ಶೈಕ್ಷಣಿಕ ಪ್ರವಾಸದಿಂದ ಸಾಮಾನ್ಯ ಜ್ಞಾನ ಹೆಚ್ಚಳ
ಚಿತ್ತಾಪುರ: ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸದಿಂದ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಳವಾಗುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಹೇಳಿದರು.
ಬಿಇಒ ಕಚೇರಿ ಆವರಣದಲ್ಲಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಹೋಗುವ ಬಸ್ಗೆ ಭಾನುವಾರ ರಾತ್ರಿ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ಮಾದ್ಯಮಿಕ ಅಭಿಯಾನ ಗುಲ್ಬರ್ಗ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಈ ಕರ್ನಾಟಕ ದರ್ಶನ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಈ ಪ್ರವಾಸದಿಂದ ರಾಜ್ಯದಲ್ಲಿರುವ ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳನ್ನು ಪ್ರತ್ಯಕ್ಷವಾಗಿ ನೋಡುವುದರಿಂದ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಐದು ದಿನಗಳ ಪ್ರವಾಸದಲ್ಲಿ ಹಂಪಿ, ಹೊಸಪೇಟೆ, ಚಿತ್ರದುರ್ಗ, ಮೈಸೂರು, ಬೇಲೂರು, ಹಳೇಬೀಡು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರವಾಸ ಏರ್ಪಡಿಸಲಾಗಿದೆ. ತಾಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಂದ ಪ್ರತಿ ಶಾಲೆಗೆ ಇಬ್ಬರು ವಿದ್ಯಾರ್ಥಿಗಳಂತೆ ಒಟ್ಟು 100 ವಿದ್ಯಾರ್ಥಿಗಳು ಹಾಗೂ 8 ಜನ ಶಿಕ್ಷಕರು ಪ್ರವಾಸದಲ್ಲಿ ಭಾಗವಹಿಸಿದ್ದಾರೆಂದು ಹೇಳಿದರು. ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ದೇವಿಂದ್ರರಡ್ಡಿ ದೂಗನೂರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರ ತೇಲ್ಕರ್, ಶಂಕರ ಮೋದಲೆ, ಕಾಶಿರಾಯ ಕಲಾಲ, ರಮೇಶ ಬಟಿಗೇರಿ, ವಿವಿಧ ಶಾಲೆಯ ಮುಖ್ಯಗುರುಗಳು ಉಪಸ್ಥಿತರಿದ್ದರು.
ಯನಗುಂಟಿಗೆ ನಂದಿಕೋಲ ಮೆರವಣಿಗೆ
ಗುಲ್ಬರ್ಗ: ನಗರದ ನಿಜಾಮ ಬಜಾರ ಬಡಾವಣೆಯಲ್ಲಿರುವ ಸದಾಶಿವ ಬೆಂಕಿತಾತನವರ ಮಠದಿಂದ ಜೇವರ್ಗಿ ತಾಲೂಕಿನ ಯನಗುಂಟಿ ಗ್ರಾಮದ ಸದಾಶಿವ ಬೆಂಕಿತಾತನವರ 21ನೇ ಜಾತ್ರಾ ಮಹೋತ್ಸವ ನಿಮಿತ್ತ ಪಲ್ಲಕ್ಕಿ, ನಂದಿಕೋಲಿನ ಭವ್ಯ ಮೆರವಣಿಗೆ ನಡೆಯಿತು. ಬೆ. ಬೆಂಕಿತಾತನವರ ಪಾದುಕೆಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಗೋಳಾ (ಕೆ) ಗ್ರಾಮದ ಶಂಬುಲಿಂಗ ನಾಯಕಲ್ರವರ ಮನೆಯಲ್ಲಿ ನಂದಿಕೋಲಿನ ಪೂಜೆ, ನಡೆದು ಶ್ರೀಮಠಕ್ಕೆ ನಂದಿಕೋಲನ್ನು ಮೆರವಣಿಗೆಯಲ್ಲಿ ತರಲಾಯಿತು. ಮಹಾಮಂಗಳಾರತಿಯ ನಂತರ ಮಂಗಲಸಿಂಗ್ ತಾತನವರ ನೇತೃತ್ವದಲ್ಲಿ ಬೆಂಕಿತಾತನವರ ಪಾದುಕೆಯೊಂದಿಗೆ ಪಲ್ಲಕ್ಕಿ, ನಂದಿಕೋಲಿನ ಮೆರವಣಿಗೆ ಪ್ರಾರಂಭವಾಗಿ ಸುಮಾರು 12 ಕಿ.ಮೀ. ದೂರದ ಯನಗುಂಟಿಗೆ ಮಧ್ಯಾಹ್ನ ತಲುಪಿತು. ಮೆರವಣಿಗೆಯಲ್ಲಿ ಶ್ರೀಮಠದ ಭಕ್ತರಾದ ರೇವಣಸಿದ್ದಪ್ಪ ಮಾಣಿಕ, ಗುಂಡೇರಾವ ಮಾಣಿಕ, ಚಂದ್ರಾಮ ದೊರೆಪ್ಪಗೋಳ, ಮಾರುತಿ ಅಪ್ಪಾ, ದೇವು ಬಾಗೋಗಿ, ಬಸವರಾಜ ದಿಡ್ಡಿ, ಶರಣಪ್ಪ ಕಣ್ಮೇಶ್ವರ, ಶರಣಪ್ಪ ನಿಂಗಬೋ, ಬಸವರಾಜ, ಪರಮೇಶ್ವರ ಅಕ್ಕಾ ಪಾಲ್ಗೊಂಡಿದ್ದರು.