ಯಲಗೋಡ ಶಾಲೆಯಲ್ಲಿ ಸ್ನೇಹ ಸಮ್ಮೇಳನ
ಜೇವರ್ಗಿ:ತಾಲೂಕಿನ ಯಲಗೋಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಜೆಸ್ಕಾಂನ ನಿವೃತ್ತ ಅಭಿಯಂತರ ಚಂದ್ರಶೇಖರ ಪಡಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಲಗೋಡ ಪ್ರಭುದೇವರ ಮಠದಗುರುಲಿಂಗ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುಖ್ಯಶಿಕ್ಷಕ ಶಾಂತಮೂರ್ತಿ ಗೊಂಬಿಮಠ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಚಿದಾನಂದ, ಗಿರೀಶ ರಾಠೋಡ ಮಾತನಾಡಿದರು. ಯು.ಬಿ.ಹಿರೇಮಠ, ದುಂಡಪ್ಪಗೌಡ ಪಾಟೀಲ್, ಅವ್ವಣ್ಣಗೌಡ ಪಾಟೀಲ್, ಸಿದ್ದಣ್ಣಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷ ಬಾಗಪ್ಪ ಬಿಲ್ಲಾಡ, ಶರಣಗೌಡ ಪಾಟೀಲ್ ಇತರರು ಇದ್ದರು.
ಕಳೆದ ಮೂರು ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಡಶೆಟ್ಟಿ ವಾರ್ಷಿಕ 35 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಿದ್ದಾರೆ.
ಕೊಲೆ ಪ್ರಕರಣ: ನಾಲ್ವರ ಬಂಧನ
ಶಹಾಪುರ: ಕಳೆದ ಡಿಸೆಂಬರ್ 25ರಂದು ತನ್ನ ಹೆಂಡತಿಯನ್ನು ಕೊಂದು ಪಕ್ಕದ ಹಳ್ಳದಲ್ಲಿ ಮುಚ್ಚಿಟ್ಟಿದ್ದ ಘಟನೆ ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ನಡೆದಿತ್ತು. ಫೆ. 25ರಂದು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಗಂಡನನ್ನು ಬಂಧಿಸಿದ ಸ್ಥಳೀಯ ಪೊಲೀಸರು ಮಾಹಿತಿ ಪಡೆದು ಹೂತಿಟ್ಟ ಶವವನ್ನು ಹಳ್ಳದಿಂದ ತನಿಖೆಗಾಗಿ ಹೊರಗೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ ಗಂಡ ಶಿವಶರಣಪ್ಪ ತಂದೆ ತಿಪ್ಪಣ್ಣನಿಗೆ ಸಾಕ್ಷಿಗಳನ್ನು ನಾಶಪಡಿಸಲು ಶವ ಹೂಳಿಡಲು ಸಹಕಾರ ಮಾಡಿದ ಆರೋಪದ ಮೇಲೆ ತಲೆಮರೆಸಿಕೊಂಡಿದ್ದ ಉಳಿದ ನಾಲ್ವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.