಕ್ಕೆ ಹೊಂದಿಕೊಂಡ ಹೊಲದಲ್ಲಿ ಟಿಸಿಯನ್ನು ನಿರ್ಮಿಸಿದ್ದು, ಇದೇ ದಾರಿಯಿಂದ ಗ್ರಾಮದವರು ಹೊಲಗಳಿಗೆ ಹೋಗುತ್ತಾರೆ. ಆದರೆ ಜೆಸ್ಕಾಂ ಹಾಗೂ ಗ್ರಾಪಂ.ನವರು ಇತ್ತ ಕಡೆ ಗಮನಹರಿಸದೇ ಇರುವುದರಿಂದ ಮೂಕ ಪ್ರಾಣಿಯೊಂದು ಬಲಿಯಾಗಬೇಕಾಯಿತು. ಇದೇ ತರಹ ಎಷ್ಟೋ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಆದರೂ ಜೆಸ್ಕಾಂನವರು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಅರೋಪಿಸಿದ್ದಾರೆ. ಈಗಲಾದರೂ ಎಚ್ಚೆತ್ತು, ಇಲ್ಲಿ ತಡೆಗೋಡೆಯನ್ನು ನಿರ್ಮಿಸಿ ಹೆಚ್ಚಿನ ಅಪಾಯ ತಪ್ಪಿಸಬೇಕೆನ್ನುತ್ತಾರೆ ಗ್ರಾಮಸ್ಥರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments