ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಂಚೆ ವಿಮೆಯಲ್ಲಿ ಅಧಿಕ ಬೋನಸ್

Srinivasa Murthy VN
Updated On : 11 Mar 2014, 12:51 pm

ಶಹಾಬಾದ್: ಗ್ರಾಮೀಣ ಅಂಚೆ ವಿಮೆ ಭಾರತ ಸರ್ಕಾರದ ಒಂದು ಗ್ರಾಮೀಣ ವಿಮಾ ಯೋಜನೆಯಾಗಿದ್ದು, ಇದರಲ್ಲಿ ಕಡಿಮೆ ಪ್ರಿಮೀಯಂ, ಅಧಿಕ ಬೋನಸ್ ಸೌಲಭ್ಯವಿದೆ. ಇದರ ಮಾಹಿತಿಯನ್ನು ಗ್ರಾಮೀಣ ಅಂಚೆ ಮಾಸ್ತರರು ಜನತೆಗೆ ಸೂಕ್ತ ಮಾಹಿತಿ ನೀಡಬೇಕೆಂದು ಗುಲ್ಬರ್ಗ ಅಂಚೆ ಇಲಾಖೆ ಎಎಸ್‌ಪಿ ಕಿಂಡಿಮಠ ಹೇಳಿದರು.
ನಗರದ ಅಂಚೆ ಕಚೇರಿಯಲ್ಲಿ ಉಪ ವಿಭಾಗ ಮಟ್ಟದ ಗ್ರಾಮೀಣ ಅಂಚೆ ಜೀವವಿಮಾ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಈ ಸೌಲಭ್ಯವನ್ನು ಗ್ರಾಮೀಣ ಜನರಿಗೆ ತಿಳುವಳಿಕೆ ನೀಡಿದರೆ, ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ಈ ಬಗ್ಗೆ ಗ್ರಾಮೀಣ ಅಂಚೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಕರೆ ನೀಡಿದರು. ಗ್ರಾಮಸ್ಥರು ತಮ್ಮ ಸಮೀಪದ ಅಂಚೆ ಕಚೇರಿಗೆ ಸಂದರ್ಶಿಸಿ ಹೆಚ್ಚಿನ ಮಾಹಿತಿ ಪಡದುಕೊಳ್ಳಬೇಕೆಂದು ಹೇಳಿದರು.
ಮೇಳದಲ್ಲಿ ಅತಿಥಿಗಳಾಗಿ ಅಂಚೆ ನಿರೀಕ್ಷಕ ಲಕ್ಷ್ಮೀಕಾಂತ ಕೊಡ್ಲಿ, ಅಧಿಕಾರಿಗಳಾದ ಜಿ. ಕೃಷ್ಣಪ್ಪ, ಅಕ್ತರ ಅಲಿ, ಸಿದ್ದಣ್ಣ ರಾಚೋಟಿ, ಬಸವರಾಜ ದನ್ನೂರ ಉಪಸ್ಥಿತರಿದ್ದರು. ಗ್ರಾಮೀಣ ಅಂಚೆ ಇಲಾಖೆಯ ಮಾಸ್ತರರಾದ ಸುರೇಶ ಕುಲ್ಕರ್ಣಿ, ಭಗವಂತರಾಯ ಸುತಾರ, ರೇವಣಸಿದ್ದ ಗೋಟೂರ, ನಾಗಣ್ಣ ಹಿರೆಕವಲಗಾ ಇವರಿಗೆ ಸನ್ಮಾನಿಸಲಾಯಿತು.
ಬಸವರಾಜ ದಂಡೋತಿ ಪ್ರಾರ್ಥಿಸಿದರು, ಗುಂಡಪ್ಪ ನಿರೂಪಿಸಿದರು.

ಕಾದಾಟ: ಕರವೇ ಪ್ರತಿಭಟನೆ
ಯಾದಗಿರಿ:ಕುರ್ಚಿಗಾಗಿ ಕಾದಾಟ ನಡೆಸುತ್ತಿರುವ ಇಬ್ಬರು ಕೆಬಿಜೆಎನ್‌ಎಲ್ ಎಂಜೀನಿಯರ್‌ಗಳ ವರ್ಗಾವಣೆಗೆ ಆಗ್ರಹಿಸಿ ಕರವೇ (ಉತ್ತರ ಕರ್ನಾಟಕ) ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತರ ಜೀವನಾಡಿಯಾದ ಕೆಬಿಜೆಎನ್‌ಎಲ್ ಕಚೇರಿಯನ್ನು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿರುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಗದ್ದುಗೆ ಒತ್ತಾಯಿಸಿದರು. ಒಬ್ಬ ಆಧಿಕಾರಿ ಕಚೇರಿಗೆ ಬೀಗ ಜಡಿದರೆ ಮತ್ತೊಬ್ಬ ಅಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ರೈತರ ಹಿತಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಅಧಿಕಾರಿಗಳು ಸ್ವಹಿತಾಸಕ್ತಿಗಾಗಿ ಕಚ್ಚಾಟದಲ್ಲಿ ತೊಡಗಿದ್ದಾರೆ. ಕೆಬಿಜೆಎನ್‌ಎಲ್ ಇಲಾಖೆಯಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement