ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಬಿಇಒ
ಚಿಂಚೋಳಿ: ತಾಲೂಕಿನಲ್ಲಿ ಮಾ.28ರಿಂದ ಪ್ರಾರಂಭಗೊಳ್ಳಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 2698 ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾವ ನಾಟೀಕಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ (ಬಾಲಕರ), ಸರ್ಕಾರಿ ಪ್ರೌಢಶಾಲೆ ಕನ್ಯಾ ಸುಲೇಪೇಟ, ಬಿ.ಬಿ. ಸಜ್ಜನಶೆಟ್ಟಿ ಅನುದಾನಿತ ಪ್ರೌಢಶಾಲೆ ಸುಲೇಪೇಟ ಒಟ್ಟು 3 ಪರೀಕ್ಷಾ ಕೇಂದ್ರಗಳು, ಸರ್ಕಾರಿ ಪ್ರೌಢಶಾಲೆ ಐನೋಳಿ, ಸರ್ಕಾರಿ ಪ್ರೌಢಶಾಲೆ ರಟಕಲ್, ಸರ್ಕಾರಿ ಪ್ರೌಢಶಾಲೆ ಚಂದನಕೇರಾ, ಸರ್ಕಾರಿ ಪ್ರೌಢಶಾಲೆ ಚಿಮ್ಮನ ಚೋಡ ಮತ್ತು ಚಿಂಚೋಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ(ಬಾಲಕರ) ಕಾಲೇಜು ಚಂದಾಪುರ ಹಾಗೂ ಸರ್ಕಾರಿ ಪದವಿ ಪೂರ್ವ ಕನ್ಯಾ ಕಾಲೇಜ್ 2 ಪರೀಕ್ಷೆ ಕೇಂದ್ರಗಳಿವೆ. ತಾಲೂಕಿನಲ್ಲಿ ಒಟ್ಟು 9 ಪರೀಕ್ಷೆ ಕೇಂದ್ರಗಳಿವೆ ಎಂದರು.
ಚಿಂಚೋಳಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬಾಲಕ- ಬಾಲಕಿಯರು ಸೇರಿದಂತೆ ಒಟ್ಟು 495, ಸರ್ಕಾರಿ ಪದವಿ ಪೂರ್ವ ಕನ್ಯಾ ಕಾಲೇಜ್- 321, ಸರ್ಕಾರಿ ಪದವಿ ಪೂರ್ವ ಕಾಲೇಜ್ (ಬಾಲಕರು) ಸುಲೇಪೇಟ-283, ಸರ್ಕಾರಿ ಪ್ರೌಢಶಾಲೆ ಕನ್ಯಾ ಸುಲೇಪೇಟ-270, ಸರ್ಕಾರಿ ಪ್ರೌಢಶಾಲೆ ಚಿಮ್ಮನಚೋಡ-312, ಸರ್ಕಾರಿ ಪ್ರೌಢಶಾಲೆ ಐನೋಳಿ- 294, ಸರ್ಕಾರಿ ಪ್ರೌಢಶಾಲೆ ರಟಕಲ್-208, ಬಿ.ಬಿ. ಸಜ್ಜನಶೆಟ್ಟಿ ಅನುದಾನಿತ ಪ್ರೌಢಶಾಲೆ ಸುಲೇಪೇಟ-288 ಮತ್ತು ಸರ್ಕಾರಿ ಪ್ರೌಢಶಾಲೆ ಚಂದನಕೇರಾ-227 ವಿದ್ಯಾರ್ಥಿಗಳಿದ್ದಾರೆ.
116 ಕೊಠಡಿ ಮೇಲ್ವಿಚಾರಕರು, ಸಂಚಾರಿ ಜಾಗೃತ ದಳ-9, ಸ್ಥಾನಿಕ ಜಾಗೃತ ದಳ- 18, ಪರೀಕ್ಷ ಸಹಾಯಕರು-19, ರೂಟ್ ಆಫೀಸರ್-9 ಹಾಗೂ ಸಹಾಯಕರು-18 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಬಿಇಒ ಹಣಮಂತರಾವ ನಾಟೀಕಾರ ತಿಳಿಸಿದ್ದಾರೆ.
ತಾಲೂಕಿನ ಐನಾಪುರ, ಐನೋಳಿ, ಭುಯ್ಯಾರ (ಕೆ) ಚೆಂಗಟಾ, ಚಂದನಕೇರಾ, ಚಿಮ್ಮನಚೋಡ, ಚಿಂಚೋಳಿ, ದೇಗಲಮಡಿ, ಗಡಿಕೇಶ್ವರ, ಕಲ್ಲೂರರೋಡ, ಕುಂಚಾವರಂ, ಕೆರೋಳಿ, ಕೋಡ್ಲಿ, ನಾಗಾಇದಲಾಯಿ, ರಟಕಲ್, ರುಮ್ಮನಗೂಡ, ರುದನೂರ, ಕನಕಪುರ, ರಾಯಕೋಡ, ಗರಗಪಳ್ಳಿ, ಸುಲೇಪೇಟ, ಹಸರಗುಂಡಗಿ, ಗಣಾಪುರ, ಶಾದೀಪುರ, ಸಾಲೇಬೀರನಳ್ಳಿ, ಹೂವಿನಬಾವಿ, ಮೊರಾರ್ಜಿ ವಸತಿ ಶಾಲೆ ನಿಡಗುಂದಾ ಸೇರಿದಂತೆ ಒಟ್ಟು 30 ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಖಾಸಗಿ ಶಾಲೆ ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆಂದು ಬಿಇಒ ಹಣಮಂತರಾವ ನಾಟೀಕಾರ ತಿಳಿಸಿದ್ದಾರೆ.