'371ನೇ ಕಲಂ ಖರ್ಗೆ ಕೊಡುಗೆ'
ಸುರಪುರ: ಗುಲ್ಬರ್ಗ, ಬಳ್ಳಾರಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಭಾಗಕ್ಕೆ ಅಭಿವೃದ್ಧಿ ಹಾಗೂ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮಲ್ಲಿಕಾರ್ಜುನ ಖರ್ಗೆ ಅವರ ಸತತ ಪ್ರಯತ್ನದಿಂದ ಹೈ.ಕ. ಭಾಗಕ್ಕೆ 371 ಮಸೂದೆ ಜಾರಿಯಾಗಿದೆ. ಅವರ ಕೊಡುಗೆ ಅಪಾರವಾದುದು ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ತಾಲೂಕಿನ ಕಾಂಗ್ರೆಸ್ ಕಚೇರಿ ವಸಂತ ಮಹಲ್ನಲ್ಲಿ ಶನಿವಾರ ಲೋಕಸಭಾ ಚುನಾವಣಾ ಪ್ರಚಾರ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 371ನೇ ವಿಧಿಗೆ ಅವಿರತವಾಗಿ ಶ್ರಮಿಸಿದ ಹಾಗೂ ವಾಡಿ - ಗದಗ, ಮುನಿರಾಬಾದ್-ಹೈದ್ರಾಬಾದ್, ಬಳ್ಳಾರಿ- ಲಿಂಗಸ್ಗೂರು ನೂತನ ರೇಲ್ವೆ ಕಾಮಗಾರಿ ಜಾರಿಗೆ ಶ್ರಮಿಸಿದ ಖರ್ಗೆ ಅವರ ಋಣ ತೀರಿಸಲು ಕಾಂಗ್ರೆಸ್ಗೆ ತಪ್ಪದೇ ಮತ ನೀಡಬೇಕು ಎಂದು ಮನವಿ ಮಾಡಿದರು.
ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭಗವಂತ ನಾಯಕ ಅವರಿಗೆ ಮತ ನೀಡಿ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸುವಂತೆ ಕೋರಿದರು.
ಭ್ರಷ್ಟಾಚಾರ: ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭಗವಂತ ನಾಯಕ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಅಧಿಕಾರಿ ನಡೆಸಿರುವ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದಕ್ಕೆ ಈಗಾಗಲೇ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಅದೇ ರೀತಿ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಸಂಸದ ರಾಜಾ ರಂಗಪ್ಪನಾಯಕ, ಹಣಮೇಗೌಡ ಮರಕಲ್, ನಿಂಗಣ್ಣ ಚಿಂಚೋಡಿ, ಅಹ್ಮದ್ ಪಠಾಣ, ಅಬ್ದುಲ್ ಅಲೀಂ ಗೋಗಿ, ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲದಾಸ ಲಡ್ಡಾ, ತಾಪಂ ಅಧ್ಯಕ್ಷ ಶ್ರೀನಿವಾಸಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ರವಿ ಪಾಟೀಲ್, ಶಾಂತಪ್ಪ ರಾಯಚೂರು, ವೆಂಕೊಬ ಮಂಗಳೂರು, ರಾಜಾ ಮೌನೇಶ್ವರ ನಾಯಕ, ಬಸನಗೌಡ ಯಡಿಯಾಪುರ, ಶರೀಫ ಅಹ್ಮದ ಗೊಗಿ, ಅಬ್ದುಲ್ ಗಫಾರ್ ನಗನೂರಿ, ಮಹೀಬೂಬ್ ಒಚಿಟಿ, ದಾವುಲಸಾಬ್ ಚಿಟ್ಟಿವಾಲೆ, ಮಾನಪ್ಪ ಸೂಗೂರು ಇದ್ದರು.