ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ

Srinivasa Murthy VN
Updated On : 1 Jul 2014, 10:41 am

ಸುರಪುರ: ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪೀರಾಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ ಮಾಡಿರುವ ಘಟನೆ ಖಂಡಿಸಿ ದಲಿತ ಪರ ಸಾಮೂಹಿಕ  ಸಂಘಟನೆಗಳು ಸೋಮವಾರ ಮಿಂಚಿನ ಮುಷ್ಕರ ನಡೆಸಿದರು. ನಂತರ ಇಲ್ಲಿಯ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕಿಡಿಗೇಡಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ತಳ್ಳಳ್ಳಿ, ಮೂರ್ತಿ ಬೊಮ್ಮನಳ್ಳಿ, ಶರಣಪ್ಪ ದಖನಿ, ಮಹೇಶ್ ಕರಡಕಲ್, ಯಲ್ಲಪ್ಪ ಚಿನ್ನಾಕಾರ್ ಮಾತನಾಡಿ, ಕೆಲ ಪಟ್ಟಭದ್ರ ಹಿತಾಸಕ್ತಿ ಮತ್ತು ಕಿಡಿಗೇಡಿಗಳು ಪದೇ ಪದೆ ಮಹಾತ್ಮರ ಪುತ್ಥಳಿಗಳಿಗೆ ಅವಮಾನಿಸಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವುಗಳಿಗೆ ಕಡಿವಾಣ  ಹಾಕಲು ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಅರುಣುಕುಮಾರ ಕುಲಕರ್ಣಿಗೆ ಮನವಿ ಪತ್ರ ಸಲ್ಲಿಸಿದರು. ಪಿಐ ಅಸ್ಲಂ ಬಾಷಾ ಇದ್ದರು. ದಲಿತ ಮುಖಂಡರಾದ ಹಣಮಂತ ಬೊಮ್ಮನಳ್ಳಿ, ಪ್ರಕಾಶ ಆಲ್ಹಾಳ, ಭೀಮರಾಯ ಸಿಂದಗೇರಿ, ನಾಗರಾಜ ವಡಿಗೇರಿ, ಸಂತೋಷ ಉಲ್ಪೆನವರು, ಮಾನಪ್ಪ ಕರಡಕಲ್, ಮಾನಪ್ಪ ಬಿಜಾಸ್ಪೂರು, ರಾಮಚಂದ್ರ ವಾಗಣಗೇರಿ, ಮಾಳಪ್ಪ ಕಿರದಳ್ಳಿ, ಹಣಮಂತ ಬೊಮ್ಮನಳ್ಳಿ, ಶೇಖರ ಜೀವಣಗಿ, ವಿಶ್ವನಾಥ ಕಟ್ಟಿಮನಿ, ಭೀಮರಾಯ ಕಡಿಮನಿ ಲಕ್ಷ್ಮೀಪುರ, ಜಗದೀಶ ಶಾಖನವರು, ಮಹೇಂದ್ರ ಬಿಲ್ಲವ್, ರಾಮಣ್ಣ ಶೆಳ್ಳಗಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement