ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಿಂದಿ ಭಾಷಾ ಸಮ್ಮೇಳನ ಇಂದಿನಿಂದ

Srinivasa Murthy VN
Updated On : 25 Mar 2014, 11:05 am

ಗುಲ್ಬರ್ಗ: ಮಹಿಳೆ ಮತ್ತು ಪಾಲ್ಗೊಳ್ಳುವಿಕೆ ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು  ಮಾ. 25ರಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಹಿಂದಿ ವಿಭಾಗ, ಕೇಂದ್ರೀಯ ಭಾಷಾ ಸಂಸ್ಥೆ ಸಹಯೋಗದೊಂದಿಗೆ ಹಿಂದಿ ಭಾಷೆಯ  ಈ ವಿಚಾರ ಸಂಕಿರಣ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗಗಿಂದ ಮಹಿಳೆಯರ ಪಾಲ್ಗೊಳ್ಳುವಿಕೆ ಕುರಿತು ಮುದ್ರಿಸಲಾಗುತ್ತಿರುವ ಪುಸ್ತಕವನ್ನೂ ಬಿಡುಗಡೆ ಮಾಡಲಾಗುತ್ತಿದೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಇ. ಟಿ. ಪುಟ್ಟಯ್ಯ ಅವರು, ಮಂಗಳವಾರ ಬೆಳಗ್ಗೆ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಖ್ಯಾತ ಬರಹಗಾರ್ತಿ, ನವದೆಹಲಿಯ ಅರ್ಚನಾ ವರ್ಮಾ,  ಪತ್ರಕರ್ತರಾದ ಓಂ ಧ್ವನಿ, ಕುವೆಂಪು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಮಲ್ಲಿಕಾ ಘಂಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಬಿಹಾರದ ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯದ ಸಮ ಕುಲಪತಿ ನೀಲಿಮಾ ಸಿನ್ಹಾ ಅಧ್ಯಕ್ಷತೆ ವಹಿಸಲಿದ್ದಾರೆ.
ಸುಪ್ರಸಿದ್ದ ಲೇಖಕ ನವದೆಹಲಿಯ ಮೋಹನದಾಸ, ಪ್ರೊ. ಹೇಮಲತಾ, ಮಹೇಶ್ವರ, ಸುಜತಾ ಪರಮಿತಾ, ಗೋವಾದ ಜಯಶ್ರೀರಾಯ್, ಗುಲ್ಬರ್ಗ ವಿವಿಯ ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ.ಪರಿಮಳಾ ಅಂಬೇಕರ್, ಸುಪ್ರಿಂಕೋರ್ಟ್‌ನ ಅರವಿಂದ ಜೈನ್, ಬಿಹಾರದ ಪತ್ರಕರ್ತೆ ನಿವೇದಿತಾ, ಬೆಂಗಳೂರಿನ ವೀಣಾ ಬನ್ನಂಜೆ, ಗುಲ್ಬರ್ಗ ವಿವಿಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಮಾಯಾ ದೇಗಾಂವಕರ್, ಅಸ್ಸಾಂ ಶೈಲೇಂದ್ರ ಸಿಂಗ್ ಸೇರಿದಂತೆ ಅನೇಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement