ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜನಪದ ಕಲೆಗಳ ಉಳಿವಿಗೆ ಪ್ರಯತ್ನ ಅಗತ್ಯ: ನಾಗಪ್ಪಯ್ಯ

Srinivasa Murthy VN
Updated On : 24 Mar 2014, 11:35 am

ಚಿತ್ತಾಪುರ: ಇಂದು ಜನಪದ ಕಲೆಗಳು ನಶಿಸಿ ಹೋಗುತ್ತಿವೆ. ಅದನ್ನು ಉಳಿಸಲು ಮತ್ತು ಬೆಳೆಸುವ ಕಾರ್ಯ ಅಗತ್ಯ ಎಂದು ಅಳ್ಳೋಳ್ಳಿ ಮಹಾತ್ಮಪೀಠದ ನಾಗಪ್ಪಯ್ಯ ಸ್ವಾಮಿ ಹೇಳಿದರು.
ತಾಲೂಕಿನ ಅಳ್ಳೋಳ್ಳಿಯ ಮಹಾತ್ಮಪೀಠ ಗದ್ದಿಗಿ ಮಠದಲ್ಲಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಸುಗ್ಗಿ ಹುಗ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನಪದ ಕಲೆಗಳು ಉಳಿದಿವೆ. ಅಲ್ಲಿಯ ಕಲಾವಿದರಿಗೆ ಪೋತ್ಸಾಹ ಸಿಗದೆ ಅವರು ಕಲೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದರು.
ರಾಜ್ಯ ಪ್ರಶಸ್ತಿ ವಿಜೇತ ಪುಂಡಲಿಕ ಪುಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಸೂಗಯ್ಯ ಹಿರೇಮಠ ಮಾತನಾಡಿ, ಶ್ರಮದಿಂದ ಜನಪದ ಸಾಹಿತ್ಯ ರಚನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಅಲ್ಲಿಯ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳು ಮಾಡುವಾಗ ಆಯಾಸವಾಗಬಾರದು. ಅನೇಕ ಜನಪದ ಹಾಡುಗಳನ್ನು ಹಾಡಿ ತಮ್ಮ ಕೆಲಸಗಳನ್ನು ಮುಗಿಸುತ್ತಿದ್ದರು. ಜನಪದ ಸಾಹಿತ್ಯದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.
ಗರತಿಯ ಹಾಡುಗಳ ಕುರಿತು ಡಾ. ಚಂದ್ರಕಲಾ ಬಿದರಿ ಉಪನ್ಯಾಸ ನೀಡಿದರು. ಅಳ್ಳೋಳ್ಳಿ ಅಗಸಿಯಿಂದ ಗದ್ದುಗೆ ಮಠದವರೆಗೆ ಅನೇಕ ಜನಪದ ತಂಡಗಳು ಮೆರವಣಿಗೆ ಮೂಲಕ ಗದ್ದುಗೆ ಮಠಕ್ಕೆ ತಲುಪಿತು. ರಾಜ್ಯದ ಮಂಡ್ಯ, ಉಡಪಿ, ಬಳ್ಳಾರಿ, ಗುಲ್ಬರ್ಗ, ಚಿತ್ತಾಪುರ, ವಿವಿಧಡೆಯ ಕಲಾ ತಂಡಗಳು ಭಾಗವಹಿಸಿ, ಕಂಗೀಲು ನೃತ್ಯ, ಗೀಗೀಪದ, ಸುಗ್ಗಿಹಾಡು, ಪುರವಂತರ, ಹಗಲುವೇಶದ ನೃತ್ಯಗಳು ಜನಮನ ಸೆಳೆದವು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೇಶ್ವರಿ ಶಿವಕೇರಿ, ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಎಸ್.ಎಂ. ಭಕ್ತ ಕುಂಬಾರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement