ಗ್ರಾಹಕರ ಪರಿಹಾರ ಆಯೋಗದ ಸಂಚಾರಿ ಪೀಠ ಸ್ಥಾಪಿಸಿ: ಮನವಿ
ಗುಲ್ಬರ್ಗ: ಮಹಾತ್ಮ ಗಾಂಧಿ ಗ್ರಾಹಕರ ಹಿತರಕ್ಷಣಾ ವೇದಿಕೆಯಡಿ ಗುಲ್ಬರ್ಗ ನಗರದಲ್ಲಿ ಕರ್ನಾಟಕ ಗ್ರಾಹಕರ ಪರಿಹಾರ ಆಯೋಗದ ಸಂಚಾರಿ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ವೇದಿಕೆ ಕರ್ನಾಟಕ ಗ್ರಾಹಕರ ಪರಿಹಾರ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದೆ. ಜಿಲ್ಲಾ ಗ್ರಾಹಕರ ವೇದಿಕೆಗಳು ತಮ್ಮಲ್ಲಿ ದಾಖಲಾದ ಗ್ರಾಹಕರ ವ್ಯಾಜ್ಯಗಳನ್ನು ಇತ್ಯರ್ಥವಾದ ಆದೇಶಗಳು ಗ್ರಾಹಕರ ವಿರುದ್ಧ ಬಂದಾಗ ಮೇಲ್ಮನವಿಗಾಗಿ ಗ್ರಾಹಕರು ಅತಿ ದೂರದಲ್ಲಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಹಾಜರಾಗಿ ನ್ಯಾಯಕ್ಕೆ ಹೋರಾಟ ಮಾಡಬೇಕಾಗುತ್ತದೆ. ಪುನಾ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಸಮಸ್ಯೆಯಾದಾಗ ಮೇಲ್ಮನವಿಗಾಗಿ ದೆಹಲಿಗೆ ತೆರಳಬೇಕಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರೀಯ, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸಂಚಾರಿ ಪೀಠ ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಈ ಭಾಗದ ಲಕ್ಷಾಂತರ ಗ್ರಾಹಕರ ಹಿತದೃಷ್ಟಿಯಿಂದ ಈಗಾಗಲೇ ಗ್ರಾಹಕರ ನ್ಯಾಯಾಲಯಕ್ಕಾಗಿ ನಿರ್ಮಾಣಗೊಂಡ 1 ಎಕರೆ ಭೂಮಿಯಲ್ಲಿಯೇ ಸಂಚಾರಿ ಪೀಠ ಸ್ಥಾಪಿಸಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವೈಜನಾಥ ಎಸ್.ಝಳಕಿ ತಿಳಿಸಿದ್ದಾರೆ.