ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಠಿತ

Srinivasa Murthy VN
Updated On : 17 Mar 2014, 10:08 am

ಚಿಂಚೋಳಿ: ತಾಲೂಕಿನ ಗಡಿಭಾಗದ ಕುಂಚಾವರಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿವರಾಮಪುರ ಗ್ರಾಮದಲ್ಲಿ ಕಳೆದ ಜನವರಿ 21ರಂದು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 23.59 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಿಲ್ಲವೆಂದು ಕುಂಚಾವರಂ ಗ್ರಾಪಂ ಅಧ್ಯಕ್ಷೆ ಅನುಸೂಜಮ್ಮ ರವಿ ತಿಳಿಸಿದ್ದಾರೆ.
ಸರ್ಕಾರದ ಅಭಿವೃದ್ಧಿ ಕೆಲಸಗಳು ಗಡಿಭಾಗದಿಂದಲೇ ಪ್ರಾರಂಭಗೊಳಿಸಬೇಕೆಂದು ಶಾಸಕ ಡಾ.ಉಮೇಶ ಜಾಧವ್ ಕಳೆದ ಜನವರಿ 21ರಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ಮತ್ತು ಜೆಸಿಬಿ ಯಂತ್ರದ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಆದರೆ 2 ತಿಂಗಳು ಗತಿಸಿದರು ಕಾಮಗಾರಿ ಪ್ರಗತಿಯಿಲ್ಲ, ಕುಂಚಾವರಂ ಹೋಬಳಿಯಲ್ಲಿ ಅನೇಕ ಗ್ರಾಮ ತಾಂಡಗಳ ರಸ್ತೆಗಳು ಹದಗೆಟ್ಟಿವೆ, ವಾಹನಗಳ ಓಡಾಟಕ್ಕೆ ಭಾರಿ ತೊಂದರೆಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕುಂಚಾವರ ವಲಯದ ಶಹಾಪುರ- ಶಿವರಾಮಪುರ ರಾಜ್ಯ ಹೆದ್ದಾರಿ ಸಂಖ್ಯೆ 149 ಕಿಮೀ 132.35 ಯಿಂದ 197.80 ಕಿಮಿ ವರೆಗಿನ ಶಿವರಾಮಪುರ, ಶಿವರೆಡ್ಡಿಪಳ್ಳಿ, ಕುಂಚಾವರಂ, ಚಿಂದಾನೂರ, ಶಾದೀಪುರ ಮುಂತಾದ ಗ್ರಾಮಗಳ ಮೂಲಕ ಹಾದು ಹೋಗಿರುವ ಈ ರಸ್ತೆಯನ್ನು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ವಿಶ್ವಾಸ ನೀಡಿ ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಡಾ. ಉಮೇಶ ಜಾಧವ್ ಗಮನ ಹರಿಸಿಲ್ಲವೆಂದರು.
ಕಳೆದ ಮಾ.13 ರಂದು ಭಾರತ ನಿರ್ಮಾಣ ಪಾದಯಾತ್ರೆ ಸಂದರ್ಭದಲ್ಲಿ ಇಲ್ಲಿನ ಅನೇಕರು ಶಾಸಕರ ಗಮನಕ್ಕೆ ತಂದರು ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಲು ಕಾತುರರಾಗಿದ್ದಾರೆಂದು ಕುಂಚಾವರಂ ಗ್ರಾಪಂ ಅಧ್ಯಕ್ಷೆ ಅನುಸೂಜಮ್ಮ ರವಿ ತಿಳಿಸಿದ್ದಾರೆ.

ಪ್ರತಿಭಾ ಪರೀಕ್ಷೆ ರ್ಯಾಂಕ್
ಚಿತ್ತಾಪುರ: ಇತ್ತೀಚೆಗೆ ತಾಲೂಕಿನ ಮಲಘಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯೋಜಿಸಿರುವ 2013ನೇ ಸಾಲಿನ ಸಿರಿಗನ್ನಡ ಪುಟಾಣಿ ವಿಜ್ಞಾನ ಪ್ರಕಾಶನ ಪ್ರತಿಭೆ ಪರೀಕ್ಷೆಯಲ್ಲಿ ಪ್ರತಿಭಾ, ರೇಣುಕಾ, ಸಚಿನ, ಶ್ರುತಿ, ವಿಶಾಲ,  ದೇವಿಕಾ, ಸೋನಾಬಾಯಿ, ಆಕಾಶರವರು ತಾಲೂಕು ಜಿಲ್ಲಾ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದು ಅತಿಥಿಗಳಿಂದ ಬಹುಮಾನವನ್ನು ಸ್ವೀಕರಿಸಿದರು.
ಮುಖ್ಯಗುರು ವೆಂಕಟೇಶ ಚಿನ್ನೂರ ಪುಟಾಣಿ ವಿಜ್ಞಾನ ಪ್ರಕಾಶಕ ಚಿತ್ರದುರ್ಗರಿಂದ ಕನ್ನಡ ರತ್ನ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪದಕ ಪುರಸ್ಕಾರ ಪಡೆದರು. ಬೆಣ್ಣೆತೊರಾ ಯೋಜನೆ ಘಟಕ ಹೆಬ್ಬಾಳ ಸರ್ಕಾರಿ ನೌಕರ ಸಂಘ ಸಂಘ ಅಧ್ಯಕ್ಷ ಬಸವರಾಜ ಜಮಾದಾರ ಕಾರ್ಯಕ್ರಮ ಉದ್ಘಾಟಿಸಿದರು. ಸಿಆರ್‌ಪಿ ಕೋರವಾರ ಸಿದ್ದರಾಯ, ನಾಗಪ್ಪ ಬಿದಿಮನಿ, ಪ್ರವೀಣ, ಗುರುಲಿಂಗಯ್ಯ ಕರದಾಳ, ವೆಂಕಟೇಶ ಚಿನ್ನೂರ, ನಾಗಣ್ಣಾ ಹೆಬ್ಬಾಳ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement